ಸಣ್ಣ ಪುಟ್ಟ ಪಾತ್ರಗಳಿಂದ ಮುಖ್ಯ ಕಾಮಿಡಿಯನ್ ಆಗಿ ಭಡ್ತಿ ಪಡೆದ ಚಿಕ್ಕಣ್ಣನಿಗೆ ಇಂದು ಬರ್ತ್‌ಡೇ ಆಚರಿಸುತ್ತಾರೆ, ಅವರದೇ ಸ್ಪೆಷಲ್ ಟ್ರೇಲರ್ ಬಿಡುಗಡೆ ಮಾಡುತ್ತಾರೆ, ಪೋಸ್ಟರ್‌ಗಳಲ್ಲಿ ಹೀರೋ ಜತೆ ಫೋಟೋ ಹಾಕುತ್ತಾರೆ. ಚಿಕ್ಕಣ್ಣ ಸಂಭಾವನೆ ಅರ್ಧ ಕೋಟಿ ದಾಟಿದೆ ಅಂತಲೂ ಸುದ್ದಿ. ಚಿಕ್ಕಣ್ಣ ಜತೆ ಹೀಗೊಂದು ಚಿಟ್- ಚಾಟ್.
1) ಏನ್ಸಾರ್, ನೀವು ‘ಸಂಹಾರ’ದಹೀರೋನಾ?
ಚಿ: ಅಯ್ಯೋ ಸಾರ್... ಹಂಗೇನಾರಾ ಬರೆದುಬಿಟ್ಟೀರಾ ಮತ್ತೆ! ನಾನು ಆ ಚಿತ್ರದಲ್ಲೊಂದು ಮುಖ್ಯ ಪಾತ್ರ ಮಾಡುತ್ತಿದ್ದೇನೆ ಅಷ್ಟೇ.
2) ಮತ್ತೇ ಹೀರೋ ರೇಂಜಿಗೆ ನಿಮಗೆ ಟ್ರೈಲರ್ ಬೇರೆ ಕಟ್ ಮಾಡಿ, ಹುಟ್ಟುಹಬ್ಬಕ್ಕೆ ಬಿಡುಗಡೆ ಮಾಡಿದ್ದಾರೆ?
ಅದು ಚಿತ್ರತಂಡದ ಪ್ರೀತಿ. ಅವರಿಗೆ ನಾನು ಋಣಿ. ನನ್ನ ಹುಟ್ಟುಹಬ್ಬ ಅಂತ ಗೊತ್ತಾಗಿ, ನಿರ್ದೇಶಕ ಗುರು ದೇಶಪಾಂಡೆ ಚಿತ್ರತಂಡದಿಂದ ವಿಶೇಷ ಉಡುಗೋರೆ ಕೊಡುತ್ತೇನೆ ಅಂದ್ರು. ನೋಡಿದರೆ ನನ್ನ ಪಾತ್ರವನ್ನೇ ಹೈಲೈಟ್ ಮಾಡಿ ಟ್ರೈಲರ್ ಕಟ್ ಮಾಡಿ ತೋರಿಸಿದರು. ಅದನ್ನು ಬಿಡುಗಡೆ ಮಾಡಿ, ಹುಟ್ಟುಹಬ್ಬಕ್ಕೆ ಕೇಕ್ ಕಟ್ ಮಾಡಿದರು. ಸಾರ್ವಜನಿಕವಾಗಿ ಹುಟ್ಟುಹಬ್ಬ ಮಾಡಿಕೊಂಡಿದ್ದು ಅದೇ ಮೊದಲು. ನೂರು ವರ್ಷ ಆದರೂ ಮರೆಯಲ್ಲ.
3) ಈಚಿತ್ರದಲ್ಲಿನಿಮಗೆಟ್ರೈಲರ್ಕಟ್ಮಾಡುವಷ್ಟುದೊಡ್ಡಪಾತ್ರವೇ?
ಚಿ: ಪಾತ್ರ ಅಂತ ಬಂದಾಗ ದೊಡ್ಡದು- ಚಿಕ್ಕದು ಅಂತ ನಾನು ನೋಡಲ್ಲ. ಪಾತ್ರಕ್ಕಿರುವ ಗಟ್ಟಿತನ ಮುಖ್ಯ. ಚಿತ್ರದಲ್ಲಿ ನನ್ನ ಪಾತ್ರದ ಹೆಸರು ರಾಜಾಹುಲಿ, ವೇಷ ಕೆಂಪೇಗೌಡನ ಪೊಲೀಸ್ ಕ್ಯಾರೆಕ್ಟರ್ ಥರ. ಇನ್ನು ನನ್ನ ಪಾತ್ರ ಹೇಗಿರುತ್ತದೆ ಅಂತ ನಿಮ್ಮ ಊಹೆಗೆ ಬಿಟ್ಟಿದ್ದು!
4) ಒಂದುಪವರ್ಪುಲ್ಡೈಲಾಗ್?
ಚಿ: ಹುಲಿ ಬೇಟೆಯಾಡಬೇಕಾದ್ರೆ ಅಡ್ಡ ಬಂದ್ರೆ ನೀನೇ ಬೇಟೆ ಆಗೋಗ್ತಿಯಾ, ಈ ರಾಜಾಹುಲಿ ಡ್ಯೂಟಿ ಮಾಡಬೇಕಾದ್ರೆ ಡಿಸ್ಟರ್ಬ್ ಮಾಡಿದರೆ.... ಮುಂದಿನ ಡೈಲಾಗ್ ಸಿನಿಮಾದಲ್ಲೇ ನೋಡಿ.
5) ರಾಜಾಹುಲಿ, ಕೆಂಪೇಗೌಡ...ಯಾಕೋಇಬ್ಬರುಸ್ಟಾರ್ಹೀರೋಗಳಿಗೆಟಾಂಗ್ಕೊಟ್ಟಂಗಿದೆಯಲ್ಲ?
ಚಿ: ನಮಗೇ ಅಂಥ ಯಾವ ಯೋಚನೆಗಳೂ ಬಂದಿಲ್ಲ. ಈ ಪ್ರಶ್ನೆಯಿಂದ ನೀವೂ ಹಂಗೆಲ್ಲಾ ಯೋಚನೆ ಬರುವಂತೆ ಮಾಡಬೇಡಿ ಅನ್ನೋದು ಪ್ರೀತಿಯ ಮನವಿ. ಸದ್ಯಕ್ಕೆ ‘ಸಂಹಾರ’ಚಿತ್ರದಲ್ಲಿ ನಾನೇ ರಾಜಾಹುಲಿ, ನಾನೇ ಕೆಂಪೇಗೌಡ ಅಷ್ಟು ಮಾತ್ರ ಹೇಳಬಲ್ಲೆ.
6) ನಿಮ್ಮಸಂಭಾವನೆತುಂಬಾಜಾಸ್ತಿಆಗಿದೆಯಂತೆ. ‘ಸಂಹಾರ’ಚಿತ್ರಕ್ಕೆಅರ್ಧಕೋಟಿದಾಟಿದೆಯಂತೆಹೌದೇ?
ಚಿ:ನೋಡಿ, ಸಂಭಾವನೆ ಬಗ್ಗೆ ನಾನು ಮಾತನಾಡಲ್ಲ. ಈ ಚಿತ್ರಕ್ಕೆ ನಾನು 50 ಲಕ್ಷ ತೆಗೆದುಕೊಂಡಿದ್ದೀನಾ ಎನ್ನುವುದಕ್ಕಿಂತ ಈ ಚಿತ್ರದಿಂದ ಹೆಚ್ಚು ಮಾರ್ಕ್ಸ್ ತೆಗೆದುಕೊಳ್ಳುತ್ತೇನೆ ಎಂಬುದು ಮಾತ್ರ ಗ್ಯಾರಂಟಿ.
7) ಸರಿ, ನಿಮಗಾಗಿಮಾಡಿರುವಟ್ರೈಲರ್ಗೆಬಂದಪ್ರತಿಕ್ರಿಯೆಗಳೇನು?
ಚಿ: ಎರಡು ದಿನಕ್ಕೆ ಎರಡು ಲಕ್ಷ ಹಿಟ್ಸ್ ಯೂಟ್ಯೂಬ್ನಲ್ಲಿ ಸಿಕ್ಕಿದೆ. ಬೇರೆ ಸೋಷಿಯಲ್ ಮೀಡಿಯಾಗಳ ಹಿಟ್ಸ್ 10 ಲಕ್ಷ ಆಗುತ್ತದೆ. ಒಬ್ಬ ಹಾಸ್ಯ ನಟನ ಟ್ರೈಲರ್ ಈ ಮಟ್ಟಿಗೆ ಹಿಟ್ ಆಗುತ್ತದೆಂಬುದು ನನಗೇ ಅಚ್ಚರಿ.
8) ನೀವುಹೀರೋಆಗುತ್ತಿದ್ದೀರಂತೆಹೌದೇ?
ಚಿ: ಸದ್ಯಕ್ಕೆ ಅಂಥ ಯಾವ ಯೋಚನೆಯೂ ಇಲ್ಲ. ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿಯೇ ತುಂಬಾ ಬ್ಯುಸಿ ಇದ್ದೀನಿ. ಸಾಕಷ್ಟು ಸಿನಿಮಾಗಳು ಕೈಯಲ್ಲಿವೆ. ಹೀಗಾಗಿ ಹೀರೋ ಆಗುವ ಯೋಚನೆ ಇಲ್ಲ. ಮುಂದಿನ ದಿನಗಳ ಬಗ್ಗೆ ಈಗಲೇ ನಿರ್ಧಾರ ಮಾಡಲಾರೆ.
-ಆರ್. ಕೇಶವಮೂರ್ತಿ(ಕನ್ನಡಪ್ರಭ)
