ವಿವಿಯ ಅಭಿಯಂತರ ವಿಭಾಗ, ಆರೋಗ್ಯ ವಿಭಾಗ, ಸಾರಿಗೆ ವಿಭಾಗ ಹೊರತು ಪಡಿಸಿ ಉಳಿದೆಲ್ಲ ವಿಭಾಗಗಳ ಸಿಬ್ಬಂದಿಗೆ ಮನೆಯಿಂದಲೇ ಕೆಲಸ| ತುರ್ತು ಪರಿಸ್ಥಿತಿಯಲ್ಲಿ ಸಂಪರ್ಕಿಸಲು ಎಲ್ಲರೂ ದೂರವಾಣಿ ಸಂಖ್ಯೆಯನ್ನು ಮೇಲಾಧಿಕಾರಿಗಳಿಗೆ ನೀಡಬೇಕು|ಈ ನಿಯಮ ಏ.28ರಿಂದ ಮೇ 11ರವರೆಗೆ ಜಾರಿ| 

ಬೆಂಗಳೂರು(ಏ.28): ಕೊರೋನಾ ಭೀತಿ ಕಾರಣದಿಂದ ಬೆಂಗಳೂರು ವಿಶ್ವವಿದ್ಯಾಲಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಮೇ 11ರವರೆಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿದೆ.

ವಿವಿಯ ಅಭಿಯಂತರ ವಿಭಾಗ, ಆರೋಗ್ಯ ವಿಭಾಗ, ಸಾರಿಗೆ ವಿಭಾಗ ಹೊರತು ಪಡಿಸಿ ಉಳಿದೆಲ್ಲ ವಿಭಾಗಗಳ ಸಿಬ್ಬಂದಿ ಮನೆಯಿಂದಲೇ ಕೆಲಸ ಮಾಡಬೇಕು. ತುರ್ತು ಪರಿಸ್ಥಿತಿಯಲ್ಲಿ ಸಂಪರ್ಕಿಸಲು ಎಲ್ಲರೂ ದೂರವಾಣಿ ಸಂಖ್ಯೆಯನ್ನು ಮೇಲಾಧಿಕಾರಿಗಳಿಗೆ ನೀಡಬೇಕು. 

ಇಂಜಿನಿಯರಿಂಗ್, ಡಿಪ್ಲೊಮಾ ಪರೀಕ್ಷೆ ಮುಂದೂಡಿಕೆ

ಈ ಅವಧಿಯಲ್ಲಿ ಬೋಧಕೇತರ ಸಿಬ್ಬಂದಿ ಯಾವುದೇ ಕಾರಣಕ್ಕೂ ಕೇಂದ್ರ ಸ್ಥಾನವನ್ನು ಬಿಡುವಂತಿಲ್ಲ. ವಿವಿ ಸಿಬ್ಬಂದಿ ಸೇವೆ ಅಗತ್ಯವಿದ್ದಾಗ ಅಧಿಕಾರಿ, ನೌಕರರು ಯಾವುದೇ ಕಾರಣ ನೀಡದೆಯೇ ಕಡ್ಡಾಯವಾಗಿ ಹಾಜರಾಗಬೇಕು. ಈ ನಿಯಮ ಏ.28ರಿಂದ ಮೇ 11ರವರೆಗೆ ಜಾರಿಯಲ್ಲಿರಲಿದೆ.

ಇನ್ನು ವಿವಿ ವ್ಯಾಪ್ತಿಯ ಎಲ್ಲ ಸಂಯೋಜಿತ ಕಾಲೇಜುಗಳು ಸ್ನಾತಕೋತ್ತರ ಕೋರ್ಸ್‌ನ 4ನೇ ಸೆಮಿಸ್ಟರ್‌ ತರಗತಿಗಳನ್ನು ಆನ್‌ಲೈನ್‌ನಲ್ಲಿ ಆರಂಭಿಸುವಂತೆ ಸೂಚನೆ ನೀಡಿದೆ. ಸೋಂಕು ವಿಸ್ತರಿಸುತ್ತಿರುವುದರಿಂದ ಮೇ 5ರಿಂದ ತರಗತಿಗಳನ್ನು ಆನ್‌ಲೈನ್‌ನಲ್ಲಿ ನಡೆಸಲು ವಿವಿ ಸೂಚಿಸಿದೆ. ಒಂದನೇ ಸೆಮಿಸ್ಟರ್‌ ತರಗತಿಗಳ ಬಗ್ಗೆ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಾಗುವುದು ಎಂದು ವಿವಿ ಪ್ರಕಟಣೆ ತಿಳಿಸಿದೆ.