ಟಾಲಿವುಡ್‌ ಸ್ಟಾರ್ ನಟ ಹಾಗೂ ನಿರ್ದೇಶಕ ಅಲ್ಲು ಬಾಬಿ ಹೈದರಾಬಾದ್‌ನಲ್ಲಿ ಮುಂಬೈ ಹುಡುಗಿ ನೀಲಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದಾರೆ. ಈ ವಿಚಾರವನ್ನು ಸ್ವತಃ ಅಲ್ಲು ಬಾಬಿ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

'Folks i am Married!!! ನನ್ನ ಜೀವನದ ಹೊಸ ಅಧ್ಯಾಯ ಶುರುವಾಗಿದೆ. ಆಶೀರ್ವದಿಸಿ! ನಾನು ಈ ಹಿಂದೆ 2005 ರಲ್ಲಿ ಮದುವೆಯಾಗಿದ್ದು ಅದರಿಂದ 2016 ರಲ್ಲಿ ಮುಕ್ತಿ ಸಿಕ್ಕಿತ್ತು. ದೇವರ ದಯೆಯಿಂದ ಜೀವನದಲ್ಲಿ ಮುಂದೆ ಹೋಗುವುದನ್ನು ಕಲಿತ್ತಿದ್ದೇನೆ ಹಾಗೂ ಖುಷಿಯಾಗಿದ್ದೇನೆ. ಕುಟುಂಬಸ್ಥರ ಆಶೀರ್ವಾದ ಹಾಗೂ ಅಪ್ಪಣೆಯೊಂದಿಗೆ ಮುಂದುವರೆದಿರುವೇ ' ಎಂದು ಮದುವೆ ಫೋಟೋದೊಂದಿಗೆ ಬರೆದುಕೊಂಡಿದ್ದಾರೆ.

 

ಅಲ್ಲು ಬಾಬೀ ಟಾಲಿವುಡ್‌ ಖ್ಯಾತ ನಿರ್ದೇಶಕ ಹಾಗೂ ಅವರ ಪತ್ನಿ ನೀಲಾ ಶಾಶ್ ಯೋಗ ನಿರ್ದೇಶಕಿ. ಅಲ್ಲು ಬಾಬಿ ಈ ಹಿಂದೆ ನೀಲಿಮ್ಮ ಬಂಡಿ ಜೊತೆ ಮದುವೆಯಾಗಿದ್ದು ಅದು ಮುರಿದು ಬಿದ್ದಿದೆ. ಇವರಿಗೆ 10 ವರ್ಷದ ಅಲ್ಲು ಅನ್ವಿತಾ ಎಂಬ ಮಗಳಿದ್ದಾಳೆ.