ಬೆಂಗಳೂರು (ನ. 23): ಶಾಲೆಗಳನ್ನು ಪುನಾರಂಭ ಮಾಡುವ ಬಗ್ಗೆ ಸರ್ಕಾರ ಉಮೇದು ತೋರಿಸುತ್ತಿದ್ದು ಇಂದು ಸಿಎಂ ಯಡಿಯೂರಪ್ಪ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. 

ಇಂದು ಮಧ್ಯಾಹ್ನ 12 ಗಂಟೆಗೆ ಅಧಿಕಾರಿಗಳ ಜೊತೆ ಸಿಎಂ ಮಹತ್ವದ ಸಭೆ ನಡೆಸಿದ್ದಾರೆ. 

ಡಿಸಂಬರ್ ಅಂತ್ಯದವರೆಗೆ ಶಾಲೆ ತೆರೆಯುವುದಿಲ್ಲ ಎಂಬ ನಿರ್ಧಾರಕ್ಕೆ ಬರಲಾಗಿದೆ. 

ತರಾತುರಿಯಲ್ಲಿ ಶಾಲೆ ಪ್ರಾರಂಭದ ಬಗ್ಗೆ ಸಾರ್ವಜನಿಕ ವಲಯದಿಂದ, ಪೋಷಕರ ವಲಯದಿಂದ ಆಕ್ಷೇಪ ವ್ಯಕ್ತವಾಗಿದೆ. 

ಶಾಲೆ ಆರಂಭಕ್ಕೂ ಮುನ್ನ ಈ ಕ್ರಮಗಳನ್ನು ಅನುಸರಿಸಲು ಆರೋಗ್ಯ ಇಲಾಖೆ ಸಲಹೆ ನೀಡಿದೆ. 

ಖಾಸಗಿ ಶಾಲೆಗಳ ಒಕ್ಕೂಟ ನೀಡಿದ ಸಲಹೆಗಳಿವು.