ಎಂಟು ಕಾಲೇಜುಗಳು ನಿಯಮಾನುಸಾರ ಮಾನದಂಡಗಳನ್ನು ಅನುಸರಿಸದ ಕಾರಣ ಎನ್‌ಸಿಟಿಇ ಮಾನ್ಯತೆ ಹಿಂಪಡೆದಿದೆ| ಇಂತಹ ಕಾಲೇಜಿಗೆ ಪ್ರವೇಶ ಪಡೆದರೆ ಅದಕ್ಕೆ ವಿವಿ ಹೊಣೆಗಾರ ಆಗುವುದಿಲ್ಲ: ಬೆಂಗಳೂರು ವಿಶ್ವವಿದ್ಯಾಲಯ ವಿವಿಯ ಕುಲಸಚಿವೆ ಕೆ.ಜ್ಯೋತಿ| 

ಬೆಂಗಳೂರು(ಜ.15): ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ (ಎನ್‌ಸಿಟಿಇ) ನೀಡಿದ್ದ ಮಾನ್ಯತೆ ಹಿಂಡೆದಿರುವ ಹಿನ್ನೆಲೆಯಲ್ಲಿ ತನ್ನ ವ್ಯಾಪ್ತಿಯ ಎಂಟು ಬಿ.ಇಡಿ ಕಾಲೇಜುಗಳ ಸಂಯೋಜನೆ ನವೀಕರಿಸಿಲ್ಲ. ಈ ಕಾಲೇಜುಗಳಿಗೆ ಪ್ರವೇಶ ಪಡೆಯಬಾರದು ಎಂದು ಬೆಂಗಳೂರು ವಿಶ್ವವಿದ್ಯಾಲಯ ಸೂಚಿಸಿದೆ.

ಈ ಎಂಟು ಕಾಲೇಜುಗಳು ನಿಯಮಾನುಸಾರ ಮಾನದಂಡಗಳನ್ನು ಅನುಸರಿಸದ ಕಾರಣ ಎನ್‌ಸಿಟಿಇ ಮಾನ್ಯತೆಯನ್ನು ಹಿಂಪಡೆದಿದೆ. ಇಂತಹ ಕಾಲೇಜಿಗೆ ಪ್ರವೇಶ ಪಡೆದರೆ ಅದಕ್ಕೆ ವಿವಿ ಹೊಣೆಗಾರ ಆಗುವುದಿಲ್ಲ ವಿವಿಯ ಕುಲಸಚಿವೆ ಕೆ.ಜ್ಯೋತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪದವಿ-ಸ್ನಾತಕೋತ್ತರ ಕ್ಲಾಸ್ ಶುರು... ಏನೆಲ್ಲ ನಿಯಮ ಗಮನಿಸಿ

ಕಾಲೇಜುಗಳ ಪಟ್ಟಿ:

ಕೆಂಗೇರಿಯ ಸೈಂಟ್‌ ಸ್ಟೀಫನ್ಸ್‌ ಟೀಚರ್ಸ್‌ ಕಾಲೇಜು, ಜೆ.ಪಿ.ನಗರದ ಜಿಕೆಎಂ ಬಿ.ಇಡಿ ಕಾಲೇಜು, ಫ್ರಾಂಕ್‌ ಕಾಲೇಜ್‌ ಆಫ್‌ ಎಜುಕೇಷನ್‌, ಫ್ಲಾರೆನ್ಸ್‌ ಇಂಗ್ಲಿಷ್‌ ಇನ್‌ಸ್ಟಿಟ್ಯೂಟ್‌ ಆಫ್‌ ಬಿ.ಇಡಿ ಟ್ರೈನಿಂಗ್‌ ಕಾಲೇಜು, ಹೆಸರುಘಟ್ಟ ಮುಖ್ಯರಸ್ತೆಯ ಪ್ರಗತಿ ಕಾಲೇಜ್‌ ಆಫ್‌ ಎಜುಕೇಶನ್‌, ಹೊಸೂರು ರಸ್ತೆಯ ಕಲಾನಿಕೇತನ್‌ ಕಾಲೇಜ್‌ ಆಫ್‌ ಎಜುಕೇಷನ್‌, ಬಿಳೇಕಹಳ್ಳಿಯ ಶಾಂತಿನಿಕೇತನ್‌ ಬಿ.ಇಡಿ ಕಾಲೇಜ್‌, ಮಹಾಲಕ್ಷ್ಮೇಪುರದ ಅಮಿತ್‌ ಬಿ.ಇಡಿ ಕಾಲೇಜುಗಳ ಮಾನ್ಯತೆಯನ್ನು ಎನ್‌ಸಿಟಿಇ ಹಿಂಪಡೆದಿದೆ ಎಂದು ವಿವಿ ತಿಳಿಸಿದೆ.