Asianet Suvarna News Asianet Suvarna News

ಸುರಾನ ಕಾಲೇಜಿನ ವಿದ್ಯಾರ್ಥಿನಿಯರಿಂದ ಬೈಕ್‌ ರ‍್ಯಾಲಿ ಮೂಲಕ ಸಮಾನತೆಯ ಸಂದೇಶ

* ಸುರಾನ ಕಾಲೇಜಿನ ವಿದ್ಯಾರ್ಥಿನಿಯರಿಂದ ಬೈಕ್‌ ರ‍್ಯಾಲಿ ಮೂಲಕ ಸಮಾನತೆಯ ಸಂದೇಶ
* ನಗರದ ವಿವಿಧ ಭಾಗಗಳಲ್ಲಿ ಸಂಚರಿಸಿ ವಿಧಾನಸೌಧದ ಬಳಿ ಮುಕ್ತಾಯವಾದ ಬೈಕ್‌ ಮೇಲೆ ರ‍್ಯಾಲಿ
* ಈ ಮೂಲಕ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿದರು

Womens Day Special Bengaluru Surana college students equality message through bike rally rbj
Author
First Published Mar 9, 2022, 8:37 PM IST | Last Updated Mar 9, 2022, 8:37 PM IST

ಬೆಂಗಳೂರು ಮಾರ್ಚ್‌ 09: ಸುರಾನಾ ಕಾಲೇಜಿನ ರ‍್ಯಾಲಿ ವಿದ್ಯಾರ್ಥಿನಿಯರು ಇಂದು ಬೈಕ್‌ ರ‍್ಯಾಲಿ (Bike Rally) ಆಯೋಜಿಸಿ ಸಮಾನತೆಯ ಸಂದೇಶ ಸಾರುವ ಮೂಲಕ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು (International Women's Day) ವಿಶೇಷವಾಗಿ ಆಚರಿಸಿದರು. 

ಬೆಂಗಳೂರಿನ (Bengaluru) ಸೌತ್‌ ಎಂಡ್‌ ಸರ್ಕಲ್‌ ಬಳಿಯಿರುವ ಸುರಾನಾ ಕಾಲೇಜಿನ ಬಳಿಯಿಂದ ಪ್ರಾರಂಭವಾದ ಬೈಕ್‌ ರ‍್ಯಾಲಿಗೆ ಮೈಕ್ರೋ ಲ್ಯಾಬ್‌ನ ಸಿಎಂಡಿ ದಿಲೀಪ್‌ ಸುರಾನಾ ಹಾಗೂ ದೇಶದ ಹೈಜಂಪ್‌ ಕ್ರೀಡಾಪಟು ಸಹನಾ ಕುಮಾರಿ ಚಾಲನೆ ನೀಡಿದರು. ನೂರಕ್ಕೂ ಹೆಚ್ಚು ಬೈಕ್‌ಗಳ ಮೇಲೆ ಬ್ರೇಕ್‌ ದ ಬಯಾಸ್‌ ಭಿತ್ತಿಪತ್ರಗಳನ್ನು ಹಿಡಿದುಕೊಂಡಂತಹ ವಿದ್ಯಾರ್ಥಿನಿಯರು ತಂಡವನ್ನು ಕಾಲೇಜಿನ ಹಿರಿಯ ವಿದ್ಯಾರ್ಥಿ ನ್ಯಾಷನಲ್‌ ಬೈಕ್‌ ರೇಸರ್‌ ಆದಂತಹ ಐಶ್ವರ್ಯಾ ಪಿಸೆ ಅವರು ನಗರದ ವಿವಿಧ ಭಾಗಗಳಲ್ಲಿ ಮುನ್ನಡೆಸಿದರು. ಮಹಿಳಾ ಮತ್ತು ಪುರುಷ ಸಮಾನತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು. 

ಪೊಲೀಸ್ ಠಾಣೆಯಲ್ಲಿ ಮಹಿಳಾ ದಿನಾಚರಣೆ,ಮನಸ್ಸಿಗೆ ಮುದ ನೀಡಿದ ಆಟಗಳು

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹೈಜಂಪ್‌ನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಕ್ರೀಡಾಪಟು ಸಹನಾ ಕುಮಾರಿ ಮಾತನಾಡಿ, ಅಮಿತವಾದ ಉತ್ಸಾಹ ಹಾಗೂ ಪರಿಶ್ರಮದಿಂದ ಮಹಿಳೆಯರು ಏನನ್ನು ಬೇಕಾದರೂ ಸಾಧಿಸಬಹುದಾಗಿದೆ. ಆ ಸಾಧನೆಯನ್ನು ಮಾಡುವಂತಹ ಅಮಿತ ಉತ್ಸಾಹವನ್ನು ವಿದ್ಯಾರ್ಥಿನಿಯರು ಪಡೆದುಕೊಳ್ಳಬೇಕು ಎಂದರು. 

