Asianet Suvarna News Asianet Suvarna News

ಶಿಕ್ಷಣ ಇಲಾಖೆಗೆ ಸೆಡ್ಡು ಹೊಡೆದ ಖಾಸಗಿ ಶಿಕ್ಷಣ ಸಂಸ್ಥೆಗಳು; ನೋಟಿಸ್‌ಗೂ ಡೋಂಟ್ ಕೇರ್

ಖಾಸಗಿ ಶಾಲೆಗಳ ಮ್ಯಾನೇಜ್ಮೆಂಟ್ ಹಾಗೂ ಪೋಷಕರ ಶುಲ್ಕ ಹಗ್ಗಜಗ್ಗಾಟ ಮುಂದುವರೆದಿದ್ದು, ವಿಚಾರಣೆಗೆ ಹಾಜರಾಗದ ಖಾಸಗಿ ಶಾಲೆಗಳು ನೋಟಿಸ್ ಗೂ ಡೋಂಟ್ ಕೇರ್ ಎಂದಿವೆ.

private education institutions did not attend to hearing about School Fee rbj
Author
Bengaluru, First Published Mar 5, 2021, 6:25 PM IST

ಬೆಂಗಳೂರು, (ಮಾ.05): ಖಾಸಗಿ ಶಾಲೆ ಹಾಗೂ ಪೋಷಕರ ನಡುವಿನ ಶಾಲಾ ಶುಲ್ಕ ಗಲಾಟೆ ಮುಂದುವರೆದಿದ್ದು, ಈ ಸಂಬಂಧ ಶಿಕ್ಷಣ ಇಲಾಖೆಯ ನೋಟಿಸ್‌ಗೂ ಖಾಸಗಿ ಶಾಲೆಗಳು ಕ್ಯಾರೆ ಎಂದಿಲ್ಲ.

ಶುಲ್ಕ ನಿಗದಿ ದೂರು ವಿಚಾರಣೆಗೆ ಸಂಬಂಧಿಸಿ ಖಾಸಗಿ ಶಾಲೆಗಳು ವಿಚಾರಣಾ ಸಭೆಗೆ ಹಾಜರಾಗುವಂತೆ ಶಿಕ್ಷಣ ಇಲಾಖೆ ನೋಟಿಸ್​ ನೀಡಿತ್ತು. ಅದ್ರು ಕೂಡ ಶೇ 10ರಷ್ಟು ಶಾಲಾ ಮ್ಯಾನೇಜ್ಮೆಂಟ್ ನವರು ಬಂದಿಲ್ಲ. ಈ ಹಿನ್ನೆಲೆಯಲ್ಲಿ ಇದರಿಂದ ಪೋಷಕರು ಖಾಸಗಿ ಶಾಲೆಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. 

ಶಿಕ್ಷಣ ಇಲಾಖೆ, ಖಾಸಗಿ ಶಾಲೆ ಮಂಡಳಿ​ ಹಾಗೂ ಪೋಷಕರ ಸಭೆ ಕರೆದಿದ್ದರು. ಸಭೆಯಲ್ಲಿ ಶೇ. 10ರಷ್ಟು ಶಾಲೆಗಳ ಆಡಳಿತ ಮಂಡಳಿಯವರು ಗೈರು ಹಾಜರಾಗಿದ್ದಾರೆ. ಕೇವಲ ಪೋಷಕರು ಮಾತ್ರ ವಿಚಾರಣೆಗೆ ಹಾಜರಾಗಿದ್ರು.

ಶಿಕ್ಷಣ ಇಲಾಖೆ ವಿರುದ್ಧ ಖಾಸಗಿ ಶಾಲೆಗಳ ಬೃಹತ್ ಪ್ರತಿಭಟನಾ ರ್ಯಾಲಿ

ಪೋಷಕರು ಮತ್ತು ಖಾಸಗಿ ಶಾಲೆಗಳಿಗೆ ವಿಚಾರಣೆಗೆ ಬರುವಂತೆ ಹೇಳಲಾಗಿತ್ತು. ಅದರಲ್ಲಿ ಶೇಕಡಾ 10ರಷ್ಟು ಶಾಲೆಯ ಆಡಳಿತ ಮಂಡಳಿಯವರು ಗೈರು ಹಾಜರಾಗಿದ್ದಾರೆ. ನಮಗೊಂದು ನ್ಯಾಯ, ಆಡಳಿತ ಮಂಡಳಿಗೊಂದು ನ್ಯಾಯವೇ? ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಪೋಷಕರು ನೇರ ಪ್ರಶ್ನಿಸಿದ್ದಾರೆ.

ಕೊರೋನಾದಿಂದ ಬಂದ್‌ ಆಗಿದ್ದ ಶಾಲೆಗಳ ಬೀಗ (ಫೆ.22) ರಿಂದ ಪೂರ್ಣ ಪ್ರಮಾಣದಲ್ಲಿ ಓಪನ್ ಆಗಿದೆ. 6ನೇ ತರಗತಿ ಮೇಲ್ಪಟ್ಟ ಎಲ್ಲಾ ತರಗತಿಗಳು ಆರಂಭ ಮಾಡಲು ಸರ್ಕಾರ ಅನುಮತಿ ನೀಡಿದೆ. ಆದ್ರೆ ಎಲ್ಲಾ ಸರಿ ಹೋಯ್ತು ಎನ್ನುವಷ್ಟರಲ್ಲಿ ಸರ್ಕಾರಕ್ಕೆ ಖಾಸಗಿ ಶಾಲೆಗಳು ಶಾಕ್ ಕೊಟ್ಟಿದ್ದವು. 

ಈಗಾಗಲೇ ಖಾಸಗಿ ಶಾಲೆಗಳಿಗೆ ಸರ್ಕಾರ ಶುಲ್ಕವನ್ನ ನಿಗದಿ ಮಾಡಿ, ಶೇ. 70 ರಷ್ಟು ಬೋಧನಾ ಶುಲ್ಕವನ್ನ ಮಾತ್ರ ತೆಗೆದುಕೊಳ್ಳಬೇಕು ಅಂತಾ ಆದೇಶ ಮಾಡಿತ್ತು. ಆದ್ರೆ, ಈ ಆದೇಶವನ್ನ ಖಾಸಗಿ ಶಿಕ್ಷಣ ಸಂಸ್ಥೆಗಳು ಒಪ್ಪದೆ, ಶುಲ್ಕ ಕಡಿತದ ಆದೇಶ ಪುನರ್ ಪರಿಶೀಲಿಸುವಂತೆ ಆಗ್ರಹಿಸಿದೆ. ಆದ್ರೆ, ಸರ್ಕಾರದಿಂದ ಯಾವುದೇ ರೆಸ್ಪಾನ್ಸ್ ಬಂದಿಲ್ಲ. ಹೀಗಾಗಿ ಮತ್ತೊಂದು ಹಂತದ ಬೃಹತ್ ಹೋರಾಟಕ್ಕೆ ಕ್ಯಾಮ್ಸ್, ಕುಸುಮಾ ಸೇರಿದಂತೆ ಒಟ್ಟು 11 ಖಾಸಗಿ ಶಿಕ್ಷಣ ಸಂಸ್ಥೆಗಳು ಮುಂದಾಗಿದ್ದವು.

Follow Us:
Download App:
  • android
  • ios