Asianet Suvarna News Asianet Suvarna News

ನೀಟ್ ಪಿಜಿ ಪರೀಕ್ಷೆಗೆ ದಿನಾಂಕ ಪ್ರಕಟ..! ಇಲ್ಲದೆ ಡೀಟೆಲ್ಸ್

ನೀಟ್‌ ಪಿಜಿ ಪರೀಕ್ಷೆಗಳ ದಿನಾಂಕ ಪ್ರಕಟ |  ಅರ್ಜಿಯ ನಮೂನೆ ಶೀಘ್ರವೇ ಪ್ರಕಟ

NEET PG 2021 exam date released check details here dpl
Author
Bangalore, First Published Jan 15, 2021, 11:34 AM IST

ನವದೆಹಲಿ(ಜ.15): ಸ್ನಾತಕೋತ್ತರ ವೈದ್ಯಕೀಯ ಪದವಿಯ ಪ್ರವೇಶ ಪರೀಕ್ಷೆ- ನೀಟ್‌ ಪಿಜಿ ಪರೀಕ್ಷೆಗಳ ದಿನಾಂಕ ಪ್ರಕಟವಾಗಿದೆ. 2021ರ ಏ.18ರಂದು ಕಂಪ್ಯೂಟರ್‌ ಆಧಾರಿತ ಆನ್‌ಲೈನ್‌ ಮಾದರಿಯಲ್ಲಿ ನೀಟ್‌ ಪಿಜಿ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ.

ವೈದ್ಯಕೀಯ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಲು ಬಯಸುವ ಅಭ್ಯರ್ಥಿಗಳು 2021 ಜೂ.30ರ ಒಳಗಾಗಿ ಇಂಟರ್ನ್‌ಶಿಪ್‌ ಅನ್ನು ಮುಗಿಸಿರಬೇಕು. ಅಲ್ಲದೇ ಸ್ನಾತಕೋತ್ತರ ಪದವಿಗೆ ಬೇಕಿರುವ ಇತರ ಅರ್ಹತೆಗಳನ್ನು ಪೂರೈಸಿರಬೇಕು.

ವಿದ್ಯಾರ್ಥಿಗಳೇ ಗಮನಿಸಿ: ಈ 8 ಬಿ.ಇಡಿ ಕಾಲೇಜುಗಳಿಗೆ ಪ್ರವೇಶ ಪಡೆಯದಿರಿ

ನೀಟ್‌ ಪಿಜಿ ಕೈಪಿಡಿ ಹಾಗೂ ಅರ್ಜಿಯ ನಮೂನೆಯನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದು ನ್ಯಾಷನಲ್‌ ಬೋರ್ಡ್‌ ಆಫ್‌ ಎಕ್ಸಾಮಿನೇಷನ್ಸ್‌ (ಎನ್‌ಬಿಇ) ತಿಳಿಸಿದೆ. ಆನ್‌ಲೈನ್‌ ಪರೀಕ್ಷೆಯನ್ನು ಕಂಪ್ಯೂಟರ್ ಆಧಾರಿತ ಕ್ರಮದಲ್ಲಿ ಏಪ್ರಿಲ್ 18, 2021 ರಂದು ರಾಷ್ಟ್ರದಾದ್ಯಂತದ ನೀಟ್ ಪಿಜಿ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುತ್ತದೆ.

ನೀಟ್ ಪಿಜಿ 2021 ಪರೀಕ್ಷೆಗೆ ಹಾಜರಾಗಲು, ಅಭ್ಯರ್ಥಿಗಳು ಜೂನ್ 30, 2021 ರಂದು ಅಥವಾ ಮೊದಲು ಇಂಟರ್ನ್‌ಶಿಪ್ ಪೂರ್ಣಗೊಳಿಸಬೇಕು ಮತ್ತು ಅಗತ್ಯವಿರುವ ಇತರ ಅರ್ಹತಾ ಮಾನದಂಡಗಳನ್ನು ಸಹ ಪೂರೈಸಬೇಕು.

Follow Us:
Download App:
  • android
  • ios