ಶುಲ್ಕ ಕಟ್ಟಿ, ಇಲ್ಲ ಆನ್‌ಲೈನ್ ಕ್ಲಾಸ್ ಕಟ್; ಖಾಸಗಿ ಶಾಲೆಗಳ ಬೆದರಿಕೆ ವಿದ್ಯಾರ್ಥಿಗಳಿಗೆ ಆತಂಕ
ಫೀಸ್ ಕಟ್ಟಿ ಎಂದು ಪೋಷಕರ ಮೇಲೆ ಒತ್ತಡ ಹೇರುವಂತಿಲ್ಲ, ವಿದ್ಯಾರ್ಥಿಗಳಿಗೆ ತರಗತಿಗಳನ್ನು ಕಟ್ ಮಾಡುವಂತಿಲ್ಲ ಎಂದು ಸರ್ಕಾರ ಆದೇಶ ನೀಡಿದ್ದರೂ ಖಾಸಗಿ ಶಾಲೆಗಳು ಮಾತ್ರ ಡೋಂಟ್ ಕೇರ್ ಎನ್ನುತ್ತಿವೆ.
ಬೆಂಗಳೂರು (ನ. 25): ಫೀಸ್ ಕಟ್ಟಿ ಎಂದು ಪೋಷಕರ ಮೇಲೆ ಒತ್ತಡ ಹೇರುವಂತಿಲ್ಲ, ವಿದ್ಯಾರ್ಥಿಗಳಿಗೆ ತರಗತಿಗಳನ್ನು ಕಟ್ ಮಾಡುವಂತಿಲ್ಲ ಎಂದು ಸರ್ಕಾರ ಆದೇಶ ನೀಡಿದ್ದರೂ ಖಾಸಗಿ ಶಾಲೆಗಳು ಮಾತ್ರ ಡೋಂಟ್ ಕೇರ್ ಎನ್ನುತ್ತಿವೆ.
ಶುಲ್ಕ ಪಾವತಿಸದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕ್ಲಾಸ್ ನಿಲ್ಲಿಸುವುದಾಗಿ ಖಾಸಗಿ ಶಾಲೆಗಳು ಹೇಳಿವೆ. ಶಾಲೆಯ ನಿಲುವಿನ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತದೆ.
ವಿದ್ಯಾರ್ಥಿಗಳು ಶುಲ್ಕ ಪಾವತಿಸದಿದ್ರೆ ಶಿಕ್ಷಕರಿಗೆ ವೇತನ ಕೊಡುವುದು ಹೇಗೆ? ಆನ್‌ಲೈನ್ ಶಿಕ್ಷಣ ಮುಂದುವರೆಕೆಗೆ ತಾಂತ್ರಿಕ ಸೌಲಭ್ಯಗಳ ವೆಚ್ಚ ಭರಿಸುವುದು ಹೇಗೆ? ಹೀಗಾಗಿ ಶುಲ್ಕ ವಸೂಲಿ ಅನಿವಾರ್ಯ ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಹೇಳಿದ್ದಾರೆ.