ಶ್ರೀವಲ್ಲಿ-ಪುಷ್ಪರಾಜ್ ಬರೋ ದಿನ ಫಿಕ್ಸ್ ಆಗಿದ್ದು ನಿಜ; ಟವೆಲ್ ಹಿಡಿದೇ ನಿಂತ ಫ್ಯಾನ್ಸ್!

ಪುಷ್ಪ-2 ಸಿನಿಮಾ ರಿಲೀಸ್​ಗೂ ಮೊದಲೇ ಸಾವಿರ ಕೋಟಿಗೂ ಅಧಿಕ ಬ್ಯುಸಿನೆಸ್ ಮಾಡಿದೆ. ಸಿನಿಜಗತ್ತಿನಲ್ಲಿ ದೊಡ್ಡ ಹವಾ ಕ್ರಿಯೇಟ್ ಮಾಡಿದೆ.  ಪುಷ್ಪ-2 ಟೀಂ ಸದ್ಯ ಒಂದು ಬಿಗ್ ಅಪ್​ಡೇಟ್ ಕೊಟ್ಟದೆ. ಅದೇನು ಅಂತ ನೋಡ್ಬನ್ನಿ.. 

Allu arjun Rashmika Mandanna Pushpa 2 movie release on 5 December 2024 srb

ಪುಷ್ಪ-2 (Pushpa 2) ಸಿನಿಮಾ ರಿಲೀಸ್​ಗೂ ಮೊದಲೇ ಸಾವಿರ ಕೋಟಿಗೂ ಅಧಿಕ ಬ್ಯುಸಿನೆಸ್ ಮಾಡಿದ್ದು, ಸಿನಿಜಗತ್ತಿನಲ್ಲಿ ದೊಡ್ಡ ಹವಾ ಕ್ರಿಯೇಟ್ ಮಾಡಿದೆ. ಇನ್ನೇನು ಡಿಸೆಂಬರ್ ಮೊದಲ ವಾರ ತೆರೆಗೆ ಬರೋದಕ್ಕೆ ಸಜ್ಜಾಗಿರೋ ಪುಷ್ಪ-2 ಟೀಂ ಸದ್ಯ ಒಂದು ಬಿಗ್ ಅಪ್​ಡೇಟ್ ಕೊಟ್ಟದೆ. ಏನದು ಅಪ್​ಡೇಟ್ ನೋಡ್ಕೊಂಡ್ ಬರೋಣ ಬನ್ನಿ. ಈ ಪ್ಯಾನ್ ಇಂಡಿಯಾ ಪುಷ್ಪ-2 ದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಟಾಲಿವುಡ್ ಸ್ಟಾರ್ ಹೀರೋ ಅಲ್ಲು ಅರ್ಜುನ್ (Allu Arjun) ಜತೆ ತೆರೆ ಹಂಚಿಕೊಂಡಿದ್ದಾರೆ. 

ಫ್ಯಾನ್ಸ್​ಗೆ ಬಿಗ್ ನ್ಯೂಸ್ ಕೊಟ್ಟ ಪುಷ್ಪರಾಜ್, ನಿಗದಿಗಿಂತ ಒಂದು ದಿನ ಮೊದಲೇ ಥಿಯೇಟರ್‌ಗೆ ಎಂಟ್ರಿ ಕೊಡ್ತಿದೆ: ಯೆಸ್ ಸದ್ಯದ  ಮೋಸ್ಟ್ ಅವೇಟೆಡ್ ಪ್ಯಾನ್ ಇಂಡಿಯಾ ಮೂವಿ ಅಂದ್ರೆ ಅದು ಪುಷ್ಪ-2. ಪುಷ್ಪ - ದಿ ರೈಸ್ ಸಿನಿಮಾದ ಅಮೋಘ ಸಕ್ಸಸ್ ಬಳಿಕ ಪುಷ್ಪ ಸೀಕ್ವೆಲ್​ಗೆ ದೊಡ್ಡ ಮಟ್ಟದ ಶ್ರಮ ಹಾಕಿ ರೆಡಿಮಾಡಿದೆ ಚಿತ್ರತಂಡ.  ನಿರ್ದೇಶಕ ಸುಕುಮಾರ್ ದೊಡ್ಡ ಕ್ಯಾನ್ವಾಸ್​​ನ ಕಥೆ ಹೆಣೆದು ದೊಡ್ಡ ಮಟ್ಟದಲ್ಲಿ ಸಿನಿಮಾ ರೆಡಿ ಮಾಡಿದ್ದಾರೆ. 

ರಶ್ಮಿಕಾ-ಸಲ್ಮಾನ್ ಖಾನ್ ಸುತ್ತ ಜ್ಯೂನಿಯರ್ ಆರ್ಟಿಸ್ಟ್​​ಗಳಿಗಿಂತಲೂ ಸೆಕ್ಯೂರಿಟಿಗಳೇ ಜಾಸ್ತಿ!

