ಹುಡುಗಿಯರ ಹಾರ್ಟ್‌ ಕದ್ದ ಸ್ಯಾಂಡಲ್‌ವುಡ್ ದೂದ್ ಪೇಡ ದಿಗಂತ್ ಹಾಗೂ ಟಾಲಿವುಡ್ ರೌಡಿ ಬಾಯ್ ವಿಜಯ್ ದೇವರಕೊಂಡ ಒಟ್ಟಾಗಿ ನಾಲ್ಕು ಭಾಷೆಯಲ್ಲಿ ಮೂಡಿ ಬರುತ್ತಿರುವ 'ಹೀರೋ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಶೂಟಿಂಗ್ ಟೈಮಲ್ಲಿ ಬಿಡುವು ಮಾಡಿಕೊಂಡು ಸೈಕಲ್ ಸವಾರಿ ಮಾಡಿದ್ದಾರೆ. ಅದರಲ್ಲೇನು ವಿಶೇಷ ಅಂತೀರಾ? ಅವರು ರೈಡಿಂಗ್ ಮಾಡಿದ್ದು ಬರೋಬ್ಬರಿ 200 ಕಿಮೀ. 

ದಿಗಂತ್ ಅವರ ಕಸಿನ್ ಜೊತೆ ಬೆಂಗಳೂರಿನಿಂದ ಮಂಡ್ಯದವರೆಗೆ ಸೈಕ್ಲಿಂಗ್ ಮಾಡಿದ್ದಾರೆ. 10 ಗಂಟೆ ತೆಗೆದುಕೊಂಡು ಸುಮಾರು 200 ಕಿಮೀ ಸೈಕ್ಲಿಂಗ್ ಮಾಡಿದ್ದಾರೆ. 

 

ಸದ್ಯ ದೂದ್ ಪೇಡ ಸ್ಯಾಂಡಲ್ ವುಡ್ ನಲ್ಲಿ ಹುಟ್ಟುಹಬ್ಬದ ಶುಭಾಶಯಗಳು, ಯುವರತ್ನ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅದೇ ರೀತಿ ವಿಜಯ್ ದೇವರಕೊಂಡ ಜೊತೆ ‘ಹೀರೋ’ ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. 
 
'ಹೀರೋ' ಚಿತ್ರಕ್ಕೆ ಆನಂದ್ ಅಣ್ಣಾಮಲೈ ಆ್ಯಕ್ಷನ್ ಕಟ್‌ ಹೇಳುತ್ತಿದ್ದು ರಾಷ್ಟ್ರ ಪ್ರಶಸ್ತಿ ವಿಜೇತ ಕಾಕ ಮುಟೈ ಸಂಭಾಷಣೆ ಬರೆದಿದ್ದಾರೆ. ಲವ್ಲಿ ಬಾಯ್ಸ್‌ಗೆ ಜೋಡಿಯಾಗಿ ಶಾಲಿನಿ ಪಾಂಡೆ ಹಾಗೂ ಮಾಳವಿಕಾ ಮೋಹನ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.