ಗುವಾಹಟಿ(ಸೆ.22) ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಂಗಳವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಐಐಟಿ ಗುವಾಹಟಿಯ ಘಟಿಕೋತ್ಸವ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ್ದಾರೆ. ದೇಶದ ಯುವಕರೇನು ಯೋಚಿಸುತ್ತಾರೆ ಎಂಬುವುದರ ಮೇಲೆ ದೇಶದ ಭವಿಷ್ಯ ನಿರ್ಧಾರವಾಗುತ್ತದೆ. ನಿಮ್ಮ ಕನಸುಗಳು ನಾಳಿನ ಭಾರತದ ವಾಸ್ತವತೆಗೆ ಆಧಾರವಾಗುತ್ತದೆ. ಆದ್ದರಿಂದ ಇದು ಭವಿಷ್ಯಕ್ಕಾಗಿ ತಯಾರಿ ಮಾಡುವ ಸಮಯ, ಈ ಸಮಯವು ಭವಿಷ್ಯಕ್ಕೆ ಸರಿಹೊಂದುವ ಸಮಯವಾಗಿದೆ.

ಫಿಟ್ ಇಂಡಿಯಾ 2020: ಕೊಹ್ಲಿ, ಮಿಲಿಂದ್ ಸೋಮನ್ ಜೊತೆ ಚರ್ಚಿಸಲಿದ್ದಾರೆ ಮೋದಿ!

ದೇಶದಲ್ಲಿ ರಿಸರ್ಚ್ ಕಲ್ಚರ್ ಸಮೃದ್ಧಿಗೊಳಿಸಲು NEPಯಲ್ಲಿ ನ್ಯಾಷನಲ್ ರಿಸರ್ಚ್ ಫೌಂಡೇಷನ್ ಬಗ್ಗೆಯೂ ಪ್ರಸ್ತಾಪವಾಗಿದೆ. NRF ರಿಸರ್ಚ್ ಫಂಡಿಂಗ್ ಏಜೆನ್ಸಿಗಳ ಜೊತೆ ಕೋ ಆರ್ಡಿನೇಟ್ ಮಾಡುತ್ತದೆ. ಅದು ವಿಜ್ಞಾನವಾಗಲಿ, ಹ್ಯುಮಾನಿಟೀಸ್ ಆಗಿರಲಿ ಯಾವುದೇ ವಿಭಾಗವಾಗಿದ್ದರೂ ಫಂಡ್ ನೀಡುತ್ತದೆ ಎಂದಿದ್ದಾಋಎ.

ರಿಸರ್ಚ್ ನಿಮ್ಮ ಯೋಚನೆ ಎಂಬ ಪ್ರಕ್ರಿಯೆಯ ಒಂದು ಭಾಗ

ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಾ ಇಂದು ಈ ಘಟಿಕೋತ್ಸವದಲ್ಲಿ ನಮ್ಮ ಸುಮಾರು 300 ಯುವ ಜೊತೆಗಾರರಿಗೆ PhD ಪ್ರಧಾನ ಮಾಡಲಾಗುತ್ತಿದೆ ಎಂದು ನನಗೆ ಖುಷಿಯಾಗುತ್ತದೆ. ಇದೊಂದು ಧನಾತ್ಮಕ ಟ್ರೆಂಡ್ ಆಗಿದೆ. ನೀವು ಇಲ್ಲಿಗೇ ನಿಲ್ಲುವದಿಲ್ಲ. ರಿಸರ್ಚ್ ಎಂಬುವುದು ನಿಮ್ಮ ನಿತ್ಯದ ಅಭ್ಯಾಸವಾಗಲಿದೆ ಈ ಮೂಲಕ ಇದು ನಿಮ್ಮ ಯೋಚನಾ ಪ್ರಕ್ರಿಯೆಯ ಒಂದು ಭಾಗವಾಗಲಿದೆ ಎಂದಿದ್ದಾರೆ.

ಕೊರೋನಾ ವಾರಿಯರ್ಸ್‌ ಮೇಲೆ ಹಲ್ಲೆ ಮಾಡಿದ್ರೆ ಸೀದಾ ಜೈಲು, ನೋ ಬೇಲ್!

1,803 ವಿದ್ಯಾರ್ಥಿಗಳಿಗೆ ಸಿಕ್ಕಿತು ಡಿಗ್ರಿ

ಐಐಟಿ ಗುವಾಹಟಿಯ ಘಟಿಕೋತ್ಸವದಲ್ಲಿ ಅಸ್ಸಾಂನ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್, ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಸೇರಿ ಅನೇಕ ಮಂದಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಈ ಕಾರ್ಯಕ್ರಮದಲ್ಲಿ 687 ಬಿ. ಟೆಕ್ ಹಾಗೂ 637 ಎಂ. ಟೆಕ್ ವಿದ್ಯಾರ್ಥಿಗಳು ಸೇರಿ 1,803 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಗಿದೆ.