ರ‌್ಯಾಂಬೋ-2 ಹಾಡಿಗೆ 3 ಮಿಲಿಯನ್ ಹಿಟ್ಸ್

3 Million hits for Rambo 2 Song
Highlights

ನಟ ಶರಣ್ ಅಭಿನಯದ ರ‌್ಯಾಂಬೋ-2’ ಚಿತ್ರ ಮ್ಯೂಜಿಕಲಿ ಹಿಟ್ ಎನಿಸಿಕೊಳ್ಳುತ್ತಿದೆ.  ರ‌್ಯಾಂಬೋ-2, ವಿಕ್ಟರಿ, ಅಧ್ಯಕ್ಷ ಚಿತ್ರಗಳಲ್ಲೂ ಹೀಗೆ ಹಾಡುಗಳು ಕೇಳುಗರ ಗಮನ ಸೆಳೆದಿದ್ದವು. ಈಗ ರ‌್ಯಾಂಬೋ-2’ ಹಾಡುಗಳು ಯೂಟ್ಯೂಬ್‌ನಲ್ಲಿ ಸಾಕಷ್ಟು ಸದ್ದು ಮಾಡುತ್ತಿವೆ. 

ನಟ ಶರಣ್ ಅಭಿನಯದ ರ‌್ಯಾಂಬೋ -2’ ಚಿತ್ರ ಮ್ಯೂಜಿಕಲಿ ಹಿಟ್ ಎನಿಸಿಕೊಳ್ಳುತ್ತಿದೆ. ರ‌್ಯಾಂಬೋ, ವಿಕ್ಟರಿ, ಅಧ್ಯಕ್ಷ ಚಿತ್ರಗಳಲ್ಲೂ ಹೀಗೆ ಹಾಡುಗಳು ಕೇಳುಗರ ಗಮನ ಸೆಳೆದಿದ್ದವು. ಈಗ ರ‌್ಯಾಂಬೋ- 2’ ಹಾಡುಗಳು ಯೂಟ್ಯೂಬ್‌ನಲ್ಲಿ ಸಾಕಷ್ಟು ಸದ್ದು ಮಾಡುತ್ತಿವೆ. 

‘ಚುಟ್ಟು ಚುಟ್ಟು..’ ಎನ್ನುವ ಹಾಡು 3 ಮಿಲಿಯನ್ ಹಿಟ್ಸ್ ದಕ್ಕಿಸಿಕೊಂಡಿದೆ. ‘ಯವ್ವ ಯವ್ವ’ ಎಂದು ಸಾಗುವ ಹಾಡಿಗೆ 9 ಲಕ್ಷ ಹಿಟ್ಸ್ ಸಿಕ್ಕಿದೆ. ‘ಬಿಟ್ ಹೋಗ್ಬೇಡ’ ಹಾಡು 1.7 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ಇನ್ನೂ ಇದೇ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಹಾಡಿರುವ ಹಾಡನ್ನು ಎರಡು ದಿನಗಳಲ್ಲೇ 6 ಲಕ್ಷ  ಮಂದಿ ನೋಡಿದ್ದಾರೆ. ಆ ಮೂಲಕ ‘ರ‌್ಯಾಂಬೋ-2’ ಚಿತ್ರದ ಹಾಡುಗಳು ಟ್ರೆಂಡ್ ಕ್ರಿಯೇಟ್ ಮಾಡುತ್ತಿವೆ.

ಯಾವುದೇ ಸಿನಿಮಾ ಮ್ಯೂಜಿಕಲಿ ಹಿಟ್ ಆದರೆ, ಆ ಚಿತ್ರವನ್ನು ಥಿಯೇಟರ್‌ಗೆ ಬಂದು ಪ್ರೇಕ್ಷಕ ಕೂಡ ನೋಡಿ ಗೆಲ್ಲಿಸುತ್ತಾನೆಂಬ ನಂಬಿಕೆ ಚಿತ್ರತಂಡದ್ದು. ಸಾಲದ್ದಕ್ಕೆ ಅರ್ಜುನ್ ಜನ್ಯ ಸಂಗೀತ ಕೂಡ ಈ ಚಿತ್ರದ ಹಾಡುಗಳಿಗೆ ಪ್ಲಸ್‌ಪಾಯಿಂಟ್ ಆಗಿದೆ. ಶರಣ್ ಹಾಗೂ ಆಶಿಕಾ ರಂಗನಾಥ್ ಜೋಡಿಯಾಗಿ ನಟಿಸಿರುವ ಈ ಚಿತ್ರದ ಹಾಡುಗಳು ಹೀಗೆ ಲಕ್ಷ, ಮಿಲಿಯನ್‌ಗಳ ಸಂಖ್ಯೆಯಲ್ಲಿ ಹಿಟ್'ಗಳನ್ನು ದಕ್ಕಿಸಿಕೊಳ್ಳುತ್ತಿದ್ದು, ಪ್ರೇಕ್ಷಕರಿಗೂ ಚಿತ್ರದ ಬಗ್ಗೆ ಕುತೂಹಲ ಮೂಡುತ್ತಿದೆ.
ಅನಿಲ್ ಕುಮಾರ್ ನಿರ್ದೇಶನದ, ಸುಧೀರ್ ಮತ್ತವರ ತಂಡ ನಿರ್ಮಾಣದ ಸಾರಥ್ಯ ವಹಿಸಿರುವ ಈ ಸಿನಿಮಾ ಮೇ.18 ರಂದು ತೆರೆಗೆ ಬರುತ್ತಿದೆ. ಥ್ರಿಲ್ಲರ್ ಡಾರ್ಕ್  ಕಾಮಿಡಿಯ ಸಿನಿಮಾ ಇದಾಗಿದ್ದು, ಶರಣ್ ಅವರ ಈ ಹಿಂದಿನ ಚಿತ್ರಗಳಿಗಿಂತಲೂ ಭಿನ್ನವಾಗಿರುತ್ತದೆಂಬ ನಂಬಿಕೆ ಚಿತ್ರತಂಡದ್ದು.

 

 

 

loader