ಕೃಷಿ ತಪಸ್ವಿಯಾದ ನಟ ಕಿಶೋರ್ !

Actior Kishore interested in agriculture
Highlights

ಕಿಶೋರ್ ಜಮೀನಿನಲ್ಲಿ ಹಾರೆ ಹಿಡಿದು ಮಣ್ಣಿನ ಮಗನಂತೆ ಕೆಲಸ ಮಾಡುತ್ತಿದ್ದ ಫೋಟೋ ನೋಡಿ ಅಭಿಮಾನಿಗಳಿಗೆ ಕಾಡಿದ ಪ್ರಶ್ನೆ. ಕಿಶೋರ್ ಸಿನಿಮಾ ಬಿಟ್ಟು ಪೂರ್ಣ ಪ್ರಮಾಣದಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡ್ರಾ ಎನ್ನುವುದು. ಈ ಬಗ್ಗೆ ಕೇಳಿದಾಗ ಅವರು ಹೇಳಿದ್ದು.

ಕಿಶೋರ್ ಜಮೀನಿನಲ್ಲಿ ಹಾರೆ ಹಿಡಿದು ಮಣ್ಣಿನ ಮಗನಂತೆ ಕೆಲಸ ಮಾಡುತ್ತಿದ್ದ ಫೋಟೋ ನೋಡಿ ಅಭಿಮಾನಿಗಳಿಗೆ ಕಾಡಿದ ಪ್ರಶ್ನೆ. ಕಿಶೋರ್ ಸಿನಿಮಾ ಬಿಟ್ಟು ಪೂರ್ಣ ಪ್ರಮಾಣದಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡ್ರಾ ಎನ್ನುವುದು. ಈ ಬಗ್ಗೆಕೇಳಿದಾಗ ಅವರು ಹೇಳಿದ್ದು.

ಹಿಂದಿ, ತೆಲುಗು ವೆಬ್ ಸೀರಿಸ್‌ನಲ್ಲಿ..
ನಾನೆಲ್ಲಿಗೆ ಹೋಗಲಿ ಹೇಳಿ? ಸಿನಿಮಾದಿಂದಲೇ ನಾನಿಷ್ಟು ಗುರುತಿಸಿಕೊಂಡಿದ್ದು. ಅಲ್ಲಿಂದಲೇ ನೇಮ್ ಆ್ಯಂಡ್ ಫೇಮ್ ಸಿಕ್ಕಿದ್ದು. ಎಲ್ಲೇ ಇದ್ದರೂ ಅದರ ಜತೆಗೆಯೇ ಇರುತ್ತೇನೆ. ಆದ್ರೆ, ನನ್ನೊಳಗಿನ ಪಾತ್ರಗಳು ಹಾಗೂ ಸಿನಿಮಾಗಳ ಆಯ್ಕೆ ಕ್ರಮ ಬದಲಾಗಿದೆ. ಕಮರ್ಷಿಯಲ್ ಎನ್ನುವುದಕ್ಕಿಂತ, ಒಂದಷ್ಟು ಮೆಸೇಜ್ ಆಧರಿತ ಸಿನಿಮಾಗಳಲ್ಲಿ ಅಭಿನಯಿಸೋಣ ಅಂತ ಯೋಚಿಸುತ್ತಿದ್ದೇನೆ. ಈ ಕಾರಣಕ್ಕೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ ಎನ್ನುವುದನ್ನು ಬಿಟ್ಟರೆ ಸಿನಿಮಾದಲ್ಲಿ ಈಗಲೂ  ನಾನು ಬ್ಯುಸಿ. ಕನ್ನಡದಲ್ಲಿ ‘ಅಲ್ಪವಿರಾಮ’ ಸೇರಿ ಎರಡು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ಅವರಡು ಚಿತ್ರೀಕರಣ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಹಂತಕ್ಕೆ ಕಾಲಿಟ್ಟಿವೆ.

ತಮಿಳಿನಲ್ಲಿ ವೆಟ್ರಿಮಾರನ್ ಜತೆಗೆ ‘ವಡಾ ಚೆನ್ನೈ’ ಚಿತ್ರೀಕರಣ ಮುಗಿದಿದೆ. ತೆಲುಗಿನಲ್ಲೂ  ಒಂದು ಸಿನಿಮಾದ ಚಿತ್ರೀಕರಣ ಮುಗಿಸಿದ್ದೇನೆ. ಮತ್ತೊಂದೆಡೆ ಮಲಯಾಳಂನಲ್ಲಿ ‘ಪುಲಿಮುರುಗನ್’ ಚಿತ್ರತಂಡವೇ ಮತ್ತೊಂದು ಪ್ರಾಜೆಕ್ಟ್ ಶುರು ಮಾಡುತ್ತಿದೆ. ಬಹುತೇಕ ಅದರಲ್ಲೂ ನಾನು ಇರಬಹುದು. ಹಾಗೆಯೇ ಹಿಂದಿ ಮತ್ತು ತೆಲುಗಿನ ಎರಡು ವೆಬ್ ಸೀರಿಸ್‌ನಲ್ಲೂ ಅಭಿನಯಿಸುತ್ತಿದ್ದೇನೆ.

 ಕೃಷಿ ನನ್ನ ಆದ್ಯತೆ..
ಒಂದಲ್ಲೊಂದು ರೂಪದಲ್ಲಿ ನಾವೆಲ್ಲ ಕೃಷಿ ಬದುಕಿನಿಂದ ಬಂದವರು. ಭೂಮಿಯ ಬೆಲೆಯೇನು ಅನ್ನೋದು ನಮ್ಗೆಲ್ಲ ಗೊತ್ತಿದೆ. ಭವಿಷ್ಯಕ್ಕೆ ನಾವೇನಾದ್ರೂ ಇಲ್ಲಿ ಬಿಟ್ಟು ಹೋಗಲು ಸಾಧ್ಯವಿದ್ದರೆ ಅದು ಕೃಷಿ ಮೂಲಕ ಎನ್ನುವುದು ನನ್ನ ನಂಬಿಕೆ. ಹಾಗಾಗಿ ನನಗೆ ಮಣ್ಣು ಮತ್ತು ಬಣ್ಣದ ನಡುವೆ ಮಣ್ಣು ಮುಖ್ಯ ಎನಿಸಿತು. ಹಾಗಾಗಿ ಆದು ನನ್ನ ಆದ್ಯತೆ ಆಗಿದೆ.

ಯೋಗಿ ನಾನಲ್ಲ, ಸನ್ಯಾಸವೂ ಬೇಕಿಲ್ಲ...
ನಾನು ಯೋಗಿ ಅಲ್ಲ,  ಸನ್ಯಾಸವೂ ಬೇಕಿಲ್ಲ. ನನಗೂ ಕನಸುಗಳು, ನಿರೀಕ್ಷೆಗಳಿವೆ. ಆದ್ರೆ ಎಲ್ಲವೂ ಇತಿ- ಮಿತಿಯಲ್ಲಿರಬೇಕು ಅನ್ನೋದು ನನ್ನ ಪಾಲಿಸಿ. ಸದ್ಯಕ್ಕೆ ನನ್ನ ಅಗತ್ಯಕ್ಕೆ ಎಷ್ಟು ಬೇಕು, ಏನು ಬೇಕು ಅನ್ನೋದು ನನ್ನದೇ ಮಿತಿಯಲ್ಲಿವೆ. ಅದಕ್ಕೆ ತಕ್ಕಂತೆ ನಾನು ಬದುಕುತ್ತಿದ್ದೇನೆ. ಅದಕ್ಕಿಂತ ಹೆಚ್ಚಿದ್ದೇನು ಬೇಡ.

loader