ಬೆಂಗಳೂರು (ಸೆ. 26): ಮಜಾ ಟಾಕೀಸ್ ಖ್ಯಾತಿಯ ಸೃಜನ್ ಲೋಕೇಶ್ ಮೈಸೂರು ಮೃಗಾಲಯದಿಂದ ಹುಲಿಯನ್ನು ದತ್ತು ತೆಗೆದುಕೊಂಡಿದ್ದಾರೆ. 

ಇತ್ತೀಚಿಗೆ ಸೃಜನ್ ಲೋಕೇಶ್ ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ 1 ಲಕ್ಷ ರೂ ಪಾವತಿಸಿ, ಒಂದು ವರ್ಷದ ಅವಧಿಗೆ ಹುಲಿಯನ್ನು ದತ್ತು ತೆಗೆದುಕೊಂಡಿದ್ದಾರೆ.  

ಆನೆ ಮತ್ತು ಹುಲಿಯನ್ನು ದತ್ತು ಪಡೆದ ಸಾರಥಿ

ಕೆಲ ದಿನಗಳ ಹಿಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೃಗಾಲಯದಿಂದ ಹುಲಿಯನ್ನು ದತ್ತು ತೆಗೆದುಕೊಂಡಿದ್ದರು. ಇದರಿಂದ ಸ್ಪೂರ್ತಿಗೊಂಡ ಸೃಜನ್ ತಾವೂ ಈ ಕೆಲಸಕ್ಕೆ ಮುಂದಾಗಿದ್ದಾರೆ.