ಪಿಯು 2ನೇ ಪರೀಕ್ಷೆಯಲ್ಲಿ ಕೇವಲ 35% ಪಾಸ್..!
ಕಳೆದ ಏಪ್ರಿಲ್ 29ರಿಂದ ಮೇ 16ರವರಗೆ 301 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ-2 ನಡೆದಿತ್ತು. ಮೇ 15ರಿಂದ ಮೇ 18ರವರೆಗೆ 28 ಮೌಲ್ಯಮಾಪನ ಶಿಬಿರಗಳಲ್ಲಿ 7,875 ಮೌಲ್ಯ ಮಾಪಕರುಮೌಲ್ಯ ಮಾಪನ ನಡೆಸಿದ್ದರು. ಹೀಗಾಗಿ ಪರೀಕ್ಷೆ ಮುಕ್ತಾಯಗೊಂಡ ಐದನೇ ದಿನವೇ ಫಲಿತಾಂಶ ಪ್ರಕಟಗೊಂಡಿದೆ.
ಬೆಂಗಳೂರು(ಮೇ.22): ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-2ರ ಫಲಿತಾಂಶ ಪ್ರಕಟವಾಗಿದ್ದು, ಪರೀಕ್ಷೆಗೆ ಹಾಜರಾಗಿದ್ದ 1.48.942 ವಿದ್ಯಾರ್ಥಿಗಳಲ್ಲಿ 52,505 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ.35.25 ಫಲಿತಾಂಶ ಬಂದಿದೆ.
ಕಳೆದ ಏಪ್ರಿಲ್ 29ರಿಂದ ಮೇ 16ರವರಗೆ 301 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ-2 ನಡೆದಿತ್ತು. ಮೇ 15ರಿಂದ ಮೇ 18ರವರೆಗೆ 28 ಮೌಲ್ಯಮಾಪನ ಶಿಬಿರಗಳಲ್ಲಿ 7,875 ಮೌಲ್ಯ ಮಾಪಕರುಮೌಲ್ಯ ಮಾಪನ ನಡೆಸಿದ್ದರು. ಹೀಗಾಗಿ ಪರೀಕ್ಷೆ ಮುಕ್ತಾಯಗೊಂಡ ಐದನೇ ದಿನವೇ ಫಲಿತಾಂಶ ಪ್ರಕಟಗೊಂಡಿದೆ.
ಪರೀಕ್ಷೆ 2ರಲ್ಲಿ 84,637 ಬಾಲಕರು ಪರೀಕ್ಷೆಗೆ ಹಾಜರಾಗಿದ್ದು, 26,496 2 ಶೇ. 31.31 ಫಲಿತಾಂಶ ಮಾತ್ರ ಬಂದಿದೆ. ಇನ್ನು 64,310 ಬಾಲಕಿಯರು ಪರೀಕ್ಷೆ ಬರೆದಿದ್ದು 26,009 ಮಂದಿ ಉತ್ತೀರ್ಣರಾಗಿದ್ದಾರೆ. ಶೇ. 40.44 ಫಲಿತಾಂಶ ದಾಖಲಾಗಿದೆ. ವಿಜ್ಞಾನದಲ್ಲಿ ಉತ್ತಮ ಫಲಿತಾಂಶ: ಕಲಾ ವಿಷಯದಲ್ಲಿ 52,120 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 11,589 ಮಂದಿ ಉತ್ತೀರ್ಣರಾಗಿ ಶೇ. 21.24 ಫಲಿತಾಂಶ ಬಂದಿದೆ.
ಪಿಯುಸಿಯಲ್ಲಿ ಶೇ.99 ಅಂಕ ಪಡೆದ ಅನನ್ಯರಿಗೆ ಸಿಎ ಕಲಿಯುವಾಸೆ!
ವಾಣಿಜ್ಯ ವಿಷಯದಲ್ಲಿ 39.474 ವಿದ್ಯಾರ್ಥಿಗಳು ಪರೀಕ್ಷೆ ಬರದಿದ್ದು, 8,709 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.22.00ರಷ್ಟು ಫಲಿತಾಂಶ ದಾಖಲಾಗಿದೆ. ವಿಜ್ಞಾನ ವಿಷಯದಲ್ಲಿ 57,3478 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 32,207 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.56.19 ಫಲಿತಾಂಶ ವರದಿಯಾಗಿದೆ.
ಖಾಸಗಿ: ಶೇ.24.15 ಫಲಿತಾಂಶ: ಖಾಸಗಿ ವಿದ್ಯಾರ್ಥಿಗಳಾಗಿ ನೋಂದಾಯಿಸಿ ಕೊಂಡಿದ್ದ, ಕಳೆದ ಪರೀಕ್ಷೆಯಲ್ಲಿ ಫಲಿತಾಂಶ ಪೂರ್ಣಗೊಂಡಿರದ, ಪುನರಾವರ್ತಿತ ಹಾಗೂ ಶೇ.75ಕ್ಕಿಂತ ಕಡಿಮೆ ಹಾಜರಾತಿ ಹೊಂದಿದ್ದ 1,16,002 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಈ ಪೈಕಿ 28.009 ದುಂದಿ ಮಾತ್ರ ಉತ್ತೀರ್ಣ ರಾಗಿದ್ದು ಶೇ.24.15 ಫಲಿತಾಂಶ ಮಾತ್ರ ಬಂದಿದೆ. ಇದು ಫಲಿತಾಂಶ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಪರೀಕ್ಷೆ-2ನ್ನು, ಫಲಿತಾಂಶ ಸುಧಾರಣೆಗಾಗಿ 32,940 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಹೆಚ್ಚಿನ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಯಾಗಿಲ್ಲ.
ಜೂ.24ರಿಂದ ಪಿಯುಸಿ 3ನೇ ಪರೀಕ್ಷೆ
ಬೆಂಗಳೂರು: ದ್ವಿತೀಯ ಪಿಯುಪರೀಕ್ಷೆ-3ರ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದೆ. ಜೂನ್ 24ರಿಂದ ಪರೀಕ್ಷೆ ಆರಂಭಗೊಳ್ಳ ಲಿದ್ದು, ಜುಲೈ 5ರವರೆಗೆ ಪರೀಕ್ಷೆ ನಡೆಯಲಿದೆ. ಮೊದಲೆರಡು (ಪರೀಕ್ಷೆ 1 ಮತ್ತು 2) ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು, ಅಂಕ ಸುಧಾರಣೆ ಬಯ ಸುವವರು ಈ ಪರೀಕ್ಷೆ ಬರೆಯಬಹುದಾಗಿದೆ.