ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸತ್ತಿ ಗ್ರಾಮದ ನಿಹಾಲ ನಿಸಾರ್ ಡಾಂಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಿಂದ ವಂಚಿತವಾಗಿ ಅನುತ್ತೀರ್ಣವಾದ ವಿದ್ಯಾರ್ಥಿ. ಕುಟುಂಬದ ಆರ್ಥಿಕ ಸಮಸ್ಯೆ ಹಿನ್ನೆಲೆಯಲ್ಲಿ ಶಾಲೆಯ ಶುಲ್ಕ ಭರಿಸಲು ವಿಳಂಬವಾಗಿದೆ. 10ನೇ ತರಗತಿಯ ವಾರ್ಷಿಕ ಪರೀಕ್ಷೆಗೆ ಹಾಲ್‌ಟಿಕೆಟ್ ನೀಡಿಲ್ಲವೆಂದು ವಿದ್ಯಾರ್ಥಿ ನಿಹಾಲ ಮತ್ತು ಆತನ ಪಾಲಕರು ಶಾಲೆಯ ಆಡಳಿತ ಮಂಡಳಿ ವಿರುದ್ಧ ಆರೋಪ ಮಾಡಿದ್ದಾರೆ. 

ಅಥಣಿ(ಮೇ.23): ಶಾಲಾ ಶುಲ್ಕ ಭರಿಸುವಲ್ಲಿ ವಿಳಂಬ ಮಾಡಿದ ವಿದ್ಯಾರ್ಥಿಗೆ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಹಾಲ್‌ ಟಿಕೆಟ್‌ ನೀಡದೇ ವಿದ್ಯಾರ್ಥಿ ಅನುತ್ತೀರ್ಣಕ್ಕೆ ಖಾಸಗಿ ಶಾಲಾ ಆಡಳಿತವೇ ಕಾರಣವೆಂದು ಆರೋಪಿಸಿ ವಿದ್ಯಾರ್ಥಿ ಕುಟುಂಬ ಕೋರ್ಟ್‌ ಮೆಟ್ಟಿಲು ಏರಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸತ್ತಿ ಗ್ರಾಮದ ನಿಹಾಲ ನಿಸಾರ್ ಡಾಂಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಿಂದ ವಂಚಿತವಾಗಿ ಅನುತ್ತೀರ್ಣವಾದ ವಿದ್ಯಾರ್ಥಿ. ಕುಟುಂಬದ ಆರ್ಥಿಕ ಸಮಸ್ಯೆ ಹಿನ್ನೆಲೆಯಲ್ಲಿ ಶಾಲೆಯ ಶುಲ್ಕ ಭರಿಸಲು ವಿಳಂಬವಾಗಿದೆ. 10ನೇ ತರಗತಿಯ ವಾರ್ಷಿಕ ಪರೀಕ್ಷೆಗೆ ಹಾಲ್‌ಟಿಕೆಟ್ ನೀಡಿಲ್ಲವೆಂದು ವಿದ್ಯಾರ್ಥಿ ನಿಹಾಲ ಮತ್ತು ಆತನ ಪಾಲಕರು ಶಾಲೆಯ ಆಡಳಿತ ಮಂಡಳಿ ವಿರುದ್ಧ ಆರೋಪ ಮಾಡಿದ್ದಾರೆ. 

ಎಸ್‌ಎಸ್‌ಎಲ್‌ಸಿ: ಮುಂಜಾನೆ ಪತ್ರಿಕೆ ವಿತರಣೆ ಮಾಡಿ ಕರ್ನಾಟಕಕ್ಕೆ 7ನೇ ಸ್ಥಾನ ಪಡೆದ ಶಂಕರ್‌

ಕಷ್ಟಪಟ್ಟು ಓದಿದ ವಿದ್ಯಾರ್ಥಿಗೆ ಶಾಲಾ ಆಡಳಿತ ಮಂಡಳಿಯ ಕಿರಿಕಿರಿಯಿಂದ ಪರೀಕ್ಷೆಯಲ್ಲಿ ಫೇಲ್ ಆಗಿದ್ದಾನೆ. ವಿದ್ಯಾರ್ಥಿ ಹಾಗೂ ಪಾಲಕರು ಈಗ ಕೋರ್ಟ್‌ ಮೆಟ್ಟಿಲೇರಿದ್ದು ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ.