ಕೃಷಿ ಕಾಯಕದಲ್ಲಿ ಮಿಂದೆದ್ದ ವಿದ್ಯಾರ್ಥಿ ಸಮುದಾಯ
ಉಡುಪಿ ಜಿಲ್ಲೆ ಕೋಟದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕೃಷಿ ಕಾಯಕ ನಿರ್ವಹಿಸುವ ಸಾಗುವಳಿ ಎಂಬ ಶೀರ್ಷಿಕೆಯಡಿ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಉಡುಪಿ (ಜು.12): ಉಡುಪಿ ಜಿಲ್ಲೆ ಕೋಟದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕೃಷಿ ಕಾಯಕ ನಿರ್ವಹಿಸುವ ಸಾಗುವಳಿ ಎಂಬ ಶೀರ್ಷಿಕೆಯಡಿ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿದಿನ ಆಟಗಳಲ್ಲಿ ಬ್ಯುಸಿಯಾಗಿದ್ದ ವಿದ್ಯಾರ್ಥಿಗಳಿಗೆ ಹೊಸ ಹುಮ್ಮಸ್ಸು ತುಂಬಿತು. ಕೋಟ ತಟ್ಟು ಪಡುಕರೆ ಪರಿಸರದ ಕೃಷಿ ಭೂಮಿಯಲ್ಲಿ ಉಡುಪಿ ಕೃಷಿ ಇಲಾಖೆಯ ಸಂಯೋಜನೆಯೊಂದಿಗೆ ವಿದ್ಯಾರ್ಥಿಗಳಿಗೆ ಭತ್ತದ ಕೃಷಿ ನಾಟಿಗೈಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಉಡುಪಿ ಜಿಲ್ಲಾ ಕೃಷಿ ಇಲಾಖೆಯ ಸಹಾಯಕ ಅಧಿಕಾರಿ ಮೋಹನ್ ರಾಜ್ ವಿದ್ಯಾರ್ಥಿಗಳಿಗೆ ಪ್ರಸ್ತುತ ವಿದ್ಯಮಾನಗಳಲ್ಲಿ ಕೃಷಿಯ ಅವಶ್ಯಕತೆ, ಕೃಷಿ ನಿರ್ಲಕ್ಷ್ಯದಿಂದ ಮುಂದಿನ ದಿನಗಳಲ್ಲಿ ಎದುರಾಗುವ ಪರಿಣಾಮಗಳ ಬಗ್ಗೆ ಮನವರಿಕೆ ಮಾಡಿದರು. ನಾಟಿಗೈಯುವ ವಿಧಾನ, ಸಂಪ್ರದಾಯಕ ನಾಟಿ ಕ್ರಮಗಳ ಕುರಿತು ಮಾಹಿತಿ ನೀಡಿದರು.
Bengaluru: ಸ್ನೇಹಿತನಿಗಾಗಿ ಆನ್ಲೈನ್ ಲೋನ್ ಪಡೆದು ಕಟ್ಟಲಾಗದೆ ಆತ್ಮಹತ್ಯೆಗೆ ಶರಣಾದ
ಉತ್ಸಾಹದಿಂದಲೇ ಗದ್ದೆಗಿಳಿದ ವಿದ್ಯಾರ್ಥಿಗಳು ಹುಮ್ಮಸ್ಸಿನಿಂದ ನಾಟಿ ಕಾರ್ಯ ನಡೆಸಿದರು. ಕೃಷಿ ಕ್ಷೇತ್ರದಲ್ಲು ಎದುರಾಗುತ್ತಿರುವ ಸಮಸ್ಯೆಗಳ ನಡುವೆ ಯುವ ಸಮುದಾಯಕ್ಕೆ ಕೃಷಿಯ ಕುರಿತು ಆಸಕ್ತಿ ನೀಡುವ ಚಿಂತನೆ ದೃಷ್ಠಿಯಿಂದ ಗೀತಾನಂದ ಫೌಂಡೇಶನ್ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಮಣೂರು ಪಡುಕರೆ ಸರಕಾರಿ ಶಿಕ್ಷಣ ಸಂಸ್ಥೆಯ ಅದರಲ್ಲೂ ಅಲ್ಲಿ ಕಳೆದ ವರ್ಷ ಆರಂಭಗೊಂಡ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮ ರೂಪಿಸಲಾಗಿತ್ತು.
