ಶಾಲಾರಂಭದ ಬಗ್ಗೆ ಸರ್ಕಾರ ಮತ್ತೊಮ್ಮೆ ಚಿಂತಿಸಲಿ: ಶ್ರೀ ಸುಬುಧೇಂದ್ರ ತೀರ್ಥರು
ಲಾಕ್‌ಡೌನ್‌ನಿಂದ ಶ್ರೀಮಠಕ್ಕೆ 67 ಕೋಟಿಗೂ ಅಧಿಕ ನಷ್ಟ| ಸಂಕಷ್ಟ ಕಾಲದಲ್ಲಿ ಮಠದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗಿದೆ| ಶ್ರೀಮಠದಿಂದ ಯಾವುದೇ ಸರ್ಕಾರಕ್ಕೆ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಿಲ್ಲ| ಇದು ಭಕ್ತರಿಂದ ನಡೆಯುವ ಮಠವಾಗಿದ್ದು, ಈಗ ಮತ್ತೆ ಮಠಕ್ಕೆ ಬರುವ ಸಂಖ್ಯೆ ಹೆಚ್ಚುತ್ತಿದ್ದು, ಆದಾಯವೂ ಹೆಚ್ಚಾಗಬಹುದು:ಶ್ರೀ ಸುಬುಧೇಂದ್ರ ತೀರ್ಥರು|
ರಾಯಚೂರು(ನ.05): ಮಕ್ಕಳಿಗೆ ಶಿಕ್ಷಣ ಎಷ್ಟು ಮುಖ್ಯವೋ ಅವರ ಆರೋಗ್ಯವೂ ಅಷ್ಟೇ ಮುಖ್ಯ. ಹೀಗಾಗಿ ಶಾಲೆಗಳ ಆರಂಭಕ್ಕೆ ಇನ್ನೊಂದಿಷ್ಟು ದಿನ ಕಾಯುವುದು ಸೂಕ್ತ ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಅಭಿಪ್ರಾಯಪಟ್ಟಿದ್ದಾರೆ.
ಶ್ರೀಮಠದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಶ್ರೀಗಳು, ಕೊರೋನಾ ವೈರಸ್ ಎರಡನೇ ಹಂತದಲ್ಲಿ ಹರಡುವ ಭೀತಿ ಇದೆ. ಇಂಥಯ ವೇಳೆ ಮಕ್ಕಳು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇದ್ದಲ್ಲಿ ಸೋಂಕಿಗೆ ತುತ್ತಾಗಬೇಕಾಗುತ್ತದೆ. ಹೀಗಾಗಿ ಶಾಲೆ ಆರಂಭದ ವಿಚಾರದಲ್ಲಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ರಾಜ್ಯದಲ್ಲಿ ತಕ್ಷಣಕ್ಕೆ ಶಾಲೆ ಆರಂಭ ಇಲ್ಲ: ಸುರೇಶ್ ಕುಮಾರ್!
ಲಾಕ್‌ಡೌನ್‌ನಿಂದ ಶ್ರೀಮಠಕ್ಕೆ 67 ಕೋಟಿಗೂ ಅಧಿಕ ನಷ್ಟವಾಗಿದೆ. ಸಂಕಷ್ಟ ಕಾಲದಲ್ಲಿ ಮಠದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗಿದೆ. ಆದರೆ, ಶ್ರೀಮಠದಿಂದ ಯಾವುದೇ ಸರ್ಕಾರಕ್ಕೆ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಿಲ್ಲ. ಇದು ಭಕ್ತರಿಂದ ನಡೆಯುವ ಮಠವಾಗಿದ್ದು , ಈಗ ಮತ್ತೆ ಮಠಕ್ಕೆ ಬರುವ ಸಂಖ್ಯೆ ಹೆಚ್ಚುತ್ತಿದ್ದು, ಆದಾಯವೂ ಹೆಚ್ಚಾಗಬಹುದು ಎಂದು ತಿಳಿಸಿದ್ದಾರೆ.
ನ.20ರಿಂದ ಡಿ.1 ರವರೆಗೆ ತುಂಗಭದ್ರಾ ನದಿಗೆ ಪುಷ್ಕರ ಆಗಮಿಸಲಿದ್ದು, ಶ್ರೀಮಠದಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಿತ್ಯ ಸುಮಾರು 25 ಸಾವಿರ ಭಕ್ತರು ಆಗಮಿಸುವ ನಿರೀಕ್ಷ ಇದೆ. ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಸ್ನಾನಘಟ್ಟ, ಪ್ರಥಮ ಚಿಕಿತ್ಸೆ ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಕೊರೋನಾ ಕಾರಣಕ್ಕೆ ಭಕ್ತರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ.