'ಕಣ್ಣಲೇ ಕಣ್ಣಲೇ ಪ್ರೀತಿಯಾ ಹೇಳಲೇ' ಎಂದು ಹೇಳುತ್ತಾ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿದ ನಟಿ ಆರ್ತಿ ಛಾಬ್ರಿಯಾ ತನ್ನ ಬಹುಕಾಲದ ಗೆಳೆಯನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
'ಸಂತ' ಚಿತ್ರದ ಮೂಲಕ ಹಾರ್ಟ್ ಅನ್ನೋ ಅಡ್ಡಾದಲ್ಲಿ ಲವ್ ಎಂಬ ಲಾಂಗ್ ಹಿಡಿದು ನನ್ನನ್ನ ಅಟ್ಯಾಕು ಮಾಡೋ ಶಿವ ಶಿವ ಎಂದ ಪಂಜಾಬಿ ನಟಿ ತನ್ನ ಬಾಯ್‌ಫ್ರೆಂಡ್ ವಿಶಾರದ್ ಜೊತೆ ಮುಂಬೈನಲ್ಲಿ ಸಪ್ತಪದಿ ತುಳಿದಿದ್ದಾರೆ.
ಮಾರಿಟ್ಸ್ ಮೂಲದ ವಿಶಾರದ್ ಅಂತರಾಷ್ಟ್ರೀಯ ತೆರಿಗೆ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದು, ಇವರಿಬ್ಬರೂ ಮಾರ್ಚ್ ತಿಂಗಳಲ್ಲಿ ನಿಶ್ಚಿತಾರ್ಥ ನಡೆದಿತ್ತು. ಜೂನ್ 24ರಂದು ಮುಂಬೈನಲ್ಲಿ ರಾಯಲ್ ವೆಡ್ಡಿಂಗ್ ನಡೆದಿದೆ. ಮದುವೆ ವಿಚಾರ ಹಾಗೂ ಫೋಟೋಸ್‌ಗಳನ್ನು ಆರ್ತಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಮದುವೆ, ಲೈಫ್‌ಪಾರ್ಟನರ್ ಬಗ್ಗೆ ನಂಬಿಕೆ ಇಲ್ಲದ ಆರ್ತಿಗೆ ಕುಟುಂಬಸ್ಥರು ಹೇಳುತ್ತಿದ್ದರಂತೆ. Mr.Right ಒಂದಲ್ಲಾ ಒಂದು ದಿನ ನಿನ್ನ ಬಾಳಲ್ಲಿ ಬರುವರು ಎಂದು ಅದನ್ನು ವಿಶಾರದ್ ಸಿಕ್ಕಾಗ ನಂಬ ಬೇಕಾಯಿತು ಎಂದು ಮಾಧ್ಯಮವೊಂದರಲ್ಲಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಮದುವೆಯಾದ ನಂತರ ಮಾರಿಟ್ಸ್‌ನಿಂದ ಭಾರತಕ್ಕೆ ವಿಶಾರದ್ ಶಿಫ್ಟ್ ಆಗುತ್ತಿದ್ದು, ಆರ್ತಿ ನಟನೆಯನ್ನು ಮುಂದುವರೆಸುವುದಾಗಿ ನಿರ್ಧಾರ ಮಾಡಿದ್ದಾರೆ.
ಇನ್ನು 'ಅಹಂ ಪ್ರೇಮಾಸ್ಮಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಆರ್ತಿ 'ಸಂತ ' ಹಾಗೂ 'ರಜನಿ' ಚಿತ್ರದಲ್ಲಿ ನಟಿಸಿದ್ದಾರೆ, ಸದ್ಯಕ್ಕೆ ಹಿಂದಿ ಧಾರಾವಾಹಿಗಳಲ್ಲಿ ಹಾಗೂ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.