ಮೈತ್ರಿ ಮೂವಿ ಮೇಕರ್ಸ್ ಈ ಸಿನಿಮಾಗಾಗಿ ಭರ್ತಿ 500 ಕೋಟಿ ಹೂಡಿಕೆ ಮಾಡಿದೆ. ಅಲ್ಲು ಅರ್ಜುನ್ ಈ ಪ್ರಾಜೆಕ್ಟ್​ಗಾಗಿ ಬರೊಬ್ಬರಿ 3 ವರ್ಷ ಕಳೆದಿದ್ದಾರೆ. ಸೋ ಇಷ್ಟೆಲ್ಲಾ ಶ್ರಮದೊಂದಿಗೆ ರೆಡಿಯಾಗಿರೋ ಸಿನಿಮಾ,  ಅಷ್ಟೇ ದೊಡ್ಡ ನಿರೀಕ್ಷೆ ಸೃಷ್ಟಿ  ಮಾಡಿದೆ. ಆ ನಿರೀಕ್ಷೆಗೆ ತಕ್ಕಂತೆ ದೊಡ್ಡ ಮಟ್ಟದ ಪ್ರೀ ರಿಲೀಸ್ ಬ್ಯುಸಿನೆಸ್ ಕೂಡ ಆಗಿದೆ. ಈಗಾಗ್ಲೇ ಪುಷ್ಪ-2 ಟೀಮ್ ಸಾವಿರ ಕೋಟಿ ಗಳಿಕೆ ಮಾಡಿರೋ ಸುದ್ದಿ ಇದೆ.

ಸದ್ಯ ಇದೇ ಖುಷಿಯಲ್ಲಿ ಮೀಡಿಯಾ ಮುಂದೆ ಬಂದಿರೊ ಪುಷ್ಪ- ಟೀಂ ಮತ್ತೊಂದು ಖುಷಿಯ ಸಮಾಚಾರ ಕೊಟ್ಟಿದೆ. ಅಸಲಿಗೆ ಈ ಹಿಂದೆ ಎರಡು ಬಾರಿ ಪುಷ್ಪ-2 ರಿಲೀಸ್ ಪೋಸ್ಟ್ ಪೋನ್ ಆಗಿತ್ತು. ಸೋ ಇದೀಗ ಡಿಸೆಂಬರ್​ 6ಕ್ಕೆ ಸಿನಿಮಾ ರಿಲೀಸ್ ಆಗುತ್ತಾ ಅನ್ನೋ ಬಗ್ಗೆಯೂ ಫ್ಯಾನ್ಸ್ ನಡುವೆ ಅನುಮಾನ ಇತ್ತು. ಆದ್ರೆ ಡಿಸೆಂಬರ್ 6ಕ್ಕೂ ಒಂದು ದಿನ ಮೊದಲೇ ಸಿನಿಮಾ ರಿಲೀಸ್ ಆಗಲಿದೆ ಅನ್ನೋ ನ್ಯೂಸ್ ಕೊಟ್ಟಿದೆ ಪುಷ್ಪ ತಂಡ.

ಪೋಷಕರು ಕಲಿಸಿದ ಲೈಫ್ ಲೆಸನ್ ಸೀಕ್ರೆಟ್ ಕೊನೆಗೂ ಬಾಯ್ಬಿಟ್ಟ ನಟಿ ಅದಿತಿ ಪ್ರಭುದೇವ!

ಹೌದು ಡಿಸೆಂಬರ್ 5 ಗುರುವಾರದ ದಿನವೇ ವರ್ಲ್ಡ್ ವೈಡ್ ಸಿನಿಮಾ ತೆರೆಗೆ ಬರಲಿದೆ. ಈಗಾಗ್ಲೇ ಸಿನಿಮಾದ ಕೆಲಸಗಳನ್ನೆಲ್ಲಾ ಕಂಪ್ಲೀಟ್ ಮಾಡಿರೋ ಟೀಂ ಆಫೀಸಿಯಲ್ ಆಗಿ ಈ ಅನೌನ್ಸ್​ ಮೆಂಟ್ ಮಾಡಿದ್ದು, ಪುಷ್ಪರಾಜ್​ನ ಎದುರುಗೊಳ್ಳೋದಕ್ಕೆ ಸಜ್ಜಾಗಿ ಅಂತ ಫ್ಯಾನ್ಸ್​ಗೆ ಸೂಚನೆ ಕೊಟ್ಟಿದೆ. ಈ ಮೂಲಕ, ರಶ್ಮಿಕಾ ಮಂದಣ್ಣ ಹಾಗೂ ಅಲ್ಲು ಅರ್ಜುನ್ ಫ್ಯಾನ್ಸ್‌ಗಳಿಗೆ ಖುಷಿ ಸಮಾಚಾರ ಸಿಕ್ಕಿದೆ. ಡಿಸೆಂಬರ್‌ನಲ್ಲಿ ಬಿಡುಗಡೆಯಾಗೋ ಸಿನಿಮಾಗೆ ಫ್ಯಾನ್ಸ್ ಈಗಲೇ ಟೈಮ್ ಫಿಕ್ಸ್ ಮಾಡಿಕೊಳ್ತಿದಾರಂತೆ. ಟವೆಲ್ ಹಾಕೋದು ಅಂತಾರಲ್ಲ, ಅದು ಈಗ್ಲೇ ಶುರುವಾಗಿದೆ ಅನ್ನೋ ಸಮಾಚಾರ ಸಿಕ್ಕಿದೆ!

Latest Videos
Follow Us:
Download App:
  • android
  • ios