ವೃತ್ತಿಪರ ಕೋರ್ಸ್ ಗಳಿಗೆ ನಡೆದಿದ್ದ ಸಿಇಟಿ ಪರೀಕ್ಷೆಯ ಫಲಿತಾಂಶ ನಾಳೆ ಪ್ರಕಟವಾಗಲಿದೆ. ನಾಳೆ ಬೆಳಿಗ್ಗೆ 9:30 ಕ್ಕೆ ಸಿಇಟಿ ಫಲಿತಾಂಶ ಪ್ರಕಟವಾಲಿದೆ.
ಬೆಂಗಳೂರು (ಜೂ.14): ವೃತ್ತಿಪರ ಕೋರ್ಸ್ (vocational courses) ಗಳಿಗೆ ನಡೆದಿದ್ದ ಸಿಇಟಿ ಪರೀಕ್ಷೆಯ (CET Result) ಫಲಿತಾಂಶ ನಾಳೆ ಪ್ರಕಟವಾಗಲಿದೆ. 2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆದಿದ್ದರು. ನಾಳೆ ಬೆಳಿಗ್ಗೆ 9:30 ಕ್ಕೆ ಸಿಇಟಿ ಫಲಿತಾಂಶ ಪ್ರಕಟವಾಲಿದೆ ಎಂದು ಕೆಇಎ ನಿರ್ದೇಶಕಿ ಎಸ್ ರಮ್ಯಾ ಮಾಹಿತಿ ನೀಡಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಫಲಿತಾಂಶ ಪ್ರಕಟ ಮಾಡಲಿದ್ದಾರೆ. ಬೆಳಿಗ್ಗೆ 11 ಗಂಟೆ ನಂತರ ಕೆಇಎ ವೆಬ್ ಸೈಟ್ ನಲ್ಲಿ ಫಲಿತಾಂಶ ನೋಡಬಹುದು. KEA ವೆಬ್ ಸೈಟ್ http://kea.kar.nic.in ಫಲಿತಾಂಶ ವನ್ನು ಚೆಕ್ ಮಾಡಬಹುದು.
ಇಂಜಿನಿಯರಿಂಗ್, ಕೃಷಿ ವಿಜ್ಞಾನ, ವೆಟರಿನರಿ, ಫಾರ್ಮಸಿ, ಬಿಎಸ್ಸಿ (ನರ್ಸಿಂಗ್) ಮುಂತಾದ ವಿವಿಧ ವೃತ್ತಿಪರ ಕೋರ್ಸುಗಳ ಸರ್ಕಾರಿ ಸೀಟುಗಳ ಪ್ರವೇಶಕ್ಕಾಗಿ ಪ್ರವೇಶಾತಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಗೆ KCET ಪರೀಕ್ಷೆಯು ಮೇ 21, 2023 ಮತ್ತು ಮೇ 22, 2023 ರಂದು ನಡೆದಿತ್ತು. ಈ ಬಾರಿಯ ಸಿಇಟಿ ಪರೀಕ್ಷೆಗೆ 2.39 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದರು.
ರಾಜ್ಯಾದ್ಯಂತ 592 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು, 121 ಕೇಂದ್ರಗಳು ಬೆಂಗಳೂರಿನಲ್ಲಿವೆ. ಸುಮಾರು 16,000 ಕನ್ನಡೇತರ ವಿದ್ಯಾರ್ಥಿಗಳು ಈ ಪರೀಕ್ಷೆಗೆ ದಾಖಲಾಗಿದ್ದಾರೆ ಮತ್ತು ಕಡ್ಡಾಯ ಕನ್ನಡ ಪರೀಕ್ಷೆಯನ್ನು ಬರೆಯುವುದರಿಂದ ವಿನಾಯಿತಿ ನೀಡಲಾಗಿದೆ ಎಂದು KEA ಹೇಳಿದೆ.
NEET UG Result 2023 Announced: ನೀಟ್ ಯುಜಿ ಫಲಿತಾಂಶ ಪ್ರಕಟ, ಟಾಪರ್ಸ್
ನೀಟ್: ಯುಪಿಯಲ್ಲಿ ಅತಿ ಹೆಚ್ಚು ಜನರು ಪಾಸ್
ನವದೆಹಲಿ: 2023ನೇ ಸಾಲಿನ ನೀಟ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಇಬ್ಬರು ಅಭ್ಯರ್ಥಿಗಳು ಮೊದಲ ರಾರಯಂಕ್ ಪಡೆದುಕೊಂಡಿದ್ದಾರೆ. 99.99 ಪರ್ಸೆಂಟೈಲ್ ಪಡೆದುಕೊಂಡಿರುವ ತಮಿಳುನಾಡಿನ ಪ್ರಭಜಂನ್.ಜೆ ಮತ್ತು ಆಂಧ್ರಪ್ರದೇಶದ ಬೋರಾ ವರುಣ್ ಚಕ್ರವರ್ತಿ ಮೊದಲ ರಾರಯಂಕ್ ಹಂಚಿಕೊಂಡಿದ್ದಾರೆ.
NEET UG 2023: ಕೋವಿಡ್-19 ಸಮಯ ವೈದ್ಯರಿಂದ ಸ್ಫೂರ್ತಿ, ದೇಶಕ್ಕೆ ಐದನೇ ಟಾಪರ್
ಈ ಬಾರಿ ಪರೀಕ್ಷೆ ಬರೆದಿದ್ದ 20.38 ಲಕ್ಷ ಅಭ್ಯರ್ಥಿಗಳಲ್ಲಿ 11.45 ಲಕ್ಷ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು 1.39 ಲಕ್ಷ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದು, ಮೊದಲ ಸ್ಥಾನ ಪಡೆದುಕೊಂಡಿದೆ. ಉಳಿದಂತೆ ಮಹಾರಾಷ್ಟ್ರ (1.31 ಲಕ್ಷ) ಮತ್ತು ರಾಜಸ್ಥಾನ (1 ಲಕ್ಷ) ನಂತರದ ಸ್ಥಾನಗಳಲ್ಲಿವೆ.
ದೇಶದಲ್ಲಿ 499 ನಗರಗಳಲ್ಲಿ ಮತ್ತು ದೇಶದ ಹೊರಗೆ