ಹಿಜಾಬ್‌ ಹಾಕಿಕೊಂಡು ಶಾಲೆಗೆ ಬರುವಂತಿಲ್ಲ: ಸಚಿವ ನಾಗೇಶ

*  ಸಿದ್ದರಾಮಯ್ಯಗೆ 74 ವರ್ಷ. ಇಂಥ ಅನುಭವಿಗಳು, ತಿಳಿದವರ ಬಗ್ಗೆ ನಾನು ಏನೂ ಮಾತನಾಡುವುದು ಸರಿಯಲ್ಲ
*  ಈ ದೇಶದ ಜನರ ಡಿಎನ್‌ಎ ಪರೀಕ್ಷೆ ಆಗಿದೆ
*  ಭಾರತೀಯರ ಇತಿಹಾಸ, ಭಾರತೀಯರ ಪರ ಇರುವುದು ಬಿಜೆಪಿ ಕೆಲಸ 

Minister BC Nagesh Talks Over Hijab Row in Karnataka grg

ಕೊಪ್ಪಳ(ಮೇ.29): ಶಾಲೆಗೆ ಸಮವಸ್ತ್ರದಲ್ಲೇ ಬರಬೇಕು. ಹಿಜಾಬ್‌ ಸೇರಿದಂತೆ ಯಾವುದೇ ಧಾರ್ಮಿಕ ವಸ್ತ್ರಗಳನ್ನು ಧರಿಸುವಂತಿಲ್ಲ ಎಂದು ರಾಜ್ಯ ಉಚ್ಛ ನ್ಯಾಯಾಲಯ ಹೇಳಿರುವ ಹಿನ್ನೆಲೆಯಲ್ಲಿ ಹಿಜಾಬ್‌ ವಿಚಾರ ಮುಗಿದ ಅಧ್ಯಾಯ ಎಂದು ರಾಜ್ಯ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಹೇಳಿದ್ದಾರೆ.

ಶನಿವಾರ ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನ್ಯಾಯಲಯ ಆದೇಶ ನೀಡಿದ್ದರಿಂದ ಕೆಲ ಶಾಲೆಗಳಲ್ಲಿ ಮಕ್ಕಳು ಹಿಜಾಬ್‌ ಧರಿಸಿ ಬರುತ್ತಿಲ್ಲ. ಮಂಗಳೂರಿನಲ್ಲಿ ಮತ್ತೆ ಹಿಜಾಬ್‌ ವಿವಾದ ಉಂಟಾಗಿದೆ. ಯಾವುದೇ ಕಾರಣಕ್ಕೂ ಹಿಜಾಬ್‌ ಧರಿಸಿ ಶಾಲೆಗೆ ಬರುವಂತಿಲ್ಲ ಎಂದು ಸ್ಪಷ್ಟಪಡಿಸಿದರು.

ರೋಹಿತ್ ಚಕ್ರತೀರ್ಥ ಶೈಕ್ಷಣಿಕ ಅರ್ಹತೆ ಬಹಿರಂಗ, ಸಚಿವ ನಾಗೇಶ್ ಸುಳ್ಳು ಹೇಳಿದ್ರಾ?

ಈ ನೆಲದ ಉಚ್ಚ ನ್ಯಾಯಾಲಯ ತೀರ್ಪು ನೀಡಿದೆ. ದೇಶದ ಸರ್ವೋಚ್ಛ ನ್ಯಾಯಾಲಯ ಯಾವುದೇ ಮಧ್ಯಂತರ ಆದೇಶ ನೀಡಿಲ್ಲ. ಆದ್ದರಿಂದ ಶ್ರೇಷ್ಠ ನ್ಯಾಯಾಲಯದ ಆದೇಶವನ್ನು ಎಲ್ಲರೂ ಪಾಲನೆ ಮಾಡಬೇಕು. ಪಾಲನೆ ಮಾಡದವರಿಗೆ ಶಾಲೆಗೆ ಪ್ರವೇಶ ನೀಡುವದಿಲ್ಲ. ಹಠ ಮಾಡಲು ಅವರಿಗೆ ಹಕ್ಕಿದೆ, ಒಳಗೆ ಬಿಡದೇ ಇರಲು ಈ ದೇಶದ ಕಾನೂನು ಇದೆ. ಕೆಲವರು ಈ ದೇಶವನ್ನು ಮತ್ತೆ ಅಶಾಂತಿಗೆ ಕೊಂಡೊಯ್ಯುವ ಪ್ರಯತ್ನ ನಡೆಸುತ್ತಿದ್ದಾರೆ. ಇದು ಶೋಭೆ ತರುವುದಿಲ್ಲ. ಪ್ರತಿಯೊಂದರಲ್ಲೂ ವೋಟ್‌ ಬ್ಯಾಂಕ್‌ ರಾಜಕಾರಣ ಮಾಡುವ ಪ್ರಯತ್ನ ಇಂದಿಗೂ ನಡೆದಿದೆ. ಈ ಆಟ ನಡೆಯುವದಿಲ್ಲ ಎಂದು ಹೇಳಿದರು.

ರಾಜ್ಯ ಸರ್ಕಾರ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಿದೆ. ಶಿಕ್ಷಣ ಕ್ಷೇತ್ರ ಸುಧಾರಿಸಲು ರಾಜ್ಯ ಸರ್ಕಾರ ಶಕ್ತಿ ಮೀರಿ ಕೆಲಸ ಮಾಡುತ್ತಿದೆ. ವಿರೋಧ ಪಕ್ಷಗಳು ಶಿಕ್ಷಣ ಕ್ಷೇತ್ರದಲ್ಲಿ ಅಶಾಂತಿ ಸೃಷ್ಟಿಮಾಡುವುದಕ್ಕೆ ಮುಂದಾಗಿವೆ. ಇದನ್ನು ನಾವು ಬರೀ ಹಿಜಾಬ್‌ ಅಂತಾ ನೋಡುವುದಿಲ್ಲ. ಇದನ್ನ ಅಶಾಂತಿ ಸೃಷ್ಟಿಮಾಡುವ ಒಂದಿಷ್ಟುಗುಂಪು ಇದೆ. ಆ ಗುಂಪಿಗೆ ಬೆಂಬಲ ನೀಡುವ ಒಂದಷ್ಟುರಾಜಕೀಯ ಪಾರ್ಟಿಗಳು ಇವೆ. ಹೈಕೋರ್ಚ್‌ ಆದೇಶದ ನಂತರವೂ ಕೆಲ ಪಕ್ಷಗಳು ಹಿಜಾಬ್‌ ಪರ ನಿಂತಿವೆ. ವಿರೋಧ ಪಕ್ಷಗಳು ಅಸೆಂಬ್ಲಿಯಲ್ಲಿ ನಡೆದುಕೊಂಡ ರೀತಿ ಎಲ್ಲರಿಗೂ ಗೊತ್ತಿದೆ ಎಂದರು.

ಸಿದ್ದರಾಮಯ್ಯ ಆಟಿಟ್ಯೂಡ್‌ ಇಲ್ಲಿ ನಡೆಯಲ್ಲ: ಸಚಿವ ನಾಗೇಶ್‌

ಒಂದು ಕಡೆ ವೋಟ್‌ಬ್ಯಾಂಕ್‌ ರಾಜಕಾರಣ ಮತ್ತೊಂದು ಕಡೆ ಮುಸ್ಲಿಂಮರನ್ನು ಸಮಾಜದಿಂದ ಪ್ರತ್ಯೇಕ ಮಾಡುವ ಪ್ರಯತ್ನ ನಡೆದಿದೆ. ಆದರೆ ಬಿಜೆಪಿ ರಾಜ್ಯದ ಅಭಿವೃದ್ಧಿಗಾಗಿಯೇ ಹುಟ್ಟಿದೆ. ಯಾವುದೇ ಒಬ್ಬರನ್ನು ಪ್ರಧಾನಿ ಮಾಡಲು, ಸಿಎಂ ಮಾಡಲು ಶಾಸಕ ಮಾಡಲು ಬಿಜೆಪಿ ಹುಟ್ಟಿಲ್ಲ. ದೇಶದ ಸಮಗ್ರ ಅಭಿವೃದ್ಧಿಯೇ ಬಿಜೆಪಿಯ ಮೂಲ ಉದ್ದೇಶವಾಗಿದೆ. ಕಾಂಗ್ರೆಸ್‌ ಬ್ರಿಟಿಷರ ಪಠ್ಯವನ್ನೇ ಮಕ್ಕಳಿಗೆ ಕಲಿಸುತ್ತಾ ಹೋಗಿದೆ. ಭಾರತೀಯರ ಇತಿಹಾಸ, ಭಾರತೀಯರ ಪರ ಇರುವುದು ಬಿಜೆಪಿ ಕೆಲಸ. ಈ ದೇಶದ ಕಟ್ಟಕಡೆಯ ಮನುಷ್ಯನ ಪರ ಇರುವುದೇ ಬಿಜೆಪಿ ಎಂದರು.

ಆರ್‌ಎಸ್‌ಎಸ್‌ನವರು ಭಾರತೀಯರಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು. ಸಿದ್ದರಾಮಯ್ಯ ಅವರಿಗೆ 74 ವರ್ಷ. ಇಂಥ ಅನುಭವಿಗಳು, ತಿಳಿದವರ ಬಗ್ಗೆ ನಾನು ಏನೂ ಮಾತನಾಡುವುದು ಸರಿಯಲ್ಲ. ಆದರೂ ಅವರ ಮಾತಿಗೆ ನಾನು ಏನು ಹೇಳಬೇಕು ಎನ್ನುವದು ಗೊತ್ತಾಗುತ್ತಿಲ್ಲ. ಈ ದೇಶದ ಜನರ ಡಿಎನ್‌ಎ ಪರೀಕ್ಷೆ ಆಗಿದೆ. ಸಮಾಜದ ಕಟ್ಟಕಡೆಯವ ಮನುಷ್ಯ ಮತ್ತು ಮೇಲ್ವರ್ಗದವರ ಡಿಎನ್‌ಎ ಪರೀಕ್ಷೆ ಆಗಿದೆ. ಕಾಮನ್‌ ಡಿಎನ್‌ಎ ಇದೆ ಎಂದು ಈಗಾಗಲೇ ವರದಿ ಹೇಳಿವೆ. ವಿಜ್ಞಾನ ಗೊತ್ತಿದ್ದವರಿಗೆ ಇಷ್ಟುಮಾತ್ರ ಹೇಳಲು ಸಾಧ್ಯ ಎಂದು ಸಚಿವ ನಾಗೇಶ್‌ ಹೇಳಿದರು.
 

Latest Videos
Follow Us:
Download App:
  • android
  • ios