* ಜಾಗತಿಕವಾಗಿ ದೃಢೀಕರಣ ಸಾಧ್ಯವಿರುವ ಪ್ರಮಾಣಪತ್ರ, ತಿರುಚಲೂ ಸಾಧ್ಯವಿಲ್ಲ* ಐಐಟಿ ಪದವೀಧರಿಗೆ ಬ್ಲಾಕ್‌ಚೈನ್‌ ಆಧರಿತ ಡಿಜಿಟಲ್‌ ಪ್ರಮಾಣಪತ್ರ 

ಕಾನ್ಪುರ(ಡಿ.29): ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಇಲ್ಲಿ ನಡೆದ ಐಐಟಿ-ಕಾನ್ಪುರದ 54ನೇ ಘಟಿಕೋತ್ಸವದಲ್ಲಿ ಪದವೀಧರರಿಗೆ ಬ್ಲಾಕ್‌ಚೈನ್‌ ಆಧರಿತ ಡಿಜಿಟಲ್‌ ಪದವಿ ಪ್ರಮಾಣಪತ್ರವನ್ನು ವಿತರಿಸಿದರು. ಈ ಡಿಜಿಟಲ್‌ ಪ್ರಮಾಣವನ್ನು ಪತ್ರವನ್ನು ಜಗತ್ತಿನ ಯಾವುದೇ ಭಾಗದಲ್ಲಿ ದೃಢೀಕರಿಸಬಹುದು ಜೊತೆಗೆ, ಇದನ್ನು ತಿರುಚಲೂ ಸಾಧ್ಯವಿಲ್ಲ.

Add Asianetnews Kannada as a Preferred SourcegooglePreferred

ಸ್ವತಃ ಐಐಟಿ ಕಾನ್ಪುರದಲ್ಲಿ ರಾಷ್ಟ್ರೀಯ ಬ್ಲಾಕ್‌ಚೈನ್‌ ಯೋಜನೆಯಡಿ ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. ಅದರ ಮೂಲಕವೇ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಧಾನಿ ಮೋದಿ ಪದವಿ ಪ್ರಮಾಣ ಪತ್ರ ವಿತರಣೆ ಮಾಡಿದರು.

ಇದೇ ವೇಳೆ ಮಾತನಾಡಿದ ಮೋದಿ,‘ಭಾರತವು ಸ್ವಾತಂತ್ರ್ಯ ಸಿಕ್ಕ ನಂತರ ಹೊಸ ಪಯಣ ಆರಂಭಿಸಿತು. ಆದರೆ ನಂತರದ ಅವಧಿಯಲ್ಲಿ ದೇಶವು ತನ್ನ ಕಾಲಿನ ಮೇಲೆ ತಾನು ನಿಂತುಕೊಳ್ಳಲಿಲ್ಲ. ಅರ್ಥಾತ್‌ ದೇಶವನ್ನು ಸ್ವಾವಲಂಬಿ ಮಾಡಲು ಯತ್ನ ನಡೆಯಲಿಲ್ಲ. ಅಪಾರ ಅಮೂಲ್ಯ ಸಮಯವನ್ನು ಈ ಸಂದರ್ಭದಲ್ಲಿ ಹಾಳು ಮಾಡಲಾಯಿತು. ಆದರೆ ಇನ್ನು ಮುಂದೆ ಹೀಗಾಕೂಡದು. ಭಾರತವನ್ನು ಆತ್ಮನಿರ್ಭರ ಮಾಡುವತ್ತ ಐಐಟಿ ಪದವೀಧರರು ಇನ್ನು ವಿಳಂಬ ಮಾಡಬಾರದು’ ಎಂದು ಕಿವಿಮಾತು ಹೇಳಿದರು.