ಸುರಾನಾ ಕಾಲೇಜಿನ ಕಾರ್ಯನಿರ್ವಾಹಕ ಟ್ರಸ್ಟಿ ಅರ್ಚನಾ ಸುರಾನ ಮಾತನಾಡಿ, ಮಹಿಳೆಯರಲ್ಲಿ ಪ್ರತಿಭೆಗೆ ಕೊರತೆಯಿಲ್ಲ. ಆದರೆ, ಅವಕಾಶಗಳ ಕೊರತೆ ಹೆಚ್ಚಾಗಿದೆ. ಇದನ್ನು ಲಿಂಗ ಸಮಾನ ಸಮಾಜ ಮಾತ್ರ ಸರಿಪಡಿಸಬಲ್ಲದು. ಮಹಿಳೆಯರು ಇರುವಂತಹ ಅವಕಾಶಗಳನ್ನು ಬಳಸಿಕೊಳ್ಳುವ ಮೂಲಕ ಸಾಧನೆ ಮಾಡುವತ್ತ ಹೆಚ್ಚಿನ ಗಮನ ಹರಿಸಬೇಕು. ಇಂದು ವಿದ್ಯಾರ್ಥಿನಿಯರು ಬೈಕ್‌ ಓಡಿಸುವ ಮೂಲಕ ತಾವೂ ಪುರುಷರಿಗಿಂತಾ ಕಡಿಮೆಯಿಲ್ಲ ಎನ್ನುವುದನ್ನ ತೋರಿಸಿದ್ದಾರೆ ಎಂದರು. 

ಸುರಾನಾ ಕಾಲೇಜಿನ ಸ್ಟೂಡೆಂಟ್‌ ಕೌನ್ಸಿಲ್‌ ಮತ್ತು ಶಿ ಸೆಲ್‌ (ಸೆಕ್ಸುಯಲ್‌ ಹರ್ರಾಸ್‌ಮೆಂಟ್‌ ಎಲಿಮಿನೇಷನ್‌) ಸೆಲ್‌ ಆಯೋಜಿಸಿದ್ದ ಬೈಕ್‌ ರ‍್ಯಾಲಿ ವಿಧಾನಸೌಧದಲ್ಲಿ ಸಮಾಪ್ತಿಯಾಯಿತು.

ಪೊಲೀಸ್‌ ಠಾಣೆಯಲ್ಲಿ ಮಹಿಳಾ ದಿನಾಚರಣೆ
ಬೆಂಗಳೂರು,  ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ(International Women’s Day 2022) ಹಿನ್ನಲೆಯಲ್ಲಿ ಬೆಂಗಳೂರು ನಗರದ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಮಹಿಳಾ ಸಿಬ್ಬಂದಿಯಿಂದ ಮಹಿಳಾ ದಿನಾಚರಣೆ ಆಚರಿಸಿದರು.

ಸದಾ ಲಾಠಿ ಇಟ್ಟಕೊಳ್ಳುವ ಮಹಿಳಾ ಸಿಬ್ಬಂದಿಯಿಂದ ಡ್ಯಾನ್ಸ್, ಮ್ಯೂಜಿಕಲ್ ಚೇರ್, ಮಡಿಕೆ ಒಡಿಯುವುದು ಸೇರಿ ಹಲವು ಮನರಂಜನಾ ಕಾರ್ಯಕ್ರಮಗಳನ್ನ ಆಯೋಜಿಸಲಾಗಿತ್ತು. ಹಾಗೇ ವಿಶೇಷ ಮನೋರಂಜನಾ ಕಾರ್ಯಕ್ರಮ, ಮನಸ್ಸಿಗೆ ಮುದ ನೀಡಿದ ಆಟಗಳು. ಪೊಲೀಸರ ಕಾರ್ಯಕ್ರಮಕ್ಕೆ  ಮಹಾರಾಣಿ ಕಾಲೇಜು ವಿದ್ಯಾರ್ಥಿಗಳು ಸಾಥ್ ನೀಡಿದರು.

