ಇಂದು ನಟ ರೆಬಲ್ ಸ್ಟಾರ್ ಅಂಬರೀಶ್ ರವರ 65ನೇ ವರ್ಷದ ಜನ್ಮ ದಿನಾಚರಣೆ ಸಂಭ್ರಮ. ಈ ಹಿನ್ನಲೆ ಜಯನಗರದಲ್ಲಿರುವ ತಮ್ಮ ನಿವಾಸದಲ್ಲಿ ತಡ ರಾತ್ರಿ 12ಗಂಟೆ ಸುಮಾರಿಗೆ ಅಭಿಮಾನಿಗಳ ಸಮ್ಮುಖದಲ್ಲಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.
ಬೆಂಗಳೂರು(ಮೇ.29): ಇಂದು ನಟ ರೆಬಲ್ ಸ್ಟಾರ್ ಅಂಬರೀಶ್ ರವರ 65ನೇ ವರ್ಷದ ಜನ್ಮ ದಿನಾಚರಣೆ ಸಂಭ್ರಮ. ಈ ಹಿನ್ನಲೆ ಜಯನಗರದಲ್ಲಿರುವ ತಮ್ಮ ನಿವಾಸದಲ್ಲಿ ತಡ ರಾತ್ರಿ 12ಗಂಟೆ ಸುಮಾರಿಗೆ ಅಭಿಮಾನಿಗಳ ಸಮ್ಮುಖದಲ್ಲಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.
ನಗರದ ಹಲವು ಕಡೆಗಳಿಂದ ಬಂದಿದ್ದ ನೂರಾರು ಅಭಿಮಾನಿಗಳು ರೆಬೆಲ್ ಸ್ಟಾರ್'ಗೆ ಹುಟ್ಟು ಹಬ್ಬದ ಶುಭ ಕೋರಿದರು. ತಮ್ಮ ನೆಚ್ಚಿನ ನಟನ ಕಟೌಟ್'ಗಳನ್ನ ಮನೆಯ ಸುತ್ತಾ ಇಟ್ಟು ಸಂಭ್ರಮಿಸಿದ್ದು, ಮಂಡ್ಯದ ಗಂಡು, ನಾಡ ಪ್ರಭು ಕೆಂಪೇಗೌಡ, ಮಣ್ಣಿನ ಮಗ ಎಂದು ಜೈಕಾರವನ್ನ ಸಾರಿದರು.
ರೆಬೆಲ್ ಸ್ಟಾರ್ ಅಂಬರೀಶ್ ಈ ವೇಳೆ ಮಾತನಾಡಿ, ಇದಕ್ಕಿಂತ ಭಾಗ್ಯ ನನಗೆ ಮತ್ತೊಂದಿಲ್ಲ, ಇಷ್ಟರ ಮಟ್ಟಿಗೆ ಬೆಳೆದಿದ್ದೇನೆ ಎಂದರೆ ಅಭಿಮಾನಿಗಳೇ ಕಾರಣ, ಅಭಿಮಾನಿಗಳು ನಮಗೆ ಎಲ್ಲಾ ಮಾಡಿದ್ದಾರೆ, ಆದರೆ ನಾನು ಅವರಿಗೆ ಏನೂ ಮಾಡಿಲ್ಲ, ಆದರೂ ನನ್ನ ಮೇಲೆ ಇಷ್ಟು ಪ್ರೀತಿ ಇಟ್ಟಿದ್ದಾರೆ. ಸದಾ ನಾನು ಅಂಥಹ ಅಭಿಮಾನಿಗಳನ್ನ ಸ್ಮರಿಸಿದರು.
