Asianet Suvarna News Asianet Suvarna News

ಮೈಸೂರಿನಲ್ಲಿ ನಕಲಿ ಡಾಕ್ಟರೇಟ್ ಪದವಿ ಪ್ರದಾನ ಕಾರ್ಯಕ್ರಮ, ಎಂಥಾ ಕಾಲ ಬಂತಪ್ಪಾ

ಹೋಟೆಲ್‌ವೊಂದರಲ್ಲಿ ನಡೆಯುತ್ತಿದ್ದ ನಕಲಿ ಡಾಕ್ಟರೇಟ್‌ ಪದವಿ ಪ್ರದಾನ ಕಾರ್ಯಕ್ರಮದ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ.

Police Raids On fake doctorate Function at Mysuru rbj
Author
Bengaluru, First Published Sep 26, 2020, 6:18 PM IST

ಮೈಸೂರು, (ಸೆ.26):  ನಗರದಲ್ಲಿ ನಕಲಿ ವಿಶ್ವವಿದ್ಯಾಲಯದ ಹೆಸರಿನಲ್ಲಿ ಡಾಕ್ಟರೇಟ್‌ ಪದವಿ ಪ್ರದಾನ ಕಾರ್ಯಕ್ರಮದ ವೇಳೆ ಡಿಸಿಪಿ ಪ್ರಕಾಶ್‌ ಗೌಡ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿದೆ. 

ಹುಣಸೂರು ರಸ್ತೆಯ ಹೋಟೆಲ್‌ ವೊಂದರಲ್ಲಿ ಇಂಟರ್ ನ್ಯಾಷನಲ್‌ ಗ್ಲೋಬಲ್ ಪೀಸ್ ಯುನಿವರ್ಸಿಟಿ ಹೆಸರಲ್ಲಿ ನಕಲಿ ಡಾಕ್ಟರೇಟ್ ಪದವಿ ಪ್ರದಾನ ಕಾರ್ಯಕ್ರಮ ನಡೆಯುತ್ತಿತ್ತು. ಈ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದು, ಮೂರಕ್ಕೂ ಹೆಚ್ಚು ಆಯೋಜಕರನ್ನು  ವಶಕ್ಕೆ ಪಡೆದಿದ್ದಾರೆ. ಇನ್ನು ಹಲವರು ಪರಾರಿಯಾಗಿದ್ದಾರೆ.

ಭೂಸುಧಾರಣೆ ವಿಧೇಯಕ ಅಂಗೀಕಾರ, ಕೋರ್ಟ್‌ನಲ್ಲಿ ಕೃಷ್ಣ ಜನ್ಮಭೂಮಿ ವಿಚಾರ; ಸೆ.26ರ ಟಾಪ್ 10 ಸುದ್ದಿ!

ಇಂಟರ್‌ನ್ಯಾಷನಲ್‌ ಗ್ಲೋಬಲ್ ಪೀಸ್ ವಿ.ವಿ. ಹೆಸರಲ್ಲಿ ನಕಲಿ ಡಾಕ್ಟರೇಟ್ ಪದವಿ ಪ್ರಧಾನ ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ಜನರಿಂದ ಹಣ ಪಡೆದು ಡಾಕ್ಟರೇಟ್ ಪದವಿ ನೀಡಲು ಕಾರ್ಯಕ್ರಮ ಆಯೋಜಕರು ಮುಂದಾಗಿದ್ದರು ಎನ್ನಲಾಗಿದೆ.

ಕಾರ್ಯಕ್ರಮದ ಪ್ರಶಸ್ತಿ ಪತ್ರ, ಫಲಕಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಡಿಸಿಪಿ ಪ್ರಕಾಶ್‌ ಗೌಡ ತಿಳಿಸಿದ್ದಾರೆ.

Follow Us:
Download App:
  • android
  • ios