9 ವರ್ಷದ ಒಳಗೆ ಎಂಬಿಬಿಎಸ್‌ ಪರೀಕ್ಷೆಉತ್ತೀರ್ಣರಾಗಬೇಕು: ವೈದ್ಯಕೀಯ ಆಯೋಗ

ಎಂಬಿಬಿಎಸ್‌ ಪದವಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್‌ಎಂಸಿ) ಹಲವು ಹೊಸ ನಿಯಮಗಳನ್ನು ಜಾರಿ ಮಾಡಿದೆ. ಹೊಸ ನಿಯಮಗಳ ಅನ್ವಯ, ವಿದ್ಯಾರ್ಥಿಗಳು ತಾವು ಕೋರ್ಸ್‌ಗೆ ಪ್ರವೇಶ ಪಡೆದ ದಿನದಿಂದ 9 ವರ್ಷಗಳ ಒಳಗೆ ಕೋರ್ಸ್‌ ಅನ್ನು ಮುಗಿಸಬೇಕು.

Medical Commission New Rules for Medical Students Must pass MBBS exam within 9 years akb

ನವದೆಹಲಿ: ಎಂಬಿಬಿಎಸ್‌ ಪದವಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್‌ಎಂಸಿ) ಹಲವು ಹೊಸ ನಿಯಮಗಳನ್ನು ಜಾರಿ ಮಾಡಿದೆ. ಹೊಸ ನಿಯಮಗಳ ಅನ್ವಯ, ವಿದ್ಯಾರ್ಥಿಗಳು ತಾವು ಕೋರ್ಸ್‌ಗೆ ಪ್ರವೇಶ ಪಡೆದ ದಿನದಿಂದ 9 ವರ್ಷಗಳ ಒಳಗೆ ಕೋರ್ಸ್‌ ಅನ್ನು ಮುಗಿಸಬೇಕು. ಜೊತೆಗೆ ಮೊದಲ ವರ್ಷದ ಫೈನಲ್‌ ಪರೀಕ್ಷೆಯಲ್ಲಿ ಉತ್ತೀರ್ಣವಾಗಲು ಗರಿಷ್ಠ 4 ಅವಕಾಶ ನೀಡಲಾಗುವುದು. ಅಲ್ಲದೇ ನೀಟ್‌-ಯುಜಿ ಅರ್ಹತೆಯ ಆಧಾರದ ಮೇಲೆ ದೇಶದ ಎಲ್ಲಾ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಸಾಮಾನ್ಯ ಕೌನ್ಸಲಿಂಗ್‌ ಇರುತ್ತದೆ. ಪದವಿ ಬಳಿಕ ಇಂಟರ್ನ್‌ಶಿಪ್‌ ಪೂರ್ಣಗೊಳಿಸುವವರೆಗೆ ವಿದ್ಯಾರ್ಥಿಯು ಪದವಿ ಹೊಂದಿದ್ದಾರೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಆಯೋಗ ಮಾಹಿತಿ ನೀಡಿದೆ.

ವೈದ್ಯರ ಸಂಖ್ಯೆ ಹೆಚ್ಚಿಸಲು ಡಿಪ್ಲೊಮಾ ಕೋರ್ಸ್‌: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ರಾಜ್ಯದಲ್ಲಿ ಆಸ್ಪತ್ರೆಗಳ ಸಂಖ್ಯೆ ಹೆಚ್ಚಳವಾಗಿದ್ದು, ವೈದ್ಯರ ಕೊರತೆ ಎದುರಾಗಿದೆ. ಇದನ್ನು ನೀಗಿಸಲು ವೈದ್ಯಕೀಯ ಡಿಪ್ಲೊಮೋ ಕೋರ್ಸ್‌ಗಳನ್ನು ಆರಂಭಿಸಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಲಹೆ ನೀಡಿದ್ದಾರೆ. ಅಲ್ಲದೇ ನರ್ಸ್‌ಗಳಿಗೆ ‘ಅರೆ ವೈದ್ಯರು’ ಎಂದು ಪದೋನ್ನತಿ ಕೊಡಲು ಸಹ ಸೂಚಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಮತಾ, ಡಿಪ್ಲೊಮೋ ಪದವಿ ಪಡೆದ ಬಳಿಕ ಈ ವೈದ್ಯರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನಿಯೋಜಿಸಬಹುದು. ಡಿಪ್ಲೋಮಾ ಕೋರ್ಸ್‌ನ ಅವಧಿಯಲ್ಲಿ ಹಿರಿಯ ವೈದ್ಯರು ಇವರಿಗೆ ತರಬೇತಿ ನೀಡಬಹುದು. ಇದಕ್ಕಾಗಿ ಆಸ್ಪತ್ರೆಗಳಲ್ಲಿ ನಿರ್ಮಾಣ ಮಾಡಿರುವ ಸಭಾಂಗಣಗಳು ಅಥವಾ ಇತರ ಸರ್ಕಾರಿ ಸಭಾಂಗಣಗಳನ್ನು ಬಳಕೆ ಮಾಡಿಕೊಳ್ಳಬಹುದು. ಈಗಿರುವ ಶಿಕ್ಷಣ ನೀತಿಯ ಪ್ರಕಾರ ವೈದ್ಯರನ್ನು ತಯಾರು ಮಾಡಲು 5 ವರ್ಷಗಳ ಕಾಲಾವಕಾಶ ಬೇಕು. ಈ ಅವಧಿಯಲ್ಲಿ ಅವರ ಸೇವೆಯನ್ನು ಪಡೆದುಕೊಳ್ಳಲು ಕಿರಿಯ ವೈದ್ಯರಾಗಿ ಸೇವೆ ಸಲ್ಲಿಸಲು ಅವರಿಗೆ ಅವಕಾಶ ನೀಡಬೇಕು ಎಂದು ಅವರು ಹೇಳಿದರು.

ಚಿತ್ರದುರ್ಗ ಮೆಡಿಕಲ್ ಕಾಲೇಜು ಸ್ಥಾಪನೆಗೆ ಪ್ಲಾನ್ ರೂಪಿಸಿ: ಅಧಿಕಾರಿಗಳಿಗೆ ಕೇಂದ್ರ ಸಚಿವ ನಾರಾಯಣಸ್ವಾಮಿ ಖಡಕ್ ವಾರ್ನ್

ಅಲ್ಲದೇ ನರ್ಸ್‌ಗಳಿಗೆ ಅರೆಕಾಲಿಕ ವೈದ್ಯರು ಎಂದು ಬಡ್ತಿಯನ್ನು ನೀಡಬೇಕು. 15 ದಿನಗಳ ತರಬೇತಿಯ ಬಳಿಕ ನರ್ಸ್‌ಗಳನ್ನು ನೇಮಕ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಆದರೆ ಮಮತಾ ಅವರ ಈ ಸಲಹೆಗಳಿಗೆ ವಿರೋಧ ವ್ಯಕ್ತಪಡಿಸಿರುವ ಸರ್ಕಾರಿ ನೌಕರರು, ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

Latest Videos
Follow Us:
Download App:
  • android
  • ios