ಜೂನ್‌ 20ರಂದು ಸತೀಶ್‌ ಹುಟ್ಟುಹಬ್ಬ. ಅಂದು ಚಿತ್ರಕ್ಕೆ ಪೂಜೆ ಮಾಡುವ ಮೂಲಕ ಚಾಲನೆ ಕೊಡುವ ತಯಾರಿ ಮಾಡಿಕೊಳ್ಳುತ್ತಿದ್ದಾರೆ ನಿರ್ದೇಶಕರು. ‘ಇದು ರೆಟ್ರೋ ಸ್ಟೈಲಿನಲ್ಲಿ ಸಾಗುವ ಕ್ರೈಮ್‌ ಜಾನರ್‌ ಸಿನಿಮಾ. ಪಕ್ಕಾ ಮಾಸ್‌ ಕತೆ. ವಿಲನಿಸಂ ಹೆಜ್ಜಾಗಿ ಇರುವ ಚಿತ್ರವಿದು. ಮೊದಲ ಬಾರಿಗೆ ಸತೀಶ್‌ ರೆಟ್ರೋ ನೆರಳಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ಬೆಲ್‌ ಬಾಟಂ’ ರೀತಿಯಲ್ಲಿ ಈ ಸಿನಿಮಾ ಇದೆ’ ಎನ್ನುತ್ತಾರೆ ನಿರ್ದೇಶಕ ದೇವರಾಜ್‌ ಪೂಜಾರಿ.

ಚಿತ್ರ ವಿಮರ್ಶೆ: ಯೋಗ್ಯರಿಗೆ ಮನೋರಂಜನಾ ಭಾಗ್ಯ

ಅರ್ಜುನ್‌ ಜನ್ಯ ಸಂಗೀತ, ಮಫ್ತಿ ನವೀನ್‌ ಕುಮಾರ್‌ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಟಗರು ಮಾಸ್ತಿ ಅವರು ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ. ಪರಂಪರ ಸ್ಟುಡಿಯೋ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ.