ರೆಬೆಲ್ ಸ್ಟಾರ್ ಅಂಬರೀಶ್ ನಮ್ಮೆಲ್ಲರನ್ನ ಅಗಲಿದ ನಂತರ ಚಿತ್ರರಂಗದ ಗಣ್ಯರು ತಮ್ಮ ಹುಟ್ಟುಹಬ್ಬವನ್ನು ಈ ವರ್ಷ ಅಂಬಿಯನ್ನು ನೆನೆದು ಆಚರಣೆ ಮಾಡಿಕೊಳ್ಳದಿರುವುದು ಒಂದು ಕಾರಣವಾಗಿದೆ.

ಜುಲೈ 2 ರಂದು ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬವಿದ್ದು ಕೆಲ ದಿನಗಳ ಹಿಂದೆ ಅವರ ತಂದೆ ಅಗಲಿದ ಕಾರಣ ಈ ಸಲ ಆಚರಣೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಹಾರ,ಕೇಕ್, ಬ್ಯಾನರ್‌ಗಳಿಗೆ ಹಣವನ್ನು ಖರ್ಚು ಮಾಡದೇ ಅನಾಥಾಶ್ರಮಕ್ಕೆ ಅಥವಾ ವೃದ್ಧಾಶ್ರಮಕ್ಕೆ ಸಹಾಯ ಮಾಡಲು ಬಳಸಿಕೊಳ್ಳಿ ಎಂದು ವಿನಂತಿ ಮಾಡಿಕೊಂಡಿದ್ದಾರೆ.

ಚಾಲೆಂಜಿಂಗ್ ಸ್ಟಾರ್‌ಗೆ ಫಿದಾ ಆಗಿದೆ ಮೈಸೂರಿನ ಗಿಣಿ!

ಇನ್ನು ಶಿವರಾಜ್‌ಕುಮಾರ್ ಲಂಡನ್‌ನಲ್ಲಿ ಭುಜದ ಜಿಕಿತ್ಸೆ ಪಡೆಯಲು ತೆರಳುತ್ತಿದ್ದು ಜುಲೈ 12 ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ನಿರ್ಧಾರ ಮಾಡಿದ್ದಾರೆ.