Womens Day: ಸ್ತೀ ಉದ್ಯಮಿಗಳಿಗೆ 1 ಕೋಟಿ ವರೆಗೂ ಸಾಲ: ಸಚಿವ ಅಶ್ವತ್ಥ್‌ 
ರಾಜ್ಯದ(Karnataka) ಪ್ರತಿಯೊಂದು ಜಿಲ್ಲೆಯಲ್ಲೂ ಮುಂದಿನ ಒಂದು ವರ್ಷದಲ್ಲಿ ತಲಾ 1 ಸಾವಿರ ಮಹಿಳಾ ಉದ್ಯಮಿಗಳನ್ನು(Woman Entrepreneur) ಬೆಳೆಸಲು ಜೀವನೋಪಾಯ ಸಂವರ್ಧನೆ ಇಲಾಖೆಯು ತೀರ್ಮಾನಿಸಿದೆ. ಈ ಮೂಲಕ 30 ಸಾವಿರ ಸಾಧಕಿಯರನ್ನು ಗುರುತಿಸಿ, ಮುನ್ನೆಲೆಗೆ ತರಲಾಗುವುದು ಎಂದು ಜೀವನೋಪಾಯ ಇಲಾಖೆ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ(CN  Ashwathnarayan) ಹೇಳಿದ್ದಾರೆ.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೆಂಗಳೂರು(Bengaluru) ಉತ್ತರ ಜಿಲ್ಲಾ ಘಟಕವು ಮಲ್ಲೇಶ್ವರಂನ ಚೌಡಯ್ಯ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ(International Womens Day) ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.

ಮಹಿಳೆಯರ ಸಬಲೀಕರಣಕ್ಕೆ ಉತ್ತೇಜನ ನೀಡಲು ಸ್ವಸಹಾಯ ಸಂಘಗಳಲ್ಲಿ ಸಕ್ರಿಯರಾಗಿರುವ ಸ್ತೀ ಉದ್ಯಮಿಗಳಿಗೆ ಯಾವುದೇ ಖಾತ್ರಿ ಇಲ್ಲದೆ 1 ಕೋಟಿ ರೂ.ವರೆಗೂ ಬ್ಯಾಂಕ್ ಸಾಲ(Bank Loan) ಕೊಡಲಾಗುತ್ತಿದೆ. ಜೊತೆಗೆ, ಮಹಿಳೆಯರೇ ತಯಾರಿಸುತ್ತಿರುವ ಉತ್ಪನ್ನಗಳಿಗೆ ಸರಕಾರವೇ ಇ-ಕಾಮರ್ಸ್(E-commerce) ವೇದಿಕೆಯನ್ನು ಒದಗಿಸಲಿದೆ. ಅಲ್ಲದೆ, ಅಮೆಜಾನ್(Amazon) ಮತ್ತು ಫ್ಲಿಪ್ ಕಾರ್ಟ್(Flipkart) ತರಹದ ಬಹುರಾಷ್ಟ್ರೀಯ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಮಾರುಕಟ್ಟೆ(Market) ಸೃಷ್ಟಿಸಲಾಗುತ್ತಿದೆ ಎಂದು ಅವರು ಹೇಳಿದರು.

ಡಿಜಿಟಲೀಕರಣದ(Digitization) ಈ ಯುಗದಲ್ಲಿ ಮಹಿಳೆಯರು ವೈದ್ಯಕೀಯ, ಶಿಕ್ಷಣ, ಬ್ಯಾಂಕಿಂಗ್ ಮುಂತಾದ ಕ್ಷೇತ್ರಗಳಲ್ಲಿ ಮನೆಯಿಂದಲೇ ಸೇವೆ ಸಲ್ಲಿಸಬಹುದು. ಕೋವಿಡ್(Covid-19) ಸಾಂಕ್ರಾಮಿಕವು ಅನೇಕ ತೊಂದರೆಗಳನ್ನು ಸೃಷ್ಟಿಸಿದರೂ ಕೆಲವು ಸುಧಾರಣೆಗಳಿಗೂ ದಾರಿ ಮಾಡಿಕೊಟ್ಟಿತು. ಮಹಿಳೆಯರ ಸಬಲೀಕರಣದಲ್ಲಿ ಆಧುನಿಕ ತಂತ್ರಜ್ಞಾನದ ಪಾತ್ರ ನಿರ್ಣಾಯಕ ಮತ್ತು ಕ್ರಾಂತಿಕಾರಕವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

Latest Videos
Follow Us:
Download App:
  • android
  • ios