Asianet Suvarna News Asianet Suvarna News

ಸೌಂದರ್ಯ ನನಗೆ ತುಂಬಾ ಕ್ಲೋಸ್, ಸತ್ತಾಗ ಅಳಬೇಕೆಂಬ ನಿಯಮವಿಲ್ಲ: ಜಗಪತಿ ಬಾಬು

ಜಗಪತಿ ಬಾಬು ಮತ್ತು ಸೌಂದರ್ಯ ಇಬ್ಬರು ಅತ್ಯಾಪ್ತರು ಎಂದು ಬಣ್ಣದ ಲೋಕ ಹೇಳುತ್ತದೆ. ಜಗಪತಿ ಬಾಬು ಜೊತೆಯಲ್ಲಿ ಸೌಂದರ್ಯ ನಟಿಸಿದ್ದಾರೆ. ಸೌಂದರ್ಯ ಸಾವಿನ ಕುರಿತು ಜಗಪತಿ ಬಾಬು ಮಾತನಾಡಿರುವ ವಿಡಿಯೋ ಕ್ಲಿಪ್ ವೈರಲ್ ಆಗುತ್ತಿದೆ. ಈ ಸಂದರ್ಶನದಲ್ಲಿ ನಿರೂಪಕ, ನಿಮ್ಮ ಆತ್ಮೀಯ ಸ್ನೇಹಿತೆ ಸೌಂದರ್ಯ ಮೃತರಾದಾಗ ನಿಮ್ಮ ಮನಸ್ಥಿತಿ ಹೇಗಿತ್ತು ಎಂದು ಕೇಳುತ್ತಾರೆ. 

Actor Jagapathi babu speaks about soundarya s death mrq
Author
First Published Jun 3, 2024, 6:58 PM IST

ನಟಿ ಸೌಂದರ್ಯ (Actress Soundarya) ಹೆಸರಿಗೆ ತಕ್ಕಂತೆ ಸೌಂದರ್ಯವತಿ. ಹಿಂದಿ ಸೇರಿದಂತೆ ದಕ್ಷಿಣ ಸಿನಿ ಅಂಗಳದಲ್ಲಿ ತನ್ನದೇ ಗುರುತು ಮೂಡಿಸಿ ಮರೆಯಾದ ಅಪ್ರತಿಮೆ ಕಲಾವಿದೆ. ತಮ್ಮ ಅಮೋಘ ಅಭಿನಯ ಮತ್ತು ಸರಳತೆಯಿಂದಲೇ ಇಂದಿಗೂ ಅಪಾರ ಅಭಿಮಾನಿಗಳನ್ನು ಹೊಂದಿರುವ ಪ್ರತಿಭಾನ್ವಿತೆ. ನಟಿ ಸೌಂದರ್ಯ ಮೃತರಾದ ವೇಳೆ ಟಾಲಿವುಡ್ ನಟ ಜಗಪತಿ ಬಾಬು (Tollywood Actor Jagapathi Babu) ಅವರಿಗೆ ಅಳಬೇಕು ಅಂತ ಅನ್ನಿಸಿಲ್ಲವಂತೆ. ಅಂದು ಅವರಿಗೆ ನಟಿಯ ಸಾವಿಗಿಂತ (Soundarya Death) ಬೇರೆ ವಿಷಯಗಳು ಹೆಚ್ಚು ನೋವನ್ನುಂಟು ಮಾಡಿದ್ದವು ಎಂದು ಸಂದರ್ಶನದದಲ್ಲಿ ಹೇಳಿಕೊಂಡಿದ್ದರು. ಈ ಸಂದರ್ಶನದ ವಿಡಿಯೋ ತುಣಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ನಟ ಜಗಪತಿ ಬಾಬು ಸಂದರ್ಶನದಲ್ಲಿ (Jagapati Babu Interview) ಸೌಂದರ್ಯದ ಬಗ್ಗೆ ಹೇಳಿದ್ದೇನು? ಅಂದು ಜಗಪತಿ ಬಾಬು ಅವರನ್ನು ಕಾಡಿದ ಆ ವಿಷಯಗಳೇ ಏನು ಎಂಬುದರ ಮಾಹಿತಿ ಇಲ್ಲಿದೆ.

2004ರ ಚುನಾವಣೆ ಪ್ರಚಾರಕ್ಕೆ ತೆರಳುತ್ತಿದ್ದ ವೇಳೆ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಸೌಂದರ್ಯ ಮೃತರಾಗುತ್ತಾರೆ. ಇದೇ ದುರಂತದಲ್ಲಿ ಸೌಂದರ್ಯ ಸೋದರ ಅಮರನಾಥ್ ಸಹ ಸಾವನ್ನಪ್ಪುತ್ತಾರೆ. ಸೌಂದರ್ಯ  ಕನ್ನಡದ ಅನಂತ್‌ನಾಗ್, ವಿಷ್ಣುವರ್ಧನ್, ರವಿಚಂದ್ರನ್, ರಮೇಶ್ ಸೇರಿದಂತೆ ಹಲವು ಸ್ಟಾರ್‌ಗಳ ಜೊತೆ ಕೆಲಸ ಮಾಡಿದ್ದಾರೆ. ತೆಲುಗಿನ ಚಿಂರಜೀವಿ, ನಾಗಾರ್ಜುನ, ಬಾಲಯ್ಯ, ಶ್ರೀಕಾಂತ್, ಜಗಪತಿ ಬಾಬು, ವೆಂಕಟೇಟ್, ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್ ಜೊತೆಯಲ್ಲಿಯೂ ಸೌಂದರ್ಯ ತೆರೆ ಹಂಚಿಕೊಂಡಿದ್ದಾರೆ. 

ಎಲ್ಲಾ ಭಾಷೆಯ ಚಿತ್ರರಂಗದಲ್ಲಿಯೂ ಸೌಂದರ್ಯ ಆಪ್ತರನ್ನು ಹೊಂದಿದ್ದರು. ಅದರಲ್ಲಿಯೂ ಜಗಪತಿ ಬಾಬು ಮತ್ತು ಸೌಂದರ್ಯ ಇಬ್ಬರು ಅತ್ಯಾಪ್ತರು ಎಂದು ಬಣ್ಣದ ಲೋಕ ಹೇಳುತ್ತದೆ. ಜಗಪತಿ ಬಾಬು ಜೊತೆಯಲ್ಲಿ ಸೌಂದರ್ಯ ನಟಿಸಿದ್ದಾರೆ. ಸೌಂದರ್ಯ ಸಾವಿನ ಕುರಿತು ಜಗಪತಿ ಬಾಬು ಮಾತನಾಡಿರುವ ವಿಡಿಯೋ ಕ್ಲಿಪ್ ವೈರಲ್ ಆಗುತ್ತಿದೆ. ಈ ಸಂದರ್ಶನದಲ್ಲಿ ನಿರೂಪಕ, ನಿಮ್ಮ ಆತ್ಮೀಯ ಸ್ನೇಹಿತೆ ಸೌಂದರ್ಯ ಮೃತರಾದಾಗ ನಿಮ್ಮ ಮನಸ್ಥಿತಿ ಹೇಗಿತ್ತು ಎಂದು ಕೇಳುತ್ತಾರೆ. 

ಕನ್ನಡ ಚಿತ್ರರಂಗದಲ್ಲಿ ಅತೀ ಕಡಿಮೆ ಕಾಲಾವಧಿ ಬದುಕಿದ ಸ್ಟಾರ್ ನಟಿಯರು

ಜಗಪತಿ ಬಾಬು ಉತ್ತರವೇನು?

