Belagavi Assembly Session: ಲ್ಯಾಪ್‌ಟಾಪ್‌ ನೀಡುವಂತೆ ಸಿಎಂ ಕಾರಿಗೆ ವಿದ್ಯಾರ್ಥಿಗಳ ಮುತ್ತಿಗೆ

*  ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ಮುಖ್ಯಮಂತ್ರಿ ಬೊಮ್ಮಾಯಿ
*  ಲ್ಯಾಪ್‌ಟಾಪ್‌ ನೀಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ
*  ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಸಿಎಂ 
 

Students Insist For Laptop to CM Basavaraj Bommai in Belagavi grg

ಬೆಳಗಾವಿ(ಡಿ.23): ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ(Students) ಲ್ಯಾಪ್‌ಟಾಪ್‌(Laptop) ವಿತರಿಸುವಂತೆ ಒತ್ತಾಯಿಸಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರ ಕಾರಿಗೆ ಮುತ್ತಿಗೆ ಹಾಕಿದ ಪ್ರಸಂಗ ನಿನ್ನೆ(ಬುಧವಾರ) ನಗರದಲ್ಲಿ ನಡೆದಿದೆ.  ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ(Rani Channamma University) ಕಾರ್ಯಕ್ರಮದಲ್ಲಿ ಭಾಗವಹಿಸಿ ತೆರಳುತ್ತಿದ್ದಾಗ ಈ ಘಟನೆ ನಡೆಯಿತು. ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಶೀಘ್ರ ಲ್ಯಾಪ್‌ಟಾಪ್‌ ವಿತರಿಸಲು ಕ್ರಮಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ. 

ನೂತನ ಕ್ಯಾಂಪಸ್‌ನ ಶಂಕುಸ್ಥಾಪನಾ ಕಾರ್ಯಕ್ರಮ ಮುಗಿಸಿ ವೇದಿಕೆಯಿಂದ ಕೆಳಗಿಳಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು ಕಾರಿನ ಕಡೆಗೆ ತೆರಳುತ್ತಿದ್ದರು. ಈ ವೇಳೆ ವಿದ್ಯಾರ್ಥಿಗಳು ಏಕಾಏಕಿ ಮುಖ್ಯಮಂತ್ರಿ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ(Protest) ನಡೆಸಿದರು. ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟವರ್ಗದ ವಿದ್ಯಾರ್ಥಿಗಳು 4ನೇ ಸೆಮಿಸ್ಟರ್‌ ಓದುತ್ತಿದ್ದರೂ ಈವರೆಗೂ ಲ್ಯಾಪ್‌ಟಾಪ್‌ ವಿತರಿಸಿಲ್ಲ. ಆರ್‌ಸಿಯುನಲ್ಲಿ 316 ವಿದ್ಯಾರ್ಥಿಗಳಿದ್ದು, ಲ್ಯಾಪ್‌ಟಾಪ್‌ ವಿತರಣೆ ವಿಳಂಬ ಕುರಿತಾಗಿ ಕುಲಪತಿ, ಕುಲಸಚಿವರನ್ನು ವಿಚಾರಿಸಿದರೆ ಎಸ್‌ಸಿಪಿ ಹಾಗೂ ಟಿಎಸ್‌ಪಿ ಅನುದಾನ(Grants) ಬಂದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Guest Lecturers Strike: ಅತಿಥಿ ಉಪನ್ಯಾಸಕರ ಮುಷ್ಕರ: ಪಾಠವಿಲ್ಲದೆ ವಿದ್ಯಾರ್ಥಿಗಳ ಕಷ್ಟ

ಈ ಕುರಿತು ಪ್ರತಿಕ್ರಿಯಿಸಿದ ವಿದ್ಯಾರ್ಥಿಗಳು, ನಮ್ಮ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಲ್ಯಾಪ್‌ಟಾಪ್‌ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ ಲ್ಯಾಪ್‌ಟಾಪ್‌ ನೀಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಡಿ.23 ರಿಂದ ರಾಣಿ ಚನ್ನಮ್ಮ ವಿವಿ ಕುಲಸಚಿವರ ಕಚೇರಿ ಎದುರು ನಿರಶನ ನಡೆಸುವುದಾಗಿ ಎಚ್ಚರಿಕೆ ನೀಡಿದರು.  

ಸೊಪ್ಪು ಮಾರುವ ವಿದ್ಯಾರ್ಥಿನಿಗೆ ಟ್ಯಾಬ್‌ ಕೊಡಿಸಿದ ಸಿಎಂ

ಮೈಸೂರು(Mysuru): ಆನ್‌ಲೈನ್‌ ಕ್ಲಾಸಿಗಾಗಿ(Online Class) ಲ್ಯಾಪ್‌ಟಾಪ್‌ ಖರೀದಿಸಲು ಸೊಪ್ಪು ಮಾರುತ್ತಿದ್ದ ಬಡ ವಿದ್ಯಾರ್ಥಿನಿಯ ಆರ್ಥಿಕ ಸಂಕಷ್ಟಕ್ಕೆ ಅಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ(BS Yediyurappa) ಸ್ಪಂದಿಸಿದ್ದರು. 