ವಿದ್ಯಾರ್ಥಿಗಳು ಆಸಕ್ತಿಯಿಂದ ಕೃಷಿ(ಗದ್ದೆ)ಭೂಮಿಗೆ ದುಮುಕಿ ನಾಟಿ ಗೈಯಲು ಆರಂಭಿದರು, ಸಾಂಪ್ರದಾಯಿಕ ಕೃಷಿಗೆ ಒತ್ತು ನೀಡುವ ಉದ್ದೇಶದಿಂದ ಕೋಟದ ರೈತಧ್ವನಿ ಸಂಘದ ಅಧ್ಯಕ್ಷ ಎಂ.ಜಯರಾಮ ಶೆಟ್ಟಿ ಒಳಲ್ (ಕೂಗು)ಹಾಕುವ ಮೂಲಕ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ವಿದ್ಯಾರ್ಥಿಗಳಿಗೆ ಗೀತಾನಂದ ಫೌಂಡೇಶನ್ ನವರು ತಲೆಗೆ ಧರಿಸಲು ಹಾಳೆ ನೀಡಿದರು.
ಸಾಮಾನ್ಯವಾಗಿ ಮೊದಲ ನಾಟಿಗೆ ಪ್ರತಿಯೊರ್ವ ರೈತ ಸಮುದಾಯದ ಮನೆಯಲ್ಲಿ ಹೆಸರು, ಅವರೆ ಹೀಗೆ ಧಾನ್ಯಗಳನ್ನು ಬೇಸಿ ನಾಟಿಗೈಯುವರಿಗೆ ನೀಡುತ್ತಿದ್ದರು ಇದಕ್ಕೆ ಗಣಪತಿ ನಾಟಿ ಎಂದು ಕರೆಯುತ್ತಾರೆ. ಅದೇ ಮಾದರಿಯಲ್ಲಿ ಅವರೆ ಕಾಳು ಬೇಯಿಸಿ ವಿದ್ಯಾರ್ಥಿಗಳಿಗೆ, ಬಂದ ಅತಿಥಿಗಳಿಗೆ ನೀಡಲಾಯ್ತು.
ಕೊಡಗು ಮಳೆಗೆ ರಸ್ತೆ ಬಂದ್, ಹಸುಗೂಸುನ್ನು ಉಳಿಸಲು 1 ಕಿಮೀ ನಡೆದು ಆಸ್ಪತ್ರೆಗೆ ತಂದ
ಗೀತಾನಂದ ಫೌಂಡೇಶನ್ ನಿರ್ದೇಶಕರಾದ ಗೀತಾ ಆನಂದ್ ಸಿ ಕುಂದರ್,ವೈಷ್ಣವಿ ರಕ್ಷಿತ್ ಕುಂದರ್,ಜನತಾ ಸಂಸ್ಥೆಯ ಮ್ಯಾನೇಜರ್ ಶ್ರೀನಿವಾಸ್ ಕುಂದರ್,ಕೋಟ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಸುಪ್ರಭಾ,ಮಣೂರು ಪಡುಕರೆ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡೆನಿಸ್ ಬಾಂಝಾ,ಉಪನ್ಯಾಸಕ ಸತ್ಯನಾರಾಯಣ ಆಚಾರ್,ಗೀತಾನಂದ ಫೌಂಡೇಶನ್ ಸಮಾಜಕಾರ್ಯ ವಿಭಾಗದ ರವಿಕಿರಣ್ ಕಾಂಚನ್ ಕೋಟ,ಪದವಿಪೂರ್ವ ಕಾಲೇಜಿನ ಉಪನ್ಯಾಸಕ ವೃಂದ ಮತ್ತಿತರರು ಉಪಸ್ಥಿತರಿದ್ದರು.