ಬೋಟ್ ಪ್ರಾಯೋಜಿತ ಕಂಪ್ಯೂಟರ್ ತರಬೇತಿ ಕೇಂದ್ರ ಉದ್ಘಾಟಿಸಿದ ನಮ್ಮ ಬೆಂಗಳೂರು ಫೌಂಡೇಶನ್!
ಡಿಜಿಟಲ್ ಶಿಕ್ಷಣದಿಂದ ವಂಚಿತರಾಗುವ ಸರ್ಕಾರಿ ಶಾಲಾ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ನಮ್ಮ ಬೆಂಗಳೂರು ಫೌಂಡೇಷನ್ ಹಾಗೂ ಬೋಟ್ ಸಹಭಾಗಿತ್ವದಲ್ಲಿ ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ತರಬೇತಿ ಕೇಂದ್ರ ಸ್ಥಾಪಿಸುವ ಮಹತ್ರ ಹೆಜ್ಜೆ ಇಟ್ಟಿದೆ. ಮೊದಲ ಹಂತದಲ್ಲಿ ರಾಮಮೂರ್ತಿನಗರದಲ್ಲಿ ಡಿಜಿ ಲ್ಯಾಬ್ ಉದ್ಘಾಟಿಸಿದೆ.
ಬೆಂಗಳೂರು(ಜ.31) ಗ್ರಾಮೀಣ ಪ್ರದೇಶ, ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಹಲವು ವಿದ್ಯಾರ್ಥಿಗಳು ಡಿಜಿಟಲ್ ಶಿಕ್ಷಣದಿಂದ ವಂಚಿರಾಗುತ್ತಿದ್ದಾರೆ. ಯುವ ಮನಸ್ಸುಗಳಿಗೆ ನಡುವಿನ ಡಿಜಿಟಲ್ ಶಿಕ್ಷಣ ಕೊಂಡಿಯಾಗಿ ಕಾರ್ಯನಿರ್ವಹಿಸಲು ನಮ್ಮ ಬೆಂಗಳೂರು ಫೌಂಡೇಶನ್(NBF) ಹಾಗೂ ಜನಪ್ರಿಯ ಎಲೆಕ್ಟ್ರಾನಿಕ್ ಬ್ರ್ಯಾಂಡ್ ಬೋಟ್ ಜಂಟಿಯಾಗಿ ಮಹತ್ವದ ಹೆಜ್ಜೆ ಇಟ್ಟಿದೆ. ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ ಅಡಿ NBF ಹಾಗೂ ಬೋಟ್ ಸರ್ಕಾರಿ ಶಾಲಾ ಮಕ್ಕಳಿಗೆ ಕಂಪ್ಯೂಟರ್ ತರಬೇತಿ ಕೇಂದ್ರ ಆರಂಭಿಸಿದೆ. ಮೊದಲ ಹಂತದಲ್ಲಿ ಬೆಂಗಳೂರಿನ ರಾಮಮೂರ್ತಿ ನಗರದ ಸರ್ಕಾರಿ ಶಾಲೆಯಲ್ಲಿ ಬೋಟ್ ಪ್ರಾಯೋಜಕತ್ವದ ಕಂಪ್ಯೂಟರ್ ತರಬೇತಿ ಕೇಂದ್ರವನ್ನು NBF ಉದ್ಘಾಟಿಸಿದೆ.
ನೂತನ ಕಂಪ್ಯೂಟರ್ ತರಬೇತಿ ಕೇಂದ್ರ ವಿದ್ಯಾರ್ಥಿಗಳ ಉಜ್ವಲ ರೂಪಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ. ಇಂದಿನ ಡಿಜಿಟಲ್ ಯುಗದಲ್ಲಿ ಬೇಕಾದ ಅಗತ್ಯ ಕಂಪ್ಯೂಟರ್ ಮಾಹಿತಿ, ಮೂಲಭೂತ ಕಂಪ್ಯೂಟರ್ ಕೌಶಲ್ಯ, ತರಬೇತಿಗಳ ಮೂಲಕ ಯುವ ಮನಸ್ಸುಗಳನ್ನು ಸಶಕ್ತಗೊಳಿಸಲು ಈ ಕಾರ್ಯಕ್ರಮ ನೆರವಾಗಲಿದೆ. ಡಿಜಿಟಲ್ ಸಾಕ್ಷರತೆ, ಕಂಪ್ಯೂಟರ್ ಕಾರ್ಯಚರಣೆ ಸೇರಿದಂತೆ ಹಲವು ವಿಷಯಗಳ ಕುರಿತು ಈ ತರಬೇತಿ ಕೇಂದ್ರಗಳು ವಿದ್ಯಾರ್ಥಿಗಳಿಗೆ ತಿಳಿಹೇಳಲಿದೆ.
Bengaluru: ಸಿಲಿಕಾನ್ ಸಿಟಿಯಲ್ಲಿ ನಮ್ಮ ಬೆಂಗಳೂರು ಫೌಂಡೇಶನ್‌ನಿಂದ ರಸ್ತೆ ಸುರಕ್ಷತಾ ಸಪ್ತಾಹ
ದಿನದಿಂದ ದಿನಕ್ಕೆ ವಿಕಸಿಸುತ್ತಿರುವ ಡಿಜಿಟಲ್ ಕ್ಷೇತ್ರದಲ್ಲಿರುವ ವಿಫುಲ ಅವಕಾಶಗಳು ಹಾಗೂ ತಮ್ಮನ್ನು ತಾವು ಡಿಜಿಟಲ್ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ವಿದ್ಯಾರ್ಥಿಗಳನ್ನು ಸಜ್ಜು ಮಾಡಲು ಈ ತರಬೇತಿ ಕೇಂದ್ರಗಳು ನೆರವಾಗಲಿದೆ. ಡಿಜಿಟಲ್ ನ್ಯಾವಿಗೇಶನ್, ಡಿಜಿಟಲ್ ಜ್ಞಾನ ಸೇರಿದಂತೆ ಸಮಗ್ರ ತರಬೇತಿಯನ್ನು ವಿದ್ಯಾರ್ಥಿಗಳು ಪಡೆಯಲಿದ್ದಾರೆ.
ನಮ್ಮ ಬೆಂಗಳೂರು ಫೌಂಡೇಶನ್ ಸಹಯೋಗದ ಮೂಲಕ ನಾವು ಹಿಂದುಳಿದ ವಿದ್ಯಾರ್ಥಿಗಳಿಗೆ ಅತ್ಯವಶ್ಯಕ ಕಂಪ್ಯೂಟರ್ ಕೌಶಲ್ಯದ ತರಬೇತಿ ನೀಡುವ ಗುರಿ ಹೊಂದಿದ್ದೇವೆ ಎಂದು ಬೋಟ್ ಸಹ ಸಂಸ್ಥಾಪಕ ಹಾಗೂ ಸಿಇಒ ಸಮೀರ್ ಹೇಳಿದ್ದಾರೆ. ತಂತ್ರಜ್ಞಾನದದ ಮೂಲಕ ಜೀವನ ಸಶಕ್ತಗೊಳಿಸಲು ಹಾಗೂ ಪರಿವರ್ತನೆಗೆ ನಾಂದಿ ಹಾಡಲು ಬೋಟ್ ಸದಾ ನೆರವು ನೀಡುತ್ತದೆ. ವಿದ್ಯಾರ್ಥಿಗಳ ಕಲಿಕೆಯ ಅನುಭವ ಹೆಚ್ಚಿಸುವುದು ಮಾತ್ರವಲ್ಲ, ಹೊಸ ಅವಕಾಶಗಳು ಹಾಗೂ ವೃತ್ತಿಪರ ಬೆಳವಣಿಗೆಗೂ ಸಹಕಾರಿಯಾಗಲಿದೆ ಎಂದು ಸಮೀರ್ ಹೇಳಿದ್ದಾರೆ.
ಅಕ್ರಮ ಸಕ್ರಮ ಪ್ರಕರಣದಲ್ಲಿ ಜನ ಪರ ನಿಲುವು ಸ್ಪಷ್ಟಪಡಿಸಿದ ನಮ್ಮ ಬೆಂಗಳೂರು ಫೌಂಡೇಶನ್!
ವಿದ್ಯಾರ್ಥಿಗಳಿಗೆ ಡಿಜಿಟಲ್ ಕೌಶಲ್ಯ ಅಭಿವೃದ್ಧಿಯ ಅರ್ಥಪೂರ್ಣ ಹಾಗೂ ಪರಿಣಾಮಕಾರಿ ಕಾರ್ಯಕ್ರಮದಲ್ಲಿ ಬೋಟ್ ಜೊತೆ ಕೈಜೋಡಿಸಿರುವುದು ನಮ್ಮ ಸಂತಸ ಇಮ್ಮಡಿಗೊಳಿಸಿದೆ. ಕಂಪ್ಯೂಟರ್ ತರಬೇತಿಗಳ ಮೂಲಕ ವಿದ್ಯಾರ್ಥಿಗಳು ಹಾಗೂ ಡಿಜಿಟಲ್ ನಡುವಿನ ಕಂದಕದ ಅಂತರ ಕಡಿಮೆ ಮಾಡಲು ಸಹಾಯವಾಗಲಿದೆ. ಇದು ಸರ್ಕಾರಿ ಶಾಲಾ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ ಎಂದು ನಮ್ಮ ಬೆಂಗಳೂರು ಫೌಂಡೇಶನ್ ಟ್ರಸ್ಟ್ ಸದಸ್ಯ ಸಂಜಯ್ ಕೆ ಪ್ರಭು ಹೇಳಿದ್ದಾರೆ. ಡಿಜಿಟಲ್ ಜಗತ್ತಿಲ್ಲಿನ ಸಾಧನೆಗೆ ಅತ್ಯುತ್ತಮ ಕೌಶಲ್ಯ, ತರಬೇತಿ ಅಗತ್ಯವಿದೆ. ಇದನ್ನು boAt ಹಾಗೂ NBF ನೀಡಲಿದೆ ಎಂದು ಸಂಜಯ್ ಕೆ ಪ್ರಭು ಹೇಳಿದ್ದಾರೆ.