ಬೆಂಗಳೂರು(ಮೇ.16): ದುನಿಯಾ ವಿಜಯ್‌ ಅಭಿನಯದ ‘ಮಾಸ್ತಿಗುಡಿ' ನಾಲ್ಕು ದಿನಗಳ ಪ್ರದರ್ಶನ ಪೂರೈಸಿದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಟನೆಗೆ ಮೆಚ್ಚುಗೆ, ಕತೆಯ ನಿರೂಪಣೆಯ ಬಗ್ಗೆ ಆಕ್ಷೇಪ ಸೇರಿದಂತೆ ಭಿನ್ನಾಭಿಪ್ರಾಯಗಳಿವೆ.

ಇದೀಗ ಚಿತ್ರತಂಡ ಚಿತ್ರದ ಕೆಲ ದೃಶ್ಯಗಳಿಗೆ ಕತ್ತರಿ ಹಾಕಲು ಮುಂದಾಗಿದೆ. ಸುಮಾರು 12 ನಿಮಿಷಗಳಷ್ಟುಅವಧಿಯ ದೃಶ್ಯಗಳಿಗೆ ಟ್ರಿಮ್ಮಿಂಗ್‌ ಕೆಲಸ ಶುರುವಾಗಿದೆ. ನಿರ್ದೇಶಕ ನಾಗ­ ಶೇಖರ್‌ ಹಾಗೂ ನಿರ್ಮಾಪಕ ಸುಂದರ್‌ ಗೌಡ ಚೆನ್ನೈನಲ್ಲಿದ್ದಾರೆ.ಟ್ರಿಮ್ಮಿಂಗ್‌ ಮಾಡಿ, ಸೆನ್ಸಾರ್‌ಗೆ ಭಾನು­ ವಾರವೇ ಆನ್‌ಲೈನ್‌ ಮೂಲಕ ಅರ್ಜಿ ಹಾಕಲಾಗಿದೆ. ಮಂಗಳವಾರ ಸಂಜೆ­ಯೊಳಗೆ ಟ್ರಿಮ್ಮಿಂಗ್‌ ಹಾಗೂ ಸೆನ್ಸಾರ್‌ ಕೆಲಸ ಮುಗಿದು, ಆ ದಿನ ಸಂಜೆಯಿಂದಲೇ ರಾಜ್ಯದ ಎಲ್ಲ ಚಿತ್ರ ಮಂದಿರಗಳಲ್ಲೂ ಹೊಸ ವರ್ಷನ್‌ ಲಭ್ಯ.

ಕೆಲವು ಸನ್ನಿವೇಶ ತೆಗೆದು ಹಾಕಿ, ಒಂದಷ್ಟುಹೊಸ ದೃಶ್ಯ ಸೇರಿಸಲಾಗುತ್ತಿದೆ. ಕ್ಲೈಮ್ಯಾಕ್ಸ್‌ ಹಂತದ ಚೇಸಿಂಗ್‌ ಸನ್ನಿವೇಶದಲ್ಲಿ ದುನಿಯಾ ವಿಜಯ್‌ ಜತೆಗೆ ಖಳನಟರಾದ ಅನಿಲ್‌ ಹಾಗೂ ಉದಯ್‌ ಹೆಲಿಕಾಪ್ಟರ್‌ನಿಂದ ನೀರಿಗೆ ಜಿಗಿಯುವ ಸಂದರ್ಭದಲ್ಲಿ ಸಂದೇಶವಿರುವ ದೃಶ್ಯವೊಂದನ್ನು ಸೇರಿಸಲಾಗಿದೆ.

ವರದಿ: ಕನ್ನಡಪ್ರಭ, ಸಿನಿವಾರ್ತೆ