ನಗರದ ನಿವಾಸಿ ಹನುಮಂತು ಎಂಬವರ ಪುತ್ರಿ 10ನೇ ತರಗತಿ ವಿದ್ಯಾರ್ಥಿನಿ ಕೀರ್ತನಾ ಆನ್‌ಲೈನ್‌ ಕ್ಲಾಸ್‌ಗೆ ಬಳಸುತ್ತಿದ್ದ ಮೊಬೈಲ್‌ ರಿಪೇರಿಗೆ ಒಳಗಾದ್ದರಿಂದ ಹೊಸ ಟ್ಯಾಬ್‌ ಖರೀದಿಸಲು ನಾಲ್ಕು ದಿನದಿಂದ ತ್ರಿವೇಣಿ ವೃತ್ತದಲ್ಲಿ ಸೊಪ್ಪು ಮಾರುತ್ತಿದ್ದಳು. 

ಈ ವಿಷಯ ತಿಳಿದ ಯಡಿಯೂರಪ್ಪ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್‌.ಆರ್‌.ಮಹದೇವಸ್ವಾಮಿ ಅವರಿಗೆ ಟ್ಯಾಬ್‌ ಮತ್ತು ಆರ್ಥಿಕ ನೆರವು ನೀಡುವಂತೆ ಸೂಚಿಸಿದ್ದರು. ಅದರಂತೆ ವಿದ್ಯಾರ್ಥಿನಿ ಕೀರ್ತನಾಗೆ ನೆರವಾಗಿದ್ದರು. ಆಕೆಯ ತಂದೆ ಎಲೆಕ್ಟ್ರಿಕ್‌ ಕೆಲಸ ಮಾಡುತ್ತಾರೆ. ತಾಯಿ ನಿಂಗಮ್ಮ ಗೃಹಿಣಿ. ಲಾಕ್‌ಡೌನ್‌ನಿಂದಾಗಿ ತಂದೆಗೆ ಕೆಲಸ ಇಲ್ಲದೆ ಮನೆಯಲ್ಲಿ ಇದ್ದರಿಂದ ಅನಿವಾರ್ಯವಾಗಿ ಕೀರ್ತನ ಸೊಪ್ಪು ಮಾರಬೇಕಾಯಿತು.

Karnataka High Court : ಕನ್ನಡ ಕಲಿಕೆಗೆ ಒತ್ತಾಯ ಬೇಡ

1 ಕ್ವಾರ್ಟರ್‌ ಅಂದ್ರೆ ಎಷ್ಟು? ಟೀಚರ್‌ ಪ್ರಶ್ನೆಗೆ ವಿದ್ಯಾರ್ಥಿಯ ಶಾಕಿಂಗ್ ಉತ್ತರ!

ಕೊರೋನಾದಿಂದಾಗಿ(Covid 19) ವಿದ್ಯಾರ್ಥಿಗಳ ಶಾಲಾ ಬದುಕಿಗೆ ಬ್ರೇಕ್ ಬಿದ್ದಿದ್ದು, ಆನ್‌ಲೈನ್ ಶಿಕ್ಷಣ(Online Class) ವ್ಯವಸ್ಥೆ ಜಾರಿಗೆ ಬಂದಿದೆ. ಹೀಗಿರುವಾಗ ಅನೇಕ ಚಿತ್ರ ವಿಚಿತ್ರ ವಿಡಿಯೋಗಳು ಆಗಾಗ್ಗೆ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಸದ್ಯ ಇಂತಹುದೇ ವಿಡಿಯೋ ಒಂದು ವೈರಲ್ ಆಗಿದ್ದು, ಆನ್‌ಲೈನ್ ತರಗತಿಯಲ್ಲಿ ಸಿಎ ವಿದ್ಯಾರ್ಥಿಯೊಬ್ಬ/9Student) ಅಧ್ಯಾಪಕರ ಪ್ರಶ್ನೆಗೆ ಕೊಟ್ಟಿರುವ ಶಾಕಿಂಗ್ ಉತ್ತರ ಭಾರೀ ವೈರಲ್ ಆಗಿತ್ತು.

ಈ ವಿಡಿಯೋದಲ್ಲಿ ಎಡ್ನೋವೇಟ್‌ನ ಸ್ಥಾಪಕ ಸದಸ್ಯ ಸಿಎ ಧವಲ್ ಪುರೋಹಿತ್ ಸಿಎ(Chartered Accountant) ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾ 'ನೀವೆಲ್ಲರೂ ಮೊಟ್ಟ ಮೊದಲು ಒಂದು ಕ್ವಾರ್ಟರ್‌ನಲ್ಲಿ ಎಷ್ಟಿರುತ್ತದೆ ಎಂದು ತಿಳಿದುಕೊಳ್ಳಿ. ಹೆತ್ವಿಕ್‌, ನೀನೇ ಹೇಳು ಒಂದು ಕ್ವಾರ್ಟರ್‌ನಲ್ಲಿ ಎಷ್ಟಿರುತ್ತದೆ?' ಎಂದು ಪ್ರಶ್ನಿಸಿದ್ದಾರೆ. ಹೀಗಿರುವಾಗ ವಿದ್ಯಾರ್ಥಿ '30 ಎಂ. ಎಲ್' ಎಂದು ಬರೆದಿದ್ದಾನೆ. ಈ ಉತ್ತರ ನೋಡಿದ ಮರುಕ್ಷಣವೇ ಪುರೋಹಿತ್‌ರವರು(Dhawal Purohit) ಅದಲ್ಲಪ್ಪ ಎಂದಿದ್ದಾರೆ. ಅಷ್ಟರಲ್ಲಾಗಲೇ ವಿದ್ಯಾರ್ಥಿ ತೀವ್ರ ಮುಜುಗರಕ್ಕೀಡಾಗಿದ್ದನು. 
 

Latest Videos
Follow Us:
Download App:
  • android
  • ios