Asianet Suvarna News Asianet Suvarna News

13,000ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹಿಂದಿಕ್ಕಿ 12ನೇ ತರಗತಿ ಸಂಸ್ಕೃತ ಮಂಡಳಿಯಲ್ಲಿ ಟಾಪರ್ ಆದ ಮುಸ್ಲಿಂ ಹುಡುಗ

ಮುಂದೊಂದು ದಿನ ಸಂಸ್ಕೃತ ಅಧ್ಯಾಪಕನಾಗುವ ಕನಸು ಹೊತ್ತಿರುವ ಇರ್ಫಾನ್ 10 ಮತ್ತು 12ನೇ ತರಗತಿಯ ಪರೀಕ್ಷೆಗಳಲ್ಲಿ ಟಾಪ್ 20 ಅಂಕ ಗಳಿಸಿದವರಲ್ಲಿ ಒಬ್ಬನೇ ಮುಸ್ಲಿಂ ವಿದ್ಯಾರ್ಥಿಯಾಗಿದ್ದಾನೆ. 

muslim boy beats over 13000 students to top up sanskrit board class 12 exams ash
Author
First Published May 6, 2023, 4:03 PM IST

ಲಖನೌ (ಮೇ 6, 2023): ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ಕೃಷಿ ಕಾರ್ಮಿಕ ಸಲಾವುದ್ದೀನ್ ಅವರ 17 ವರ್ಷದ ಮಗ ಮೊಹಮ್ಮದ್ ಇರ್ಫಾನ್ ಉತ್ತರ ಪ್ರದೇಶ ಮಾಧ್ಯಮಿಕ ಸಂಸ್ಕೃತ ಶಿಕ್ಷಾ ಪರಿಷತ್ ಮಂಡಳಿಯ ಉತ್ತರ ಮಾಧ್ಯಮ-II (12 ನೇ ತರಗತಿ) ಪರೀಕ್ಷೆಯಲ್ಲಿ 82.71% ಅಂಕಗಳನ್ನು ಗಳಿಸುವ ಮೂಲಕ ಅಗ್ರಸ್ಥಾನ ಪಡೆದಿದ್ದಾನೆ. ಯುಪಿಯ ಮಂಡಳಿಯು ಇತರ ವಿಷಯಗಳ ಜೊತೆಗೆ ಸಂಸ್ಕೃತ ಭಾಷೆ ಮತ್ತು ಸಾಹಿತ್ಯವನ್ನು ಎರಡು ಕಡ್ಡಾಯ ವಿಷಯಗಳಾಗಿ ಹೊಂದಿದೆ. ಮುಂದೊಂದು ದಿನ ಸಂಸ್ಕೃತ ಅಧ್ಯಾಪಕನಾಗುವ ಕನಸು ಹೊತ್ತಿರುವ ಇರ್ಫಾನ್ 10 ಮತ್ತು 12ನೇ ತರಗತಿಯ ಪರೀಕ್ಷೆಗಳಲ್ಲಿ ಟಾಪ್ 20 ಅಂಕ ಗಳಿಸಿದವರಲ್ಲಿ ಒಬ್ಬನೇ ಮುಸ್ಲಿಂ ವಿದ್ಯಾರ್ಥಿಯಾಗಿದ್ದಾನೆ. 

ಬಡ ಕುಟುಂಬಕ್ಕೆ ಸೇರಿದ ಇರ್ಫಾನ್‌ ಅವರ ತಂದೆ ತಾನು ಮಗನನ್ನು  ಸಂಸ್ಕೃತ ಸರ್ಕಾರಿ ಶಾಲೆಗೆ ಸೇರಿಸಿದ್ದೆ ಎಂದು ಹೆಮ್ಮೆಯ ತಂದೆ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಶಾಲೆಯ ಶುಲ್ಕ ಕಡಿಮೆ ಇದ್ದುದ್ದರಿಂದ ತಾನು ಈ ಶಾಲೆಗೆ ಮಾತ್ರ ಮಗನನ್ನು ಸೇರಿಸಬಹುದೆಂದು ಈ ನಿರ್ಧಾರಕ್ಕೆ ಬಂದಿದ್ದೆ ಎಂದೂ ಅವರು ಹೇಳಿದ್ದಾರೆ.

ಇದನ್ನು ಓದಿ: ಸಂಸ್ಕೃತ ಪಂಡಿತೆಯಾದ ಡಾ. ನೂರಿಮಾ ಯಾಸ್ಮಿನ್ ಶಾಸ್ತ್ರಿ: ಕುರಾನ್ ಜತೆ ವೇದ ಅಧ್ಯಯನ ಮಾಡಿರೋ ಮುಸ್ಲಿಂ ಮಹಿಳೆ

"ನಾನು 300 ರೂಪಾಯಿಗಳ ದೈನಂದಿನ ಕೂಲಿಯನ್ನು ಪಡೆಯುವ ಕೃಷಿ ಕಾರ್ಮಿಕ ಮತ್ತು ಪ್ರತಿ ತಿಂಗಳು ಕೆಲವು ದಿನಗಳವರೆಗೆ ಮಾತ್ರ ಕೆಲಸ ಮಾಡುತ್ತೇನೆ. ಇರ್ಫಾನ್‌ನನ್ನು ಖಾಸಗಿ ಅಥವಾ ಬೇರೆ ಯಾವುದೇ ಶಾಲೆಗೆ ಕಳುಹಿಸಲು ನನಗೆ ಸಾಧ್ಯವಾಗಲಿಲ್ಲ. ಅವನು ನನ್ನ ಒಬ್ಬನೇ ಮಗನಾದ್ದರಿಂದ ಅವನು ಅಧ್ಯಯನ ಮಾಡಲು ನಾನು ಬಯಸಿದೆ. ನಂತರ, ಸಂಪೂರ್ಣಾನಂದ ಸಂಸ್ಕೃತ ಶಾಲೆಯ ಬಗ್ಗೆ ಹಾಗೂ ಅಲ್ಲಿ ವಾರ್ಷಿಕ ಶುಲ್ಕ ರೂ 400-500 ಮಾತ್ರ ಎಂದು ತಿಳಿದುಕೊಂಡೆ’’ ಎಂದು ಚಂದೌಲಿ ಜಿಲ್ಲೆಯ ಸಕಲ್ದಿಹಾ ತಾಲೂಕಿನ ಜಿಂದಾಸ್‌ಪುರ ಗ್ರಾಮದ ನಿವಾಸಿ ಸಲಾವುದ್ದೀನ್ ತಮ್ಮ ಕಷ್ಟವನ್ನು ಹೇಳಿಕೊಂಡರು. 

ಇರ್ಫಾನ್ ಯಾವಾಗಲೂ ಅಧ್ಯಯನದಲ್ಲಿ ಉತ್ತಮವಾಗಿದ್ದ ಮತ್ತು ಶಾಲೆಯಲ್ಲಿ ಅವನು ಮೊದಲ ದಿನದಿಂದಲೇ ಸಂಸ್ಕೃತ ಭಾಷೆಯಲ್ಲಿ ತೀವ್ರ ಆಸಕ್ತಿಯನ್ನು ಹೊಂದಲು ಪ್ರಾರಂಭಿಸಿದನು. "ಅವನು ತಮ್ಮ ಅಧ್ಯಯನಕ್ಕೆ ಎಷ್ಟು ಮುಡಿಪಾಗಿದ್ದನು ಎಂದರೆ ಅವನು ನಮ್ಮ ಚಿಕ್ಕ ಮನೆ ಅಥವಾ ಕನಿಷ್ಠ ಸೌಲಭ್ಯಗಳ ಬಗ್ಗೆ ಎಂದಿಗೂ ದೂರು ನೀಡಲಿಲ್ಲ. ನಮ್ಮ ಬಳಿ ಸೀಮೆಂಟ್ ಮನೆಯೂ ಇಲ್ಲ. ಒಂದು ತಿಂಗಳ ಹಿಂದೆ, ಸರ್ಕಾರದ ಯೋಜನೆಯಡಿ, ನಾವು ಪಕ್ಕಾ ಮನೆ ಕಟ್ಟಡ ನಿರ್ಮಾಣಕ್ಕೆ ಹಣವನ್ನು ಪಡೆದುಕೊಂಡಿದ್ದೇವೆ’’ ಎಂದೂ ತಿಳಿಸಿದರು.

ಇದನ್ನೂ ಓದಿ: ಮದ್ರಸಾಗೆ ಹೋಗ್ದೆ ಹಠ ಹಿಡಿದು ಶಾಲೆ, ಕಾಲೇಜಲ್ಲಿ ಓದಿ ಈ ಗ್ರಾಮದ ಮೊದಲ ಡಾಕ್ಟರ್‌ ಎನಿಸಿಕೊಂಡ ಶೇಖ್‌ ಯೂನುಸ್‌

ಅಲ್ಲದೆ, "ಜನರು ಒಂದು ಭಾಷೆಯನ್ನು ಧರ್ಮದೊಂದಿಗೆ ಏಕೆ ಲಿಂಕ್‌ ಮಾಡುತ್ತಾರೆ ಎಂದು ನನಗೆ ತಿಳಿದಿಲ್ಲ. ಒಬ್ಬ ಹಿಂದೂ ಉರ್ದು ಭಾಷೆಯಲ್ಲಿ ಮತ್ತು ಮುಸ್ಲಿಂ ವಿದ್ಯಾರ್ಥಿ ಸಂಸ್ಕೃತದಲ್ಲಿ ಉತ್ತಮ ಸಾಧನೆ ಮಾಡಬಹುದು. ನಾನು ಪದವೀಧರನಾಗಿದ್ದೇನೆ ಮತ್ತು ಶಿಕ್ಷಣದ ಮಹತ್ವವನ್ನು ನಾನು ಅರಿತುಕೊಂಡಿದ್ದೇನೆ. ನಾವು ಇರ್ಫಾನ್‌ನನ್ನು ಏನನ್ನೂ ಮಾಡುವುದನ್ನು ತಡೆಯಲಿಲ್ಲ. ಅವನು ಸಂಸ್ಕೃತ ಭಾಷೆಯನ್ನು ಸುಂದರವಾಗಿ ಮಾತನಾಡುತ್ತಾನೆ ಮತ್ತು ಬರೆಯುತ್ತಾನೆ. ಅವನ ಸಮರ್ಪಣೆ ಮತ್ತು ಕಠಿಣ ಪರಿಶ್ರಮದಿಂದಾಗಿ ಅವನು 12 ನೇ ತರಗತಿ ಪರೀಕ್ಷೆಗೆ ಕುಳಿತ ಇತರ 13,738 ವಿದ್ಯಾರ್ಥಿಗಳನ್ನು ಹಿಂದಿಕ್ಕಿದನು’’ ಎಂದೂ ಮಗನ ಬಗ್ಗೆ ತಂದೆ ಹೆಮ್ಮೆಯಿಂದ ಹೇಳಿದರು.

ಇರ್ಫಾನ್ ಕನಸನ್ನು ನನಸು ಮಾಡುವುದನ್ನು ಕುಟುಂಬವು ತಡೆಯುವುದಿಲ್ಲ ಎಂದು ಸಲಾವುದ್ದೀನ್ ಹೇಳಿದ್ದಾರೆ. "ಜೂನಿಯರ್ ತರಗತಿಗಳಲ್ಲಿ 'ಸಂಸ್ಕೃತ' ಕಡ್ಡಾಯ ವಿಷಯವಾಗಿತ್ತು ಮತ್ತು ಅಲ್ಲಿಂದ ಅವನು ಭಾಷೆಯ ಬಗ್ಗೆ ಒಲವು ಬೆಳೆಸಿಕೊಂಡನು. ಅವನು ಈಗ ಶಾಸ್ತ್ರಿ (ಬಿಎಗೆ ಸಮಾನ) ಮತ್ತು ಆಚಾರ್ಯ (ಎಂಎಗೆ ಸಮಾನ) ಮಾಡಲು ಯೋಜಿಸಿದ್ದಾನೆ ಮತ್ತು ನಂತರ ಸಂಸ್ಕೃತ ಶಿಕ್ಷಕರಾಗಿ ಉದ್ಯೋಗ ಹುಡುಕುತ್ತಾನೆ’’ ಎಂದೂ ಅವರು ಹೇಳಿದರು. 

ಇದನ್ನೂ ಓದಿ: ಗಂಡನ ಮನೆಯವ್ರಿಂದ ಬಹಿಷ್ಕಾರಕ್ಕೊಳಗಾಗಿದ್ದ ಮುಸ್ಲಿಂ ಮಹಿಳೆಯಿಂದ ಈಗ ಲಕ್ಷ ಲಕ್ಷ ದುಡಿಮೆ..!

Follow Us:
Download App:
  • android
  • ios