ವಿದ್ಯಾರ್ಥಿಗಳೇ ಗಮನಿಸಿ: ತರಗತಿ ಆರಂಭದ ಬಗ್ಗೆ ಹೊಸ ಮಾರ್ಗಸೂಚಿ ಪ್ರಕಟ...!

ಕೋವಿಡ್-19 ಹಿನ್ನೆಲೆಯಲ್ಲಿ ಯುಜಿಸಿಯು ಸ್ನಾತಕ ಹಾಗೂ ಸ್ನಾತಕೋತ್ತರದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಹೊಸ ಮಾರ್ಗಸೂಚಿ ಹಾಗೂ ವೇಳಾಪಟ್ಟಿ ಬಿಡುಗಡೆ ಮಾಡಿದೆ.

UGC issues guidelines on Examinations & 2020-21 Academic Calendar for UG PG Students rbj

ನವದೆಹಲಿ, (ಸೆ.25): 2020-21ನೇ ಸಾಲಿನ ಪ್ರಥಮ ವರ್ಷದ ತರಗತಿಗಳು ನವೆಂಬರ್​ ಒಂದರಿಂದಲೇ ಆರಂಭವಾಗಲಿವೆ. ಯುನಿವರ್ಸಿಟಿ ಗ್ರ್ಯಾಂಟ್​ ಕಮಿಷನ್​ (ಯುಜಿಸಿ) ಈ ಬಗ್ಗೆ ಹೊಸದಾಗಿ ಮಾರ್ಗಸೂಚಿ ಬಿಡುಗಡೆ ಮಾಡಿದೆ.

 ಇದನ್ನು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಕ್ರಿಯಾಲ್​ ನಿಶಾಂಕ್​ ಟ್ವೀಟ್​ ಮೂಲಕ ಈ ವಿಷಯ ಪ್ರಕಟಿಸಿದ್ದಾರೆ.  ಅಕ್ಟೋಬರ್​ ಒಳಗೆ ಪ್ರವೇಶ ಪ್ರಕ್ರಿಯೆ ಮುಗಿಸಲು ಸಂಬಂಧಿತ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ನೀಡಿದೆ. ಆ ಪ್ರಕಾರ 2020-21ನೇ ಸಾಲಿನ ಪ್ರಥಮ ವರ್ಷದ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್​ಗಳ ವಿದ್ಯಾರ್ಥಿಗಳಿಗೆ ನ. 1ರಿಂದಲೇ ತರಗತಿ ಆರಂಭವಾಗಲಿದೆ.

ಕಾಲೇಜು ಪ್ರಾರಂಭಕ್ಕೆ ಡೇಟ್ ಫಿಕ್ಸ್: 2020-21ರ ಶೈಕ್ಷಣಿಕ ಸಾಲಿನ ಪರೀಕ್ಷೆ ದಿನಾಂಕ ನಿಗದಿ

 ಒಂದು ವೇಳೆ ಅರ್ಹ ಪರೀಕ್ಷೆಗಳ ಫಲಿತಾಂಶ ಘೋಷಣೆ ವಿಳಂಬವಾದಲ್ಲಿ ಸಂಬಂಧಿತ ಯುನಿವರ್ಸಿಟಿಗಳು ಕನಿಷ್ಠ ನ. 18ರ ಒಳಗೆ ತರಗತಿ ಆರಂಭಿಸಬೇಕು ಎಂದು ಯುಜಿಸಿ ಮಾರ್ಗಸೂಚಿ ತಿಳಿಸಿದೆ.

ನ. 30ರ ಒಳಗೆ ಉಳಿಕೆ ಸೀಟುಗಳ ಪ್ರವೇಶಾತಿ ಕೂಡ ಮುಗಿಸಿರಬೇಕು. ಇನ್ನು ಪ್ರವೇಶಾತಿಯನ್ನು ಪ್ರವೇಶ ಪರೀಕ್ಷೆ ಮೂಲಕವೇ ನಡೆಸುವಂಥ ಹಾಗೂ ಆ ನಿಟ್ಟಿನಲ್ಲಿ ತಯಾರಾಗಿರುವಂಥ ಶಿಕ್ಷಣ ಸಂಸ್ಥೆಗಳು ಆದಷ್ಟು ಶೀಘ್ರ ಪ್ರಥಮ ವರ್ಷದ ಪಿಜಿ-ಯುಜಿ ತರಗತಿ ಆರಂಭಿಸುವಂತೆ ಸೂಚಿಸಲಾಗಿದೆ. ಅಲ್ಲದೆ ಫಸ್ಟ್​ ಸೆಮಿಸ್ಟರ್ ಪರೀಕ್ಷೆಯನ್ನು 2021ರ ಮಾರ್ಚ್​ 8-26ರ ಅವಧಿಯಲ್ಲಿ ನಡೆಸುವಂತೆಯೂ ನಿರ್ದೇಶನ ನೀಡಿದೆ. 

Latest Videos
Follow Us:
Download App:
  • android
  • ios