ಪ್ರತಿಭಟನೆಯಲ್ಲಿ ಭಾಗವಹಿಸಿ, ಘೋಷಣೆ ಕೂಗಿದ ತಕ್ಷಣ ನಮ್ಮ ಕೆಲಸ ಮುಗಿಯುವುದಿಲ್ಲ.

ಬೆಂಗಳೂರು(ಅ.16): ರಾಕಿಂಗ್ ಸ್ಟಾರ್ ಯಶ್'ಗೆ ಮಾಧ್ಯಮದವರ ಬಗ್ಗೆ ಸಿಟ್ಟಿನ ಮಾತುಗಳನ್ನ ಹಾಡಿದ್ದಾರೆ.ಕಾವೇರಿ ಗಲಾಟೆ ಹಾಗೂ ಮಂಡ್ಯ ಹೊತ್ತಿ ಉರಿಯುತ್ತಿದ್ದಾಗ ಟೈಮಲ್ಲಿ ಯಶ್ ಮಾತ್ರ ಅಮೇರಿಕಾದಲ್ಲಿದ್ರು ಎಂದು ಮಾಧ್ಯಮದವರ ಬಿತ್ತರಿಸಿದ್ದು ಯಶ್‍ಗೆ ಸಿಟ್ಟು ತರಿಸಿದೆ. ಅದೇ ಸಿಟ್ಟಿನಲ್ಲಿ ಯಶ್ ಮಾಧ್ಯಮದವರಿಗೆ ಚಾಲೆಂಜ್ ಹಾಕಿದ್ದಾರೆ.

'ಯಾವುದೇ ಚಾನಲ್ ಆಗಲಿ, ಪ್ರೈಮ್ ಟೈಮ್‍ನಲ್ಲಿ ಕೇವಲ ರೈತರಿಗೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ಮಾಡುವುದಾದರೆ, ಅದರಲ್ಲಿ ಉಚಿತವಾಗಿ ಭಾಗವಹಿಸುತ್ತೇನೆ' ಎಂದು ಓಪನ್ ಚಾಲೆಂಜ್ ಹಾಕಿದ್ದಾರೆ ಯಶ್. ಪ್ರತಿಭಟನೆಗಳಾದ ಸಂದರ್ಭದಲ್ಲಿ ಯಾಕೆ ಎಳೆದು ತರುತ್ತಾರೋ ಗೊತ್ತಿಲ್ಲ. ಪ್ರತಿಭಟನೆ ಮಾಡಿದರಷ್ಟೇ ನಾವು ರೈತರ ಪರ ಎಂಬ ಮಾತು ತಪ್ಪು. ಪ್ರತಿಭಟನೆಯಲ್ಲಿ ಭಾಗವಹಿಸಿ, ಘೋಷಣೆ ಕೂಗಿದ ತಕ್ಷಣ ನಮ್ಮ ಕೆಲಸ ಮುಗಿಯುವುದಿಲ್ಲ. ರೈತರ ಸಮಸ್ಯೆ ಸಾಕಷ್ಟಿದೆ ಅಂತಾ ಯಶ್ ಮಾಧ್ಯಮರ ಪರ ಗುಡುಗಿದ್ದಾರೆ.