ಸಾಕಷ್ಟುಸಮಯ ಹಾಳಾಗಿದೆ, ಬೇಗ ಭಾರತವನ್ನು ಆತ್ಮನಿರ್ಭರ ಮಾಡಿ: ಮೋದಿ

 ‘ಈಗಾಗಲೇ ಸಾಕಷ್ಟುಸಮಯ ವ್ಯಯವಾಗಿದೆ. ಐಐಟಿ ಪದವೀಧರರು ಭಾರತ ದೇಶ ಇನ್ನು 25 ವರ್ಷದಲ್ಲಿ ಹೇಗೆ ರೂಪುಗೊಳ್ಳಬೇಕು ಎಂಬ ನಿಟ್ಟಿನಲ್ಲಿ ಕೆಲಸ ಆರಂಭಿಸಬೇಕು’ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

ಮಂಗಳವಾರ ಐಐಟಿ-ಕಾನ್ಪುರದ 54ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ‘ಭಾರತವು ಸ್ವಾತಂತ್ರ್ಯ ಸಿಕ್ಕ ನಂತರ ಹೊಸ ಪಯಣ ಆರಂಭಿಸಿತು. ಆದರೆ ನಂತರದ ಅವಧಿಯಲ್ಲಿ ದೇಶವು ತನ್ನ ಕಾಲಿನ ಮೇಲೆ ತಾನು ನಿಂತುಕೊಳ್ಳಲಿಲ್ಲ. ಅರ್ಥಾತ್‌ ದೇಶವನ್ನು ಸ್ವಾವಲಂಬಿ ಮಾಡಲು ಯತ್ನ ನಡೆಯಲಿಲ್ಲ. ಅಪಾರ ಅಮೂಲ್ಯ ಸಮಯವನ್ನು ಈ ಸಂದರ್ಭದಲ್ಲಿ ಹಾಳು ಮಾಡಲಾಯಿತು. ಆದರೆ ಇನ್ನು ಮುಂದೆ ಹೀಗಾಕೂಡದು. ಭಾರತವನ್ನು ಆತ್ಮನಿರ್ಭರ ಮಾಡುವತ್ತ ಐಐಟಿ ಪದವೀಧರರು ಇನ್ನು ವಿಳಂಬ ಮಾಡಬಾರದು’ ಎಂದು ಕಿವಿಮಾತು ಹೇಳಿದರು. ಈ ಮೂಲಕ ಕೇಂದ್ರದಲ್ಲಿನ ಹಿಂದಿನ ಕಾಂಗ್ರೆಸ್‌ ಹಾಗೂ ಜನತಾ ಸರ್ಕಾರಗಳನ್ನು ಪರೋಕ್ಷವಾಗಿ ಟೀಕಿಸಿದರು.

ಭ್ರಷ್ಟಾಚಾರದ ಸುಗಂಧದ್ರವ್ಯ ಸಿಂಪಡಿಸಿದ್ದ ಎಸ್‌ಪಿ: ಮೋದಿ ಚಾಟಿ

ಕಾನ್ಪುರ: ಸಮಾಜವಾದಿ ಪಕ್ಷದ ಬೆಂಬಲಿಗ ಎನ್ನಲಾದ ಇಲ್ಲಿನ ಸುಗಂಧದ್ರವ್ಯ ಉದ್ಯಮಿ ಪೀಯೂಷ್‌ ಜೈನ್‌ ಮನೆಯಲ್ಲಿ ಸುಮಾರು 200 ಕೋಟಿ ರು. ನಗದು ಪತ್ತೆಯಾಗಿದ್ದನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಇಲ್ಲಿ ನಡೆದ ಸಮಾವೇಶದಲ್ಲಿ ಪ್ರಸ್ತಾಪಿಸಿದರು. ‘ಡಬ್ಬಗಟ್ಟಲೇ ನೋಟು ಹೊರಬರುತ್ತಿವೆ. ಈ ಕೆಲಸ ಮಾಡಿದ್ದು ನಾವೇ ಎಂದು ಸಮಾಜವಾದಿ ಪಕ್ಷ ಹೇಳಿಕೊಳ್ಳುತ್ತಾ? 2017ಕ್ಕಿಂತ ಮೊದಲು ಇವರು ಭ್ರಷ್ಟಾಚಾರದ ಸುಗಂಧದ್ರವ್ಯವನ್ನು ರಾಜ್ಯಾದ್ಯಂತ ಸಿಂಪಡಿಸಿದ್ದರು’ ಎಂದು ಮೋದಿ ಕುಟುಕಿದರು.