ಪಿಯು ಪ್ರಶ್ನೆ ಪತ್ರಿಕೆ ಸೋರಿಕೆ ವದಂತಿ: ಗೊಂದಲ

ಹಿಂದೆ ಗಣಿತ ಪ್ರಶ್ನೆ ಪತ್ರಿಕೆ ಸೋರಿಕೆ ವದಂತಿ ಹಬ್ಬಿತ್ತು, ಇದೆಲ್ಲ ಸುಳ್ಳು, ಆತಂಕ್ಕೊಳಗಾಗಬೇಡಿ: ಡಿಡಿಪಿಐ ಚಂದ್ರಕಾಂತ ಶಾಹಾಬಾದಕರ್‌ 

PUC Question Paper Leak Rumour in Bidar grg

ಬೀದರ್‌(ಮಾ.15):  ಗಣಿತ ಪ್ರಶ್ನೆ ಪತ್ರಿಕೆಯ ಬೆನ್ನಲ್ಲೇ ಇದೀಗ ಮಂಗಳವಾರ ನಡೆದ ಪಿಯುಸಿ ರಸಾಯನ ಶಾಸ್ತ್ರ ಪತ್ರಿಕೆ ಸೋರಿಕೆಯ ಕುರಿತೂ ಬೀದರ್‌ನಲ್ಲಿ ವದಂತಿ ಹರಡಿದ್ದು, ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ. ಪಿಯು ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷೆ ಆರಂಭವಾದ ಕೆಲವೇ ಹೊತ್ತಿನಲ್ಲಿ ಹೊರತಂದು ಅವುಗಳನ್ನು ಝೆರಾಕ್ಸ್‌ ಮಾಡಿಸಿ ಅದಕ್ಕೆ ಉತ್ತರ ಸಹಿತ ವಿದ್ಯಾರ್ಥಿಗಳಿಗೆ ನಕಲು ಪೂರೈಸಲಾಗುತ್ತಿದೆ ಎಂಬ ವದಂತಿ ಮಂಗಳವಾರ ಭಾಲ್ಕಿ ಸರ್ಕಾರಿ ಪ್ರೌಢಶಾಲೆ ಮತ್ತು ಪಿಯು ಕಾಲೇಜು ವ್ಯಾಪ್ತಿಯಲ್ಲಿ ನಡೆದಿದೆ ಎಂಬ ಸುದ್ದಿ ಹರಿದಾಡಿತ್ತು. ಕಂಪ್ಯೂಟರ್‌ ಅಂಗಡಿಗಳಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಉತ್ತರಗಳೊಂದಿಗೆ ಪಡೆಯುತ್ತಿರುವ ವಿಡಿಯೊ ಹರಿದಾಡಿತ್ತು. ಗಣಿತ ಪರೀಕ್ಷೆಯಲ್ಲೂ ಪ್ರಶ್ನೆಪತ್ರಿಕೆ ಸೋರಿಕೆ ವದಂತಿ ಹಬ್ಬಿತ್ತು.

ಇದಕ್ಕೂ ಮುನ್ನ ನಡೆದ ಗಣಿತ ಪರೀಕ್ಷೆ ಸಮಯದಲ್ಲೂ ಇದೇ ರೀತಿ ವದಂತಿಗಳು ಹುಟ್ಟಿಕೊಂಡು ಪ್ರಶ್ನೆಪತ್ರಿಕೆ ಸೋರಿಕೆ ವಿಚಾರ ವಿದ್ಯಾರ್ಥಿಗಳಲ್ಲಷ್ಟೇ ಅಲ್ಲ, ಪಾಲಕರಲ್ಲೂ ಆತಂಕ ಮೂಡಿಸಿತ್ತು. ಇದಕ್ಕೆ ಅದೇ ದಿನ ಸ್ಪಷ್ಟನೆ ನೀಡಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಲಿ, ನಕಲು ಆಗಿರುವುದಾಗಲಿ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಇದರ ಬೆನ್ನಲ್ಲೇ ಭಾಲ್ಕಿಯಲ್ಲಿ ಪ್ರಶ್ನೆ ಪತ್ರಿಕೆಯ ಮಾದರಿಯ ಪತ್ರಿಕೆ ಪ್ರತಿಗಳು ಎಲ್ಲೆಡೆ ಹರಿದಾಡಿದ್ದು, ಪ್ರಶ್ನೆಗಳನ್ನು ಮತ್ತು ಅವುಗಳಿಗೆ ಉತ್ತರಗಳನ್ನು ಹುಡುಕುವದರಲ್ಲಿ ತಲ್ಲೀನರಾಗಿದ್ದ ಪಾಲಕರ ವಿಡಿಯೋಗಳು ವಿಡಿಯೋದಲ್ಲಿ ಸೆರೆಯಾಗಿವೆ.

5 ಮತ್ತು 8ನೇ ತರಗತಿ ಬೋರ್ಡ್ ಪರೀಕ್ಷೆ ವಿಚಾರಣೆ, ಅಫಿಡವಿಟ್ ಸಲ್ಲಿಸಲು ಸರ್ಕಾರಕ್ಕೆ‌ ಸೂಚನೆ

ಈ ಕುರಿತಂತೆಯೂ ಡಿಡಿಪಿಯು ಚಂದ್ರಕಾಂತ ಶಾಹಾಬಾದಕರ್‌ ಕನ್ನಡಪ್ರಭಕ್ಕೆ ಮಾತನಾಡಿ, ಪ್ರಶ್ನೆ ಪತ್ರಿಕೆ ಸೋರಿಕೆ ಕೇವಲ ವದಂತಿ. ಇದರಲ್ಲಿ ಹುರುಳಿಲ್ಲ. ವಿದ್ಯಾರ್ಥಿಗಲು ಆತಂಕಕ್ಕೆ ಒಳಗಾಗುವುದು ಬೇಡ ಎಂದು ಸ್ಪಷ್ಟಪಡಿಸಿದ್ದಾರೆ.

Latest Videos
Follow Us:
Download App:
  • android
  • ios