Asianet Suvarna News Asianet Suvarna News

ಪದವಿ-ಸ್ನಾತಕೋತ್ತರ ಕ್ಲಾಸ್ ಶುರು... ಏನೆಲ್ಲ ನಿಯಮ ಗಮನಿಸಿ

ಶುಕ್ರವಾರದಿಂದ ಪದವಿ ಹಾಗೂ ಸ್ನಾತಕೋತ್ತರ ತರಗತಿಗಳು ಆರಂಭ/ ಆಫ್‌ಲೈನ್‌ ತರಗತಿಗಳು ಶುರು/ ಆಫ್‌ಲೈನ್‌- ಆನ್‌ಲೈನ್‌ ಹಾಜರಿ ಕಡ್ಡಾಯ/ ಕೋವಿಡ್‌ ಲಕ್ಷಣ ಇಲ್ಲದಿದ್ದರೆ ಪರೀಕ್ಷೆ ಅಗತ್ಯವಿಲ್ಲ/ ಹೊಸ ಎಸ್‌ಒಪಿ ಯೊಂದಿಗೆ ಆಫ್ ಲೈನ್ ತರಗತಿಗಳ ಆರಂಭ/ * ಆಫ್‌ಲೈನ್‌ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಪೋಷಕರಿಂದ ನಿಗದಿತ ನಮೂನೆಯಲ್ಲಿ ಕಡ್ಡಾಯವಾಗಿ ಒಪ್ಪಿಗೆ ಪತ್ರ ಬೇಕು

News for Students  degree and postgraduate classes ready to start in Karnataka  on Jan 15 mah
Author
Bengaluru, First Published Jan 14, 2021, 10:31 PM IST

ಬೆಂಗಳೂರು( ಜ. 14 ) ಕೊರೋನಾ ಸಂಕಷ್ಟಗಳು ಒಂದೊಂದಾಗಿ ದೂರವಾಗುತ್ತಿದ್ದು ಶುಕ್ರವಾರದಿಂದ ಪದವಿ ಹಾಗೂ ಸ್ನಾತಕೋತ್ತರ ತರಗತಿಗಳು ಆರಂಭವಾಗಲಿದೆ. ಆಫ್‌ಲೈನ್‌- ಆನ್‌ಲೈನ್‌ ಹಾಜರಿ ಕಡ್ಡಾಯ ಮಾಡಲಾಗಿದ್ದು  ಕೋವಿಡ್‌ ಲಕ್ಷಣ ಇಲ್ಲದಿದ್ದರೆ ಪರೀಕ್ಷೆ ಅಗತ್ಯವಿಲ್ಲ. ಆಫ್‌ಲೈನ್‌ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಪೋಷಕರಿಂದ ನಿಗದಿತ ನಮೂನೆಯಲ್ಲಿ ಕಡ್ಡಾಯವಾಗಿ ಒಪ್ಪಿಗೆ ಪತ್ರ  ತರಬೇಕು ಎಂದು ತಿಳಿಸಲಾಗಿದೆ.

ಒಪ್ಪಿಗೆ ಪತ್ರ ತರದಿದ್ದರೆ ನೇರ ತರಗತಿಗಳಿಗೆ ಪ್ರವೇಶ ಇರುವುದಿಲ್ಲ.  ಮಾರ್ಗಸೂಚಿಯಂತೆ ಆಫ್‌ಲೈನ್‌ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಕಾಲೇಜಿನಲ್ಲಿ ಲಭ್ಯವಿರುವ ಕೊಠಡಿಗಳ ಸಂಖ್ಯೆಗೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ.

ಉಪನ್ಯಾಸಕರಿಗೂ ಗುಡ್ ನ್ಯೂಸ್ ಕೊಟ್ಟ ಸರ್ಕಾರ

ಆರೋಗ್ಯ ಇಲಾಖೆಯ ನಿಯಮಗಳನ್ನು ಮೀರುವಂತಿಲ್ಲ.  ಸಾಮಾಜಿಕ ಅಂತರ ಕಡ್ಡಾಯ. ತರಗತಿ ವೇಳಾಪಟ್ಟಿಯನ್ನು ಕಾಲೇಜಿನ ಹಂತದಲ್ಲಿಯೇ ಸಿದ್ಧ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ.

ಇನ್ನಷ್ಟು ಸೂಚನೆಗಳು

* ಬೋಧನಾ, ಪ್ರಾಕ್ಟಿಕಲ್‌, ಪ್ರಾಜೆಕ್ಟ್‌ ತರಗತಿಗಳನ್ನು ಅಗತ್ಯಬಿದ್ದರೆ ಪಾಳಿ ಆಧಾರದಲ್ಲಿ ಮಾಡಬಹುದು.

* ನೇರ ತರಗತಿಗಳಿಗೆ ಹಾಜರಾಗಲು ಇಚ್ಛಿಸದ ವಿದ್ಯಾರ್ಥಿಗಳು ಆನ್‌ಲೈನ್‌ ತರಗತಿಗಳಿಗೆ ಹಾಜರಾಗಬಹುದು.

 ಇಂಥ ವಿದ್ಯಾರ್ಥಿಗಳಿಗೆ ಪಠ್ಯದ ಬಗ್ಗೆ ಇರುವ ಅನುಮಾನ, ಗೊಂದಲಗಳನ್ನು ನಿವಾರಿಸಲು ಪ್ರತಿದಿನ ಭೌತಿಕ ಸಂಪರ್ಕ ತರಗತಿಗಳನ್ನು (Contact Classes) ನಡೆಸಬಹುದು.  ಸಂಪರ್ಕ ತರಗತಿಗಳನ್ನು ನಡೆಸುವಾಗಲೂ ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸಲೇಬೇಕು.

* ಎಲ್ಲ ಅಧ್ಯಾಪಕರು ತಮ್ಮ ತರಗತಿಗಳ ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಕುರಿತು ಮುಂದಿನ ಕನಿಷ್ಠ ಇಂದು ತಿಂಗಳ ಕಾಲ ಪ್ರತಿ ತರಗತಿಗೆ ಸಂಬಂಧಿಸಿದ ಅಧ್ಯಯನ ಸಾಮಗ್ರಿಯನ್ನು ವಾಟ್ಸಾಪ್‌, ಇ ಮೇಲ್‌ ಅಥವಾ ಟೆಲಿಗ್ರಾಂ ಮೂಲಕ ಕಳಿಸಬೇಕು.

* ವಿಡಿಯೋ ಪಾಠಗಳು, ಪವರ್‌ ಪಾಯಂಟ್‌ ಪ್ರೆಸೆಂಟೇಶನ್‌, ಇ-ಪುಸ್ತಕ, ಇ-ನೋಟ್ಸ್‌, ಆಡಿಯೋ ಪುಸ್ತಕ, ಅಭ್ಯಾಸ ಪ್ರಶ್ನೆಗಳನ್ನು ಇತ್ಯಾದಿ ಅಧ್ಯಯನ ಸಾಮಗ್ರಿಯನ್ನು ಕಡ್ಡಾಯವಾಗಿ ಕಾಲೇಜ್‌ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಬೇಕು.

* ಇನ್ನು ಆನ್‌ಲೈನ್‌ ಅಥವಾ ಆಫ್‌ಲೈನ್‌ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಆನ್‌ ಕ್ಯಾಂಪಸ್‌ ಮತ್ತು ಆಫ್‌ ಕ್ಯಾಂಪಸ್‌ ಹಾಸ್ಟೆಲುಗಳಲ್ಲಿ ಉಳಿದುಕೊಳ್ಳಬಹುದು.

ಸಾಮಾನ್ಯ ಮಾರ್ಗಸೂಚಿ:

* ತರಗತಿಗಳ ಆರಂಭಕ್ಕೆ ಮುನ್ನ ಕಾಲೇಜಿನ ಕಟ್ಟಡ, ಮುಖ್ಯದ್ವಾರ, ಗ್ರಂಥಾಲಯ, ಶೌಚಾಲಯ, ಕೊಠಡಿ, ಪೀಠೋಪಕರಣ ಹಾಗೂ ಆಧ್ಯಯನ ಪುಸ್ತಕಗಳನ್ನು ಸ್ಯಾನಿಟೈಸ್‌ ಮಾಡಬೇಕು.

* ಕಾಲೇಜಿನ, ದ್ವಾರದಲ್ಲಿಯೇ  ಥರ್ಮಲ್‌ ಸ್ಕೀನಿಂಗ್‌ ಹಾಗೂ ಸ್ಯಾನಿಟೈಸ್‌ ವ್ಯವಸ್ಥೆ ಕಡ್ಡಾಯ.

* ವಿದ್ಯಾರ್ಥಿಗಳು, ಬೋಧಕರು, ಬೋಧಕೇತರ ಸಿಬ್ಬಂದಿ ಕೋವಿಡ್-‌೧೯ ಪರೀಕ್ಷೆಗೆ ಒಳಪಡುವ ಅಗತ್ಯವಿಲ್ಲ.

* ಕೋವಿಡ್‌ ಲಕ್ಷಣಗಳು ಇರುವವರು ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು 

* ಹತ್ತಿರದಲ್ಲೇ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳೊಂದಿಗೆ ಎಲ್ಲ ಕಾಲೇಜುಗಳು ಮ್ಯಾಪಿಂಗ್‌ ಮಾಡಿಕೊಳ್ಳಬೇಕು.

* ವಿದ್ಯಾರ್ಥಿಗಳ ಹಾಜರಾತಿ ಪ್ರತಿ ಕೊಠಡಿಗೆ ಶೇ.೫೦ ಮೀರುವಂತಿಲ್ಲ.

* ಹಾಜರಾತಿ ಹೆಚ್ಚಿದರೆ ಹೆಚ್ಚುವರಿ ಕೊಠಡಿ ವ್ಯವಸ್ಥೆ ಮಾಡಿಕೊಳ್ಳಬೇಕು. 

* ನೇರ ತರಗತಿಗೆ ಹಾಜರಾಗುವ ವಿದ್ಯಾರ್ಥಿ ಕಡ್ಡಾಯವಾಗಿ ಮನೆಯಿಂದಲೇ ಊಟ ತರಬೇಕು

* ಕುಡಿಯುವ ನೀರು ಮನೆಯಿಂದ ತರಬೇಕು

*  ಮಾಸ್ಕ್‌, ಸ್ಯಾನಿಟೈಸರ್‌  ಕಡ್ಡಾಯ.

* ಬೋಧಕರಿಗೂ, ಇತರೆ ಎಲ್ಲ ಸಿಬ್ಬಂದಿಗೂ ಇದು ಅನ್ವಯ

* ಲೈಬ್ರರಿ, ಕ್ಯಾಂಟೀನ್‌ ಆರಂಭಕ್ಕೆ ಅಡ್ಡಿ ಇಲ್ಲ. 

* ಆದರೆ ಮಾರ್ಗಸೂಚಿ ನಿಯಮ ಮೀರುವಂತಿಲ್ಲ. 

* ಎನ್‌ಎಸ್‌ಎಸ್‌ ಹಾಗೂ ಎನ್‌ಸಿಸಿ ಚಟುವಟಿಕೆಗಳನ್ನು ಕೋವಿಡ್‌ ಮಾರ್ಗಸೂಚಿಯಂತೆ ಆರಂಭಿಸಬಹುದು. 

* ನೂತನ ಮಾರ್ಗಸೂಚಿಯ ವಿವರವಾದ ಕರಡನ್ನು ಎಲ್ಲ ಶಿಕ್ಷಣ ಸಂಸ್ಥೆ, ಕಾಲೇಜುಗಳಿಗೆ ಕಳಿಸಬೇಕು

* ಆಯಾ ಸಂಸ್ಥೆಗಳ ಆಡಳಿತ ಮಂಡಳಿ, ಪ್ರಾಂಶುಪಾಲರು ಕೂಲಂಕಷವಾಗಿ ಗಮನಿಸಿ ಮಾರ್ಗಸೂಚಿ ಜಾರಿ ಮಾಡಬೇಕು

 

Follow Us:
Download App:
  • android
  • ios