ನಾನು ಫಿಲಾಸಪಿಯಲ್ಲಿ ನಂಬಿಕೆಯುಳ್ಳ ವ್ಯಕ್ತಿ. ಹಾಗಾಗಿ ಸೌಂದರ್ಯ ಸಾವಿನಿಂದ ನನಗೆ ತೀವ್ರ ನೋವು ಆಗಲಿಲ್ಲ. ಹುಟ್ಟಿದ ಜೀವಿ ಸಾಯಲೇಬೇಕು ಎಂದು ಎಲ್ಲರಿಗೂ ಗೊತ್ತಿರುವ ವಿಷಯ. ಸೌಂದರ್ಯ ಸಾವಿನ ನಂತರದ ವಿಷಯಗಳ ಬಗ್ಗೆ ಯೋಚಿಸಿದಾಗ ನಾನು ತೀವ್ರ ನೋವು ಅನುಭವಿಸಿದೆ ಎಂದು ಜಗಪತಿ ಬಾಬು ಸಂದರ್ಶನದಲ್ಲಿ ಹೇಳುತ್ತಾರೆ. 

ಇದೇ ಹೆಲಿಕಾಪ್ಟರ್ ದುರಂತದಲ್ಲಿ ಸೌಂದರ್ಯ ಸೋದರ ಅಮರನಾಥ್ ಸಹ ಸಾವನ್ನಪ್ಪಿದ್ದರು. ಸತ್ತಾಗ ಅಳಬೇಕು ಎಂಬ ಯಾವುದೇ ನಿಯಮಗಳಿಲ್ಲ. ಹಣ, ಮನೆ ಅಥವಾ ಯಾವುದೇ ವಸ್ತುಗಳನ್ನು ಕಳೆದುಕೊಂಡರೆ ಜೀವನದಲ್ಲಿ ಮತ್ತೊಮ್ಮೆ ಪಡೆದುಕೊಳ್ಳಬಹುದು. ಆದ್ರೆ ಜೀವಗಳನ್ನು ಹಿಂದಿರುಗಿಸಿಕೊಳ್ಳಲು ಎಂದಿಗೂ ಸಾಧ್ಯವಿಲ್ಲ. ಆ ಆತ್ಮೀಯ ವ್ಯಕ್ತಿಗಳನ್ನು ಕಳೆದುಕೊಂಡ ಭಾವ ನನ್ನಲ್ಲಿ ದುಃಖವನ್ನುಂಟು ಮಾಡಿತ್ತು ಎಂದು ಜಗಪತಿ ಬಾಬು ಭಾವುಕರಾಗಿದ್ದರು. 

ಆಪ್ತಮಿತ್ರದ ಸೌಂದರ್ಯ ಪಾತ್ರವನ್ನು ಸಿನಿಮಾ ನೋಡೋಕೂ ಮೊದಲೇ ಹೇಳಿದರೆ ಮಜಾ ಇರುತ್ತಾ?: ರಂಜನಿ ರಾಘವನ್‌

ಪ್ರಶ್ನೆಗಳ ಮೇಲೆ ಪ್ರಶ್ನೆಗಳು 

ಇಬ್ಬರು ಮಕ್ಕಳನ್ನು ಒಂದೇ ದಿನ ಕಳೆದುಕೊಂಡ ಆ ತಾಯಿಯ ಸ್ಥಿತಿ ಹೇಗಿರಬೇಕು? ಇಬ್ಬರ ಮಕ್ಕಳ ಮುಂದಿನ ಜೀವನ ಹೇಗೆ? ಅಮರ್ ಪತ್ನಿ ಭವಿಷ್ಯ ಏನು ಎಂಬಿತ್ಯಾದಿ ಪ್ರಶ್ನೆಗಳು ನನ್ನಲ್ಲಿ ಹುಟ್ಟಿಕೊಂಡಿದ್ದವು. ಕುಟುಂಬದಲ್ಲಿ ಆಸ್ತಿ ವಿವಾದ ಏನಾಗುತ್ತೆ ಎಂಬುದರ ಬಗ್ಗೆ ನಾನು ಯೋಚಿಸುತ್ತಿದ್ದೆ ಎಂದು ಜಗಪತಿ ಬಾಬು ಹೇಳಿಕೊಂಡಿದ್ದಾರೆ. 

 

Latest Videos
Follow Us:
Download App:
  • android
  • ios