ನೀಟ್ ಸಿದ್ಧತೆಯ ಒತ್ತಡ: ಬೆಂಕಿ ಹಚ್ಚಿಕೊಂಡು ಸಾವಿಗೆ ಯತ್ನಿಸಿದ ವಿದ್ಯಾರ್ಥಿ
ನೀಟ್ ಪರೀಕ್ಷೆಯ ಸಿದ್ಧತೆಯ ಒತ್ತಡಕ್ಕೆ ಸಿಕ್ಕ ಬಿಹಾರ ಮೂಲದ ವಿದ್ಯಾರ್ಥಿಯೊಬ್ಬ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ, ರಾಜಸ್ಥಾನದ ಕೋಟದಲ್ಲಿ ನಡೆದಿದೆ.
ಕೋಟ: ನೀಟ್ ಪರೀಕ್ಷೆಯ ಸಿದ್ಧತೆಯ ಒತ್ತಡಕ್ಕೆ ಸಿಕ್ಕ ಬಿಹಾರ ಮೂಲದ ವಿದ್ಯಾರ್ಥಿಯೊಬ್ಬ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ, ರಾಜಸ್ಥಾನದ ಕೋಟದಲ್ಲಿ ನಡೆದಿದೆ. ಮಯಾಂಕ್ (20) ಆತ್ಮ ಹತ್ಯೆಗೆ ಯತ್ನಿಸಿದ ಯುವಕ. ಆತನ ದೇಹಕ್ಕೆ ಶೇ.60ರಷ್ಟುಭಾಗಕ್ಕೆ ಸುಟ್ಟಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ಈತ ಯಾವುದೇ ಕೋಚಿಂಗ್ ಪಡೆಯದೇ ಸ್ವಯಂ ಅಭ್ಯಾಸ ಮಾಡುತ್ತಿದ್ದ. ಆದರೂ ಆತನ ತಂದೆ ಓದಿನ ಬಗ್ಗೆ ಹೆಚ್ಚಿನ ಗಮನ ಕೊಡುವಂತೆ ಒತ್ತಡ ಹೇರಿದ್ದರಿಂದ ಬೇಸತ್ತು ಮಯಾಂಕ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೋಚಿಂಗ್ ಸೆಂಟರ್‌ಗಳಿಗೆ ಖ್ಯಾತಿ ಹೊಂದಿರುವ ಕೋಟದಲ್ಲಿ ಒತ್ತಡ ತಾಳಲಾಗದೆ 2022ರಲ್ಲಿ 15 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪರೀಕ್ಷಾ ಒತ್ತಡ ನಿವಾರಣೆಯ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಧಾನಿ ಸಲಹೆ