ಬಾಲಿವುಡ್ ನಟ ಮಿಸ್ಟರ್ ಫರ್ಫೆಕ್ಷನೀಸ್ಟ್ ಅಮೀರ್ ಖಾನ್ ಮಾನವೀಯತೆ ಮೆರೆದಿದ್ದಾರೆ. ಬಿಹಾರದ ನೆರೆ ಸಂತ್ರಸ್ತರಿಗೆ ಅಮೀರ್‌ ಖಾನ್‌ ನೆರವಿಗೆ ಧಾವಿಸಿದ್ದಾರೆ.
ಬಿಹಾರ(ಆ.31): ಬಾಲಿವುಡ್ ನಟ ಮಿಸ್ಟರ್ ಫರ್ಫೆಕ್ಷನೀಸ್ಟ್ ಅಮೀರ್ ಖಾನ್ ಮಾನವೀಯತೆ ಮೆರೆದಿದ್ದಾರೆ. ಬಿಹಾರದ ನೆರೆ ಸಂತ್ರಸ್ತರಿಗೆ ಅಮೀರ್ ಖಾನ್ ನೆರವಿಗೆ ಧಾವಿಸಿದ್ದಾರೆ.
ಬಿಹಾರದ ಮುಖ್ಯಮಂತ್ರಿ ಪರಿಹಾರ ನಿಧಿಗೆ ನಟ ಅಮೀರ್ 25 ಲಕ್ಷ ರೂ. ನೀಡಿದ್ದಾರೆ. ಈ ಮೂಲಕ ಪ್ರವಾಹ ಸಂತ್ರಸ್ತರಿಗೆ ಸಹಾಯಹಸ್ತ ಚಾಚಿದ್ದಾರೆ. ತಮ್ಮ ಅಭಿಮಾನಿಗಳಿಗೂ ನೆರೆ ಸಂತ್ರಸ್ತರಿಗೆ ನೆರವಾಗುವಂತೆ ಮನವಿ ಮಾಡಿದ್ದಾರೆ.
25 ಲಕ್ಷ ರೂ. ಹಣದ ಚೆಕ್'ನ್ನು ಕೋರಿಯರ್ ಮೂಲಕ ಕಳುಹಿಸಲಾಗಿದ್ದು, ಮುಖ್ಯಮಂತ್ರಿ ಕಾರ್ಯಾಲಯ ಚೆಕ್ನ್ನು ಸ್ವೀಕರಿಸಿದೆ. ಇನ್ನು ಅಮೀರ್, ಪ್ರವಾಹ ಪೀಡಿತ ಪ್ರದೇಶಗಳಿಗೆ ಸಹಾಯ ಮಾಡುತ್ತಿರುವುದು ಇದೇ ಮೊದಲೇನಲ್ಲ. ಈ ತಿಂಗಳಿನಲ್ಲೇ ಅಸ್ಸಾಂ ಹಾಗೂ ಗುಜರಾತ್ ರಾಜ್ಯಗಳಲ್ಲಿ ಉಂಟಾದ ಪ್ರವಾಹ ಪೀಡಿತ ಪ್ರದೇಶಗಳ ಜನರಿಗೆ ಧನಸಹಾಯ ಮಾಡಿದ್ದಾರೆ.
