ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ. ನೆಚ್ಚಿನ ನಟಿಯನ್ನು ಭೇಟಿ ಮಾಡಬೇಕೆಂಬ ಆಸೆಯಿಂದ ಯುವಕನೊಬ್ಬ 60 ಲಕ್ಷ ಕಳೆದುಕೊಂಡಿದ್ದಾನೆ. 

ತಮಿಳುನಾಡಿನ ರಾಮನಾಥಪುರಂ ನ ಯುವಕನೊಬ್ಬ ನಟಿ ಕಾಜಲ್ ಅಗರ್ ವಾಲ್ ಅಪ್ಪಟ ಅಭಿಮಾನಿ. ಹೀಗೆ ಬ್ರೌಸ್ ಮಾಡುತ್ತಿದ್ದಾಗ ವೆಬ್ ಪೇಜೊಂದು ಓಪನ್ ಆಗುತ್ತೆ. ಅಲ್ಲಿ ನಿಮ್ಮ ನೆಚ್ಚಿನ ನಟಿಯನ್ನು ಭೇಟಿಯಾಗಬಹುದು ಎಂಬ ಜಾಹಿರಾತು ಕಣ್ಣಿಗೆ ಬೀಳುತ್ತದೆ. ಆಗ ಈ ಯುವಕ ಕಾಜಲ್ ಭೇಟಿ ಮಾಡುವ ಆಸೆಯಿಂದ ಅದನ್ನು ಕ್ಲಿಕ್ ಮಾಡುತ್ತಾನೆ. ಆಗ ಸೈಬಲ್ ವಂಚಕರು ಚಾಲಾಕಿತನ ತೋರಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ 50 ಸಾವಿರ ಪೇಮೆಂಟ್ ಮಾಡಲು ಕೇಳುತ್ತಾರೆ ಜೊತೆಗೆ ಆತನ ವೈಯಕ್ತಿ ವಿವರವನ್ನು ಪಡೆದುಕೊಳ್ಳುತ್ತಾರೆ. 

ಆತ ಹಿಂದೂ ಮುಂದು ನೋಡದೇ 50 ಸಾವಿರ ಪೇ ಮಾಡುತ್ತಾನೆ.  ಒಂದು ಸಲ ಕೊಟ್ಟಿದ್ದೇ ತಡ ಮತ್ತೆ ಮತ್ತೆ ಕೊಡುವಂತೆ ಸೈಬರ್ ವಂಚಕರು ಬೇಡಿಕೆ ಇಡುತ್ತಾರೆ. ಈತ ನಿರಾಕರಿಸಿದಾಗ ಅವನ ಖಾಸಗಿ ಫೋಟೋಗಳನ್ನು ಲೀಕ್ ಮಾಡುವುದಾಗಿ ಬೆದರಿಕೆ ಒಡ್ಡುತ್ತಾರೆ. ಕೊನೆಗೆ 60 ಲಕ್ಷ ರೂಗಳನ್ನು ಮೂರು ಇನ್ಸ್ಟಾಲ್ ಮೆಂಟ್ ನಲ್ಲಿ ಪೇ ಮಾಡುತ್ತಾನೆ. ನಂತರ ಪೊಲೀಸರಿಗೆ ದೂರು ನೀಡುತ್ತಾನೆ. ಇದೀಗ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.