ಮೌಲ್ಯಮಾಪಕರ ಎಡವಟ್ಟಿನಿಂದ ಸತತ ಫೇಲ್: ಬೇಸತ್ತ ಎಂಬಿಬಿಎಸ್‌ ವಿದ್ಯಾರ್ಥಿಗಳು

ವಿದ್ಯಾರ್ಥಿಯೊಬ್ಬರಿಗೆ ಪತ್ರಿಕೆಯೊಂದರಲ್ಲಿ 2ನೇ ಮೌಲ್ಯಮಾಪನದಲ್ಲಿ 5 ಅಂಕ ನೀಡಿದರೆ, 3ನೇ ಮೌಲ್ಯ ಮಾಪನದಲ್ಲಿ 62 ಅಂಕ ನೀಡಲಾಗಿದೆ. ಮತ್ತೊಬ್ಬರಿಗೆ 2ನೇ ಮೌಲ್ಯಮಾಪನದಲ್ಲಿ 4 ಅಂಕ ಮತ್ತು 3ನೇ ಮೌಲ್ಯಮಾಪನದಲ್ಲಿ 56 ಅಂಕ ನೀಡಲಾಗಿದೆ. ಹೀಗೆ, ಹಲವು ವಿದ್ಯಾರ್ಥಿಗಳ ಮೌಲ್ಯ ಮಾಪನದಲ್ಲಿ ದೊಡ್ಡ ವ್ಯತ್ಯಾಸ ಕಂಡು ಬಂದಿದೆ. 
 

MBBS Students Request to Evaluate properly Answar Papers in Rajiv Gandhi University of Health Sciences grg

ಬೆಂಗಳೂರು(ಡಿ.17): ಮೌಲ್ಯಮಾಪನ ದೋಷದಿಂದ ಪರೀಕ್ಷೆಯಲ್ಲಿ ಪದೇ ಪದೇ ಫೇಲ್ ಆಗುತ್ತಿದ್ದೇವೆ. ಹೀಗಾಗಿ ನಮ್ಮ ಪತ್ರಿಕೆಗಳನ್ನು ಸರಿಯಾಗಿ ಮೌಲ್ಯಮಾಪನ ಮಾಡಿಸಿ ನ್ಯಾಯ ಕೊಡಿಸಿ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಿಗೆ ಎಂಬಿಬಿಎಸ್ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.

ಕಳೆದ 2018ರ ಪೂರ್ವದಲ್ಲಿ ಬೇರೆ ಬೇರೆ ವರ್ಷಗಳಲ್ಲಿ ಪ್ರವೇಶ ಪಡೆದಿರುವ ಹಳೇ ಪಠ್ಯಕ್ರಮದ ಸುಮಾರು ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸಮಸ್ಯೆ ಎದುರಿಸುತ್ತಿದ್ದಾರೆ ಎನ್ನಲಾಗಿದೆ. ಉತ್ತರ ಪತ್ರಿಕೆಗಳು 5 ಬಾರಿ ಮೌಲ್ಯ ಮಾಪನಗೊಂಡಿವೆ. ಒಬ್ಬೊಬ್ಬ ಮೌಲ್ಯಮಾಪಕರು ಭಾರಿ ವ್ಯತ್ಯಾಸ ಕಂಡು ಬರುವಂತೆ ಅಂಕಗಳನ್ನು ನೀಡಿದ್ದಾರೆ. 

ಎಂಬಿಬಿಎಸ್ ವ್ಯಾಸಂಗ ಮಾಡುವ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ₹50 ಲಕ್ಷ ನೀಡುವ ಸ್ಕೀಮ್‌ಗೆ ಕೊಕ್‌

ವಿದ್ಯಾರ್ಥಿಯೊಬ್ಬರಿಗೆ ಪತ್ರಿಕೆಯೊಂದರಲ್ಲಿ 2ನೇ ಮೌಲ್ಯಮಾಪನದಲ್ಲಿ 5 ಅಂಕ ನೀಡಿದರೆ, 3ನೇ ಮೌಲ್ಯ ಮಾಪನದಲ್ಲಿ 62 ಅಂಕ ನೀಡಲಾಗಿದೆ. ಮತ್ತೊಬ್ಬರಿಗೆ 2ನೇ ಮೌಲ್ಯಮಾಪನದಲ್ಲಿ 4 ಅಂಕ ಮತ್ತು 3ನೇ ಮೌಲ್ಯಮಾಪನದಲ್ಲಿ 56 ಅಂಕ ನೀಡಲಾಗಿದೆ. ಹೀಗೆ, ಹಲವು ವಿದ್ಯಾರ್ಥಿಗಳ ಮೌಲ್ಯ ಮಾಪನದಲ್ಲಿ ದೊಡ್ಡ ವ್ಯತ್ಯಾಸ ಕಂಡು ಬಂದಿದೆ. ಹಳೇ ಬ್ಯಾಚ್ ಆಗಿರುವ ಕಾರಣ 5 ಹಂತದ ಮೌಲ್ಯಮಾಪನ ಮಾಡಿಸಿ, ಸರಾಸರಿ ಶೇ.50 ಅಂಕ ಗಳಿಸಿದಲ್ಲಿ ಮಾತ್ರ ಉತ್ತೀರ್ಣಗೊಳಿಸಲಾಗುತ್ತದೆ. 

ಮೌಲ್ಯಮಾಪನದ ನಡುವೆ ದೊಡ್ಡ ಪ್ರಮಾಣದ ಅಂಕ ವ್ಯತ್ಯಾಸವಾಗಲು ಬರಲು ಹೇಗೆ ಸಾಧ್ಯ? ಮೌಲ್ಯ ಮಾಪಕರ ಅಸಡ್ಡೆಯಿಂದ ಈ ರೀತಿ ಆಗುತ್ತಿದೆ. ನಮ್ಮ ಭವಿಷ್ಯ ಅತಂತ್ರದಲ್ಲಿ ಸಿಲುಕಿದೆ. ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಕುಲಸಚಿವ ಡಾ.ರಿಯಾಜ್ ಭಾಷಾರಿಗೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದ್ದಾರೆ. 

ಖಾಸಗಿ ಕಾಲೇಜಿನಲ್ಲಿ ಎಂಬಿಬಿಎಸ್ ಓದುವ ಎಸ್ಸಿ ವಿದ್ಯಾರ್ಥಿಗಳಿಗೆ 50 ಲಕ್ಷ ರು. ನೆರವು

ಎನ್‌ಎಂಸಿಗೆ ಪತ್ರ ಬರೆಯುವೆ: ಕುಲಸಚಿವರ ಭರವಸೆ 

ಎಲ್ಲಾ ಮೌಲ್ಯಮಾಪಕರು ಒಂದೇ ರೀತಿ ಮೌಲ್ಯ ಮಾಪನ ಮಾಡುವುದಿಲ್ಲ. ಹೀಗಾಗಿ, ಅಂಕ ವ್ಯತ್ಯಾಸವಾಗಿದೆ. ಇವರ ಸಮಸ್ಯೆ ಪರಿಹರಿಸಲು ರಾಷ್ಟ್ರೀಯ ವೈದ್ಯಕೀಯ ಪರಿಷತ್ತಿಗೆ ಪತ್ರ ಬರೆದು ಮನವಿ ಮಾಡುತ್ತಿದ್ದೇವೆ. ಶೀಘ್ರದಲ್ಲೇ ವಿವಿಯ ನಿಯೋಗ ಎನ್‌ಎಂಸಿ ಅಧಿಕಾರಿಗಳನ್ನು ಭೇಟಿ ಮಾಡಲಿದೆ ಎಂದು ವಿವಿಯ ಮೌಲ್ಯಮಾಪನ ಕುಲಸಚಿವ ಡಾ.ರಿಯಾಜ್ ಭಾಷಾ ತಿಳಿಸಿದ್ದಾರೆ.

• 1000 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಮಸ್ಯೆ 
. 5 ಬಾರಿ ಮೌಲ್ಯಮಾಪಕರಿಂದ ಮೌಲ್ಯಮಾಪನದಲ್ಲಿ ಎಡವಟ್ಟು 
• ಮೌಲ್ಯಮಾಪನ ವೇಳೆ ಹಲವು ವಿದ್ಯಾರ್ಥಿಗಳಿಗೆ ಅಂಕ ನೀಡುವಲ್ಲಿ ದೊಡ್ಡ ಮಟ್ಟದಲ್ಲಿ ವ್ಯತ್ಯಾಸ 
# ಪತ್ರಿಕೆ ಸರಿಯಾಗಿ ಕರೆಕ್ಷನ್ ಮಾಡಿಸಿ ಎಂದು ವೈದ್ಯ ವಿದ್ಯಾರ್ಥಿಗಳ ಅಳಲು 
• ಸರಿಯಾದ ನ್ಯಾಯ ಒದಗಿಸಿ ಎಂದು ಕುಲಸಚಿವರಿಗೆ ಮನವಿ

Latest Videos
Follow Us:
Download App:
  • android
  • ios