ಊಟಕ್ಕೂ ಟ್ಯಾಕ್ಸು, ವಾಂತಿಗೂ ಟ್ಯಾಕ್ಸು, ಹುಟ್ಟು ಚಟ್ಟಕ್ಕೆ ತೆರಿಗೆ ಫಿಕ್ಸು , ಹೊಡಿ ಒಂಬತ್ತ್....! ಅರೆ, ಇದೇನು ಜಿಎಸ್‌ಟಿ ಇಂಪ್ಯಾಕ್ಟ್ ವಾಂತಿ, ಚಟ್ಟದ ಮೇಲೂ ಆಯ್ತಾ ಅಂತ ಅಚ್ಚರಿ ಆಗಬೇಡಿ. ಜಿಎಸ್‌ಟಿ ಮೇಲೆ ನಿರ್ದೇಶಕ ಯೋಗರಾಜ್‌ ಭಟ್‌ ಬರೆದ ಹಾಡಿನ ಮೊದಲ ಸಾಲಿನ ಸಾಹಿತ್ಯ ಹೀಗಿದೆ. 

ಊಟಕ್ಕೂ ಟ್ಯಾಕ್ಸು, ವಾಂತಿಗೂ ಟ್ಯಾಕ್ಸು, ಹುಟ್ಟು ಚಟ್ಟಕ್ಕೆ ತೆರಿಗೆ ಫಿಕ್ಸು , ಹೊಡಿ ಒಂಬತ್ತ್....! ಅರೆ, ಇದೇನು ಜಿಎಸ್‌ಟಿ ಇಂಪ್ಯಾಕ್ಟ್ ವಾಂತಿ, ಚಟ್ಟದ ಮೇಲೂ ಆಯ್ತಾ ಅಂತ ಅಚ್ಚರಿ ಆಗಬೇಡಿ. ಜಿಎಸ್‌ಟಿ ಮೇಲೆ ನಿರ್ದೇಶಕ ಯೋಗರಾಜ್‌ ಭಟ್‌ ಬರೆದ ಹಾಡಿನ ಮೊದಲ ಸಾಲಿನ ಸಾಹಿತ್ಯ ಹೀಗಿದೆ. 

ಊಟಕ್ಕೂ ಟ್ಯಾಕ್ಸು, ವಾಂತಿಗೂ ಟ್ಯಾಕ್ಸು ಹುಟ್ಟು ಚಟ್ಟಕ್ಕೆ ತೆರಿಗೆ ಫಿಕ್ಸು ಹೊಡಿ ಒಂಬತ್ತ್
ಸ್ನಾನಕ್ಕೆನಿಂತ್ರೆ ಚೊಂಬಿಗೆ ಟ್ಯಾಕ್ಸು, ಬ್ಲೇಡಿನ ಟ್ಯಾಕ್ಸು ಗಡ್ಡಕ್ಕೆ ಸಿಗ್ಸು ಹೊಡಿ ಒಂಬತ್ತ್
ಜಿ.ಎಸ್‌.ಟಿ ಬಂತೋ
ಜಿ.ಎಸ್‌.ಟಿ ಬಂದ್ಬಿಡ್ತೋ..
ಅದರರ್ಥಏನಂತ..
ಇಲ್ಯಾವನಿಗ್ಗೊತ್ತೋ?!
ಕಾಸಿದ್ದೋನೇಕಾಸ್‌ ಮಾಡೋದು ಹೊಡಿ ಒಂಬತ್ತ್
ಕಾಸೇಇಲ್ದಿರವ್ನು ಏನ್‌ ಮಾಡೋದು? ಹೊಡಿ ಒಂಬತ್ತ್
ಹೊಡಿಒಂಬತ್ತ್

ದೇಶಾದ್ಯಂತ ಈಗ ಜಿಎಸ್‌ಟಿ ಸುದ್ದಿ. ಹೋದಲ್ಲಿ, ಬಂದಲ್ಲಿ ಈಗ ಅದರದ್ದೇ ಚರ್ಚೆ. ಇದೇ ಗ್ಯಾಪ್‌ನಲ್ಲಿ ನಿರ್ದೇಶಕ ಯೋಗರಾಜ್‌ ಭಟ್‌ ತಮ್ಮದೇ ಸ್ಟೈಲ್‌ನಲ್ಲಿ ಜಿಎಸ್‌ಟಿ ಮೇಲೊಂದು ಹಾಡು ಗೀಚಿದ್ದಾರೆ. 

