ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಸಿನಿಮಾ ಯಾವಾಗ? ಉತ್ತರ ಸುಲಭಕ್ಕೆ ಸಿಗುವುದಿಲ್ಲ. ‘ಕೋಟಿಗೊಬ್ಬ 3’ ನಿರ್ದೇಶಕ ಯಾರು? ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಕೋಟಿಗೊಬ್ಬ 3 ನಿರ್ದೇಶಿಸುವ ಅದೃಷ್ಟ ಸಿಕ್ಕಿದ್ದು ಕಾರ್ತಿಕ್ ಅವರಿಗೆ.

ಬೆಂಗಳೂರು (ಜ.08): ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಸಿನಿಮಾ ಯಾವಾಗ? ಉತ್ತರ ಸುಲಭಕ್ಕೆ ಸಿಗುವುದಿಲ್ಲ. ‘ಕೋಟಿಗೊಬ್ಬ 3’ ನಿರ್ದೇಶಕ ಯಾರು? ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಕೋಟಿಗೊಬ್ಬ 3 ನಿರ್ದೇಶಿಸುವ ಅದೃಷ್ಟ ಸಿಕ್ಕಿದ್ದು ಕಾರ್ತಿಕ್ ಅವರಿಗೆ.

ಆ ಸದ್ಯಕ್ಕೆ ಪ್ರೇಮ್ ನಿರ್ದೇಶನದ, ಸಿ ಆರ್ ಮನೋಹರ್ ನಿರ್ಮಾಣದ ‘ದಿ ವಿಲನ್’ ಚಿತ್ರೀಕರಣ ಯಾವಾಗ ಮುಗಿಯುತ್ತದೆ ಎಂಬುದನ್ನು ಒಂದಿಷ್ಟು ನಿರ್ದೇಶಕರು ಮಾತ್ರವಲ್ಲ, ಸ್ವತಃ ಸುದೀಪ್ ಅವರೇ ಕಾಯುತ್ತಿದ್ದಾರೆ. ‘ದಿ ವಿಲನ್’ ನಂತರ ಹೆಬ್ಬುಲಿ ಕೃಷ್ಣ ಒಂದು ಕಡೆ ‘ಪೈಲ್ವಾನ್’ ಚಿತ್ರಕತೆ ರೆಡಿ ಮಾಡಿಕೊಂಡು ಕೂತಿದ್ದಾರೆ. ಮತ್ತೊಂದು ಕಡೆ ನಿರ್ಮಾಪಕ ಸೂರಪ್ಪ ಬಾಬು ಅವರು ‘ಕೋಟಿಗೊಬ್ಬ 3’ ಚಿತ್ರದ ಕತೆ, ಕಾಲ್ ಶೀಟ್ ಕೈಯಲ್ಲಿಡಿದು ಕೂತಿದ್ದಾರೆ. ಆ ಚಿತ್ರದ ನಿರ್ದೇಶನದ ಹೊಣೆ ಕಾರ್ತಿಕ್ ಅವರದು. ಕಾರ್ತಿಕ್‌'ಗೆ ಇದು ಮೊದಲ ಸಿನಿಮಾ. ಒಳ್ಳೆಯ ಕತೆ ರೆಡಿ ಮಾಡಿಕೊಂಡಿದ್ದ ಕಾರ್ತಿಕ್, ಆ ಕತೆಯನ್ನು ಸುದೀಪ್‌ಗೆ ಹೇಳಿದ್ದಾರೆ. ಕತೆ ಹೇಳಿದ ರೀತಿ ಸುದೀಪ್‌'ಗೆ ಇಷ್ಟವಾಗಿದೆ. ಹಾಗಾಗಿ ಕಾರ್ತಿಕ್'ಗೆ ಅವಕಾಶ ಕೊಟ್ಟಿದ್ದಾರೆ.

‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದ ನಿರ್ದೇಶಕ ಗುರುದತ್ತ ಗಾಣಿಗ ನಂತರ ಮತ್ತೊಬ್ಬ ಹೊಸ ನಿರ್ದೇಶಕನಿಗೆ ಸುದೀಪ್ ನಿರ್ದೇಶಿಸುವ ಚಾನ್ಸ್ ಲಭ್ಯವಾಗಿದೆ. ಸೂರಪ್ಪ ಬಾಬು ಈ ವಿಷಯವನ್ನು ಖಚಿತಗೊಳಿಸಿದ್ದಾರೆ. ಸದ್ಯ ಕಾರ್ತಿಕ್ ಚಿತ್ರದ ಕತೆ, ಚಿತ್ರಕತೆ ಜತೆಗೆ ಸಂಭಾಷಣೆ ಕೂಡ ಅಂತಿಮ ಮಾಡಿಕೊಂಡು ಕಾಯುತ್ತಿದ್ದಾರೆ. ಸುದೀಪ್ ಅವರು ಕೂಡ ‘ಪೈಲ್ವಾನ್’ ಹಾಗೂ ‘ಕೋಟಿಗೊಬ್ಬ 3’ ಚಿತ್ರಗಳನ್ನು ಏಕಕಾಲಕ್ಕೆ ಆರಂಭಿಸುವುದಾಗಿ ಅಧಿಕೃತವಾಗಿ ಹೇಳಿದ್ದಾರೆ. ಆದರೆ, ‘ದಿ ವಿಲನ್’ ಚಿತ್ರದ ಶೂಟಿಂಗ್ ಯಾವಾಗ ಮುಕ್ತಾಯವಾಗುತ್ತದೆ ಎಂಬುದು ಮಾತ್ರ ಸ್ಪಷ್ಟತೆ ಇಲ್ಲ.