Belagavi: ಆರ್‌ಎಸ್ಎಸ್ ಮುಖ್ಯಸ್ಥ ಹೆಡ್ಗೆವಾರ್ ಬಗ್ಗೆ ಪಠ್ಯಪುಸ್ತಕದಲ್ಲಿ ಸೇರಿಸೋರೆ': ಎಂಎಲ್‌ಸಿ ರವಿಕುಮಾರ್

• ಪಠ್ಯಪುಸ್ತಕದಿಂದ ಟಿಪ್ಪು ಸುಲ್ತಾನ್ ಬಗ್ಗೆ ಖಡಾಖಂಡಿತವಾಗಿ ತೆಗೆದು ಹಾಕ್ತೇವೆ
• ಮಕ್ಕಳಲ್ಲಿ ದೇಶ ಭಕ್ತಿ ತುಂಬುತ್ತಿದ್ದೇವೆ ಎಂದ ಎಂಎಲ್‌ಸಿ ರವಿಕುಮಾರ್
• ಪಠ್ಯ ಪುಸ್ತಕ ಬಿಜೆಪಿ 'ಪಕ್ಷಪುಸ್ತಕ'ಗಳನ್ನಾಗಿ ಮಾಡುವ ಹುನ್ನಾರ ಎಂಬ ಹೆಚ್‌ಡಿಕೆ ಹೇಳಿಕೆಗೆ ತಿರುಗೇಟು

Mlc Ravikumar reacts rss founder keshav baliram hedgewar lesson in kalburgi gvd

ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ

ಬೆಳಗಾವಿ (ಮೇ.19): ಸದ್ಯ ರಾಜ್ಯಾದ್ಯಂತ ಪಠ್ಯಪುಸ್ತಕ ಪರಿಷ್ಕರಣೆ ವಿವಾದ ಸದ್ದು ಮಾಡುತ್ತಿದೆ‌. 'ಪಠ್ಯ ಪುಸ್ತಕ'ಗಳನ್ನು ಬಿಜೆಪಿ 'ಪಕ್ಷ ಪುಸ್ತಕ'ಗಳನ್ನಾಗಿ ಮಾಡುವ ಹುನ್ನಾರ ನಡೆಯುತ್ತಿದೆ ಎಂಬ ಹೆಚ್‌‌.ಡಿ.ಕುಮಾರಸ್ವಾಮಿ ಹೇಳಿಕೆಗೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಎಂಎಲ್‌ಸಿ ರವಿಕುಮಾರ್ ತಿರುಗೇಟು ನೀಡಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, 'ಸುಭಾಷ್ ಚಂದ್ರ ಬೋಸ್, ಆರ್‌ಎಸ್ಎಸ್ ಸಂಸ್ಥಾಪಕ ಡಾ. ಕೇಶವ ಬಲರಾಮ ಹೆಡ್ಗೆವಾರ, ಛತ್ರಪತಿ ಶಿವಾಜಿ ಮಹಾರಾಜರು, ರಾಣಾಪ್ರತಾಪ್ ಸಿಂಗ್, ಭಗತ್ ಸಿಂಗ್ ಬಗ್ಗೆ ಪಠ್ಯ ಪುಸ್ತಕದಲ್ಲಿ ನಾವು ಸೇರಿಸೋರೆ. 

ಭಯೋತ್ಪಾದಕರ ತಯಾರಿಕೆ ತೀರ್ಮಾನ ಮಾಡುವಂತ ಟಿಪ್ಪು ಸುಲ್ತಾನ್ ಬಗ್ಗೆ ಪಠ್ಯ ಪುಸ್ತಕದಿಂದ ತೆಗೆದು ಹಾಕುತ್ತೇವೆ. ಪಠ್ಯಪುಸ್ತಕದಿಂದ ಟಿಪ್ಪು ಸುಲ್ತಾನ್ ಬಗ್ಗೆ ಖಡಾಖಂಡಿತವಾಗಿ ತಗೆದು ಹಾಕುತ್ತೇವೆ. ಇದು ಕೇಸರಿಮಯವಲ್ಲ ಸಂಸ್ಕೃತಿಮಯ, ತ್ಯಾಗಮಯ ಮಾಡುತ್ತಿದ್ದೇವೆ. ನೈತಿಕತೆ ತುಂಬುತ್ತಿದ್ದೇವೆ, ಮಕ್ಕಳಲ್ಲಿ ದೇಶ ಭಕ್ತಿ ತುಂಬುತ್ತಿದ್ದೇವೆ. ಕಾಂಗ್ರೆಸ್‌ನವರು ಸ್ವಾಮಿ ವಿವೇಕಾನಂದ, ಛತ್ರಪತಿ ಶಿವಾಜಿ ಮಹಾರಾಜ, ಡಾ.ಕೇಶವರಾಂ ಹೆಡ್ಗೆವಾರ, ಭಗತ್‌ಸಿಂಗ್ ಅವರ ಬಗ್ಗೆ ಪಠ್ಯದಿಂದ ತಗೆದು ಹಾಕೋದು ಏಕೆ? ಅಲ್ಪಸಂಖ್ಯಾತರಿಗೆ ನೋವಾಗುತ್ತೆ ಅಂತಾನಾ? ಅಲ್ಪಸಂಖ್ಯಾತರು ಈ ದೇಶದಲ್ಲಿ ಇದ್ದಾರೆ ತಾನೇ?‌ಈ ದೇಶದ ಜನರಲ್ಲಿ ದೇಶಭಕ್ತಿ ತುಂಬುವುದು ನಮ್ಮ ಕರ್ತವ್ಯ. ಈ ದೇಶ ಉಳಿಯಬೇಕಂದರೆ ವಿದ್ಯಾರ್ಥಿಗಳು, ಯುವಕರು ದೇಶಭಕ್ತರಾದ್ರೆ ಮಾತ್ರ ಸಾಧ್ಯ. 

Belagavi: ವೈದ್ಯಕೀಯ ವಿದ್ಯಾರ್ಥಿಗಳ ಗಲಾಟೆ: 15 ವಿದ್ಯಾರ್ಥಿಗಳು ಸಸ್ಪೆಂಡ್!

ಆ ಹಿನ್ನೆಲೆಯಲ್ಲಿ ಪಠ್ಯದಲ್ಲಿ ಸೇರಿಸುತ್ತಿದ್ದೇವೆ ತಪ್ಪೇನು ಹಳದಿ ಕನ್ನಡಕ ಹಾಕಿದವರಿಗೆ ವಕ್ರವಕ್ರವಾಗಿಯೇ ಕಾಣಿಸುತ್ತೆ' ಎಂದು ಪರೋಕ್ಷವಾಗಿ ಕಾಂಗ್ರೆಸ್ ಜೆಡಿಎಸ್ ಪಕ್ಷಕ್ಕೆ ರವಿಕುಮಾರ್ ಟಾಂಗ್ ಕೊಟ್ಟಿದ್ದಾರೆ‌. ಇನ್ನು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಹತ್ತು ಕೆಜಿ ಅಕ್ಕಿ ಉಚಿತ ಸಿದ್ಧರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, 'ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿ ನಾವು ಹತ್ತು ಕೆಜಿ ಕೊಡುತ್ತಾ ಇದ್ದೇವೆ. ಆದ್ರೆ ಸಿದ್ದರಾಮಯ್ಯ ಎಲ್ಲಿಂದ ಕೊಡ್ತಾರೆ ಸರ್ಕಾರ ಬಂದ್ರೆ ತಾನೇ ಕೊಡೋದು? ಬರಲ್ಲ ಅಂತಾ ಗೊತ್ತಾಗಿದೆ. ಹೀಗಾಗಿ 10 ಕೆಜಿ 20 ಕೆಜಿ ಅಕ್ಕಿ ಕೊಡ್ತೀನಿ ಅಂತಾ ಹೇಳ್ತಿದ್ದಾರೆ. ಬರದೇ ಇರೋ ಸರ್ಕಾರ ಎಷ್ಟು ಬೇಕಾದಷ್ಟು ಭರವಸೆ ಕೊಡಬಹುದಲ್ಲ? ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಪ್ರಶ್ನಿಸಿದ್ದಾರೆ.

ಬಿಜೆಪಿ ಕೋಟೆ ಬೇಧಿಸಲು ರಾಜ್ಯಕ್ಕೆ ಪದೇಪದೇ ಎಂಟ್ರಿ ಕೊಡ್ತಿದ್ದಾರಾ ಶರದ್ ಪವಾರ್?

ಆರೋಪ ಏನು?: ಇಷ್ಟು ಮಾತ್ರವಲ್ಲದೆ   ಪ್ರಸಿದ್ಧ ಬರಹಗಾರ ಮತ್ತು ಪತ್ರಕರ್ತ ಪಿ.ಲಂಕೇಶ್ ಅವರ ಜನಾಂಗೀಯ ದ್ವೇಷವನ್ನು ಖಂಡಿಸುವ " ಮೃಗ ಮತ್ತು ಸುಂದರಿ",  ಪ್ರಸಿದ್ಧ ಲೇಖಕಿ ಸಾರಾ ಅಬೂಬಕರ್ ಅವರ "ಯುದ್ಧ", ಲೇಖಕ ಎ.ಎನ್.ಮೂರ್ತಿರಾಯರ " ವ್ಯಾಘ್ರಗೀತೆ" ಎಡಪಂಥೀಯ ಚಿಂತಕ ಜಿ. ರಾಮಕೃಷ್ಣ ಅವರ "ಭಗತ್ ಸಿಂಗ್"  ಹೀಗೆ ಹಲವು ಪಾಠಗಳನ್ನು ಪಠ್ಯಪುಸ್ತಕ ಪರಿಶೀಲನಾ ಸಮಿತಿ  ಕೈ ಬಿಟ್ಟಿದೆ. ಬದಲಿಗೆ, ಬರಹಗಾರ ಶಿವಾನಂದ ಕಳವೆ ಅವರ “ಸ್ವದೇಶಿ ಸೂತ್ರದ ಸರಳ ಹಬ್ಬ” ಮತ್ತು ಎಂ. ಗೋವಿಂದ ಪೈ ಅವರ “ನಾನು ಪ್ರಾಸ ಬಿಟ್ಟ ಕಥೆ” ಜೊತೆಗೆ ವೇದ ವಿದ್ವಾಂಸರಾದ ದಿವಂಗತ ಬನ್ನಂಜೆ ಗೋವಿಂದಾಚಾರ್ಯರ "ಸುಕನಾಶನ ಉಪದೇಶ" ಮತ್ತು ಶತಾವಧಾನಿ ಆರ್. ಗಣೇಶ್ ಅವರ "ಶ್ರೇಷ್ಠ ಭಾರತೀಯ ಚಿಂತನೆಗಳು" ಸೇರಿಸಲಾಗಿದೆ.

Latest Videos
Follow Us:
Download App:
  • android
  • ios