ಸೂಪರ್ ಹಿಟ್ ಚಲನಚಿತ್ರ ‘ಬಾಹುಬಲಿ’ ಸೆಟ್ ನೋಡುವುದೇ ಕಣ್ಣಿಗೆ ಹಬ್ಬ. ಹಾಗಿದ್ದರೆ ಈ ಸೆಟ್‌ಗಳ ನ್ನು ಇನ್ನು ನೀವು ಯಾವಾಗ ಬೇಕಾದರೂ ವೀಕ್ಷಿಸಬಹುದು. ಹೈದರಾಬಾದ್‌ನಲ್ಲಿ 2000 ಎಕರೆ ಜಾಗದಲ್ಲಿ ಹಬ್ಬಿರುವ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಹಾಕಲಾಗಿದ್ದ ಈ ಸೆಟ್‌'ಗಳನ್ನು ಕಾಯಂ ಆಗಿ ಉಳಿಸಿಕೊಳ್ಳಲು ಫಿಲ್ಮ್ ಸಿಟಿ ನಿರ್ಧರಿಸಿದೆ.
ಹೈದರಾಬಾದ್(a.04): ಸೂಪರ್ ಹಿಟ್ ಚಲನಚಿತ್ರ ‘ಬಾಹುಬಲಿ’ ಸೆಟ್ ನೋಡುವುದೇ ಕಣ್ಣಿಗೆ ಹಬ್ಬ. ಹಾಗಿದ್ದರೆ ಈ ಸೆಟ್ಗಳ ನ್ನು ಇನ್ನು ನೀವು ಯಾವಾಗ ಬೇಕಾದರೂ ವೀಕ್ಷಿಸಬಹುದು. ಹೈದರಾಬಾದ್ನಲ್ಲಿ 2000 ಎಕರೆ ಜಾಗದಲ್ಲಿ ಹಬ್ಬಿರುವ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಹಾಕಲಾಗಿದ್ದ ಈ ಸೆಟ್'ಗಳನ್ನು ಕಾಯಂ ಆಗಿ ಉಳಿಸಿಕೊಳ್ಳಲು ಫಿಲ್ಮ್ ಸಿಟಿ ನಿರ್ಧರಿಸಿದೆ.
ಪ್ರವಾಸಿಗರ ವೀಕ್ಷಣೆಗೆ ಮಾಹಿಷ್ಮತಿ ಹಾಗೂ ಕುಂತಲ ಸಾಮ್ರಾಜ್ಯದ ಸೆಟ್'ಗಳು ಇನ್ನು ಮುಕ್ತವಾಗಿರಲಿದೆ. ಬೆಳಗ್ಗೆ 9ರಿಂದ 11.30ರವರೆಗೆ 1,250 ರು. ದರದಲ್ಲಿ (ಜನರಲ್ ಪ್ಯಾಕೇಜ್) ಸೆಟ್ಗಳನ್ನು ವೀಕ್ಷಿಸಬಹುದಾಗಿದೆ. ಇನ್ನು ಪ್ರೀಮಿಯಂ ಪ್ಯಾಕೇಜ್ನಡಿ 2,349 ರು. ಟಿಕೆಟ್ ಪಡೆದು ಬೆಳಗ್ಗೆ 9ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಎರಡೂ ಸಾಮ್ರಾಜ್ಯಗಳನ್ನು ಸುತ್ತಬಹುದಾಗಿದೆ.
ಶಾಲಾ-ಕಾಲೇಜುಗಳು ಹಾಗೂ ಕಾರ್ಪೋರೆಟ್ ಕಂಪನಿಗಳು ಕೂಡ ಸಾಮೂಹಿಕ ಬುಕ್ಕಿಂಗ್ ಮಾಡಲು ಅವಕಾಶವಿದೆ. 100 ಎಕರೆ ಜಾಗದಲ್ಲಿ 60 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ವೈಭವದ ಸೆಟ್ಟನ್ನು ಹಾಗೇ ಉಳಿಸಿಕೊಳ್ಳುವ ಫಿಲ್ಮ್ ಸಿಟಿ ಕೋರಿಕೆಯನ್ನು ಬಾಹುಬಲಿ ನಿರ್ಮಾಪಕರು ಮುಕ್ತ ಮನಸ್ಸಿ ನಿಂದ ಒಪ್ಪಿಕೊಂಡರು ಎಂದು ಮೂಲಗಳು ಹೇಳಿವೆ.
