ಬಾಲಿವುಡ್ ನಟ ಅಮೀರ್ ಖಾನ್ ನಟಿಸಿರೋ ದಂಗಲ್ ಚಿತ್ರ ಅತೀ ಹೆಚ್ಚು ಗಳಿಕೆ ಕಂಡ ಬಾಲಿವುಡ್​ ಚಿತ್ರವೆಂಬ ಖ್ಯಾತಿ ಗಳಿಸಿದೆ. ಇದರ ಜೊತೆ ಅಮೀರ್ ಖಾನ್​  ದಾಖಲೆಯನ್ನ ಅಮೀರ್ ಮುರಿಯುವಂತೆ ದಂಗಲ್ ಸಿನಿಮಾ ಮಾಡಿದೆ.

ಮುಂಬೈ(ಜ.10): ಬಾಲಿವುಡ್ ನಟ ಅಮೀರ್ ಖಾನ್ ನಟಿಸಿರೋ ದಂಗಲ್ ಚಿತ್ರ ಅತೀ ಹೆಚ್ಚು ಗಳಿಕೆ ಕಂಡ ಬಾಲಿವುಡ್​ ಚಿತ್ರವೆಂಬ ಖ್ಯಾತಿ ಗಳಿಸಿದೆ. ಇದರ ಜೊತೆ ಅಮೀರ್ ಖಾನ್​ ದಾಖಲೆಯನ್ನ ಅಮೀರ್ ಮುರಿಯುವಂತೆ ದಂಗಲ್ ಸಿನಿಮಾ ಮಾಡಿದೆ.

ಅಮೀರ್ ಅಭಿನಯದ ಪಿಕೆ ಸಿನಿಮಾ ಬಾಲಿವುಡ್ ನಲ್ಲಿ ಬರೋಬ್ಬರಿ 300 ಕೋಟಿ ಕಲೆಕ್ಷನ್ ಮಾಡಿ ಅತೀ ಹೆಚ್ಚು ಗಲ್ಲಾ ಪೆಟ್ಟಿಗೆ ತುಂಬಿಸಿದ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈಗ ಈ ದಾಖಲೆಯನ್ನ ಸ್ವತಃ ಅಮೀರ್ ಖಾನ್ ದಂಗಲ್ ಸಿನಿಮಾ ಮೂಲ್ಕ ಮುರಿದಿದ್ದಾರೆ.

ದಂಗಲ್ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಬರೋಬ್ಬರಿ 345 ಕೋಟಿ ಕೊಳ್ಳೆ ಹೊಡೆಯುವ ಮೂಲ್ಕ ಬಾಲಿವುಡ್ ನ ಅತೀ ಹೆಚ್ಚು ಗಳಿಕೆ ಕಂಡ ಮೊದಲ ಚಿತ್ರ ಎಂಬ ಖ್ಯಾತಿಗೆ ಪಾತ್ರವಾಗಿದೆ.