‘ಜಿಎಸ್‌ಟಿ ಬಂತೋ, ಜಿಎಸ್‌ಟಿ ಬಂದ್ಬಿಡ್ತೋ, ಅದರರ್ಥ ಏನಂತ.., ಇಲ್ಯಾವನಿಗ್‌ ಗೋತ್ತೋ?! ಎಂದು ಪ್ರಶ್ನಿಸುವ ಭಟ್ಟರು, ‘ಕಾಸಿದ್ದೋನೆ ಕಾಸ್‌ ಮಾಡೋದು ಹೊಡಿ ಒಂಬತ್ತ್' ಎಂದಿದ್ದಾರೆ. ಭಟ್ಟರು ಇದನ್ನು ‘ಮುಗುಳುನಗೆ' ಚಿತ್ರದ ಪ್ರಚಾರಕ್ಕಾಗಿ ಬರೆದಿದ್ದು, ಹರಿಕೃಷ್ಣ ಸಂಗೀತದಲ್ಲಿ ಗೋಲ್ಡನ್‌ಸ್ಟಾರ್‌ ಗಣೇಶ್‌ ಹಾಗೂ ದುನಿಯಾ ವಿಜಯ್‌ ಈ ಗೀತೆಗೆ ಧ್ವನಿ ನೀಡಿದ್ದಾರೆ. ನಗರದ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಗುರುವಾರ ಈ ಹಾಡಿನ ರೆಕಾರ್ಡಿಂಗ್‌ ಕೆಲಸ ನಡೆಯಿತು. ಹರಿಕೃಷ್ಣ ಟ್ಯೂನ್‌, ಗಣೇಶ್‌, ವಿಜಯ್‌ ಗಾನ. 

ವಾಟ್ಸಾಪ್‌, ಮೊಬೈಲ್‌ನಲ್ಲಿ ಜಿಎಸ್‌ಟಿ ಸಾಕಷ್ಟುಸುದ್ದಿ ಆಗುತ್ತಿದೆ. ಆದರೆ ಸುಮಾರು ಜನರಿಗೆ ಅದು ಅರ್ಥವಾಗಿಲ್ಲ. ಸಾಕಷ್ಟುಚರ್ಚೆ ಆಗುತ್ತಿದೆ. ಅದನ್ನು ಒಂದಷ್ಟುತಮಾಷೆ ಆಗಿ ಇಟ್ಟುಕೊಂಡು ಈ ಹಾಡು ಬರೆದೆ. ಮುಗುಳುನಗೆ ಚಿತ್ರದ್ದೇ ಒಂದು ಧಾಟಿಗೆ ಅದನ್ನು ರಚಿಸಿದೆ. ಗಣೇಶ್‌, ವಿಜಯ್‌ ಹಾಗೂ ಹರಿಕೃಷ್ಣ ಹಾಡಿದ್ದಾರೆ. ತುಂಬಾ ಚೆನ್ನಾಗಿದೆ. 

-ಯೋಗರಾಜ್ ‌ ಭಟ್‌ ನಿರ್ದೇಶಕ

ಕಾಲದ ಸಂದರ್ಭವನ್ನು ಯೋಗರಾಜ್‌ ಭಟ್‌ ತಮ್ಮ ಚಿತ್ರಗಳ ಪ್ರಚಾರಕ್ಕೆ ಭರ್ಜರಿಯಾಗಿ ಬಳಸಿಕೊಳ್ಳುತ್ತಾರೆ. ಈ ಹಿಂದೆ ‘ದನ ಕಾಯೋನು' ಚಿತ್ರದ ಬಿಡುಗಡೆಗೂ ಮುನ್ನ ಕಾವೇರಿ ಮೇಲೊಂದು ಸಾಹಿತ್ಯ ಬರೆದು, ಅದನ್ನು ಜನಜನಿತಗೊಳಿಸಿದ್ದರು. ಅದನ್ನು ನಟ ದುನಿಯಾ ವಿಜಯ್‌ ಹಾಡಿದ್ದರು. ಸೋಷಿಯಲ್‌ ಮೀಡಿಯಾದಲ್ಲಿ ಆ ಹಾಡು ವೈರಲ್‌ ಆಗಿ, ಸಾಕಷ್ಟುಜನಪ್ರಿಯತೆ ಸಿಕ್ಕಿತ್ತು. ಅದಕ್ಕೂ ಮುನ್ನ ‘ಪರಪಂಚ' ಚಿತ್ರದ ಬಿಡುಗಡೆ ಸಂದರ್ಭದಲ್ಲಿ ಯೋಗರಾಜ್‌ ಭಟ್ಟರಿಗೆ ಸಿಕ್ಕಿದ್ದು ನಟ ಹುಚ್ಚ ವೆಂಕಟ್‌. ಬಿಗ್‌ಬಾಸ್‌ ಜನಪ್ರಿಯತೆಯಲ್ಲಿದ್ದ ವೆಂಕಟ್‌ ಕಡೆಯಿಂದ ಒಂದು ಹಾಡು ಹಾಡಿಸಿ, ಅದನ್ನು ‘ಪರಪಂಚ' ಚಿತ್ರಕ್ಕೆ ಬಳಸಿಕೊಂಡಿದ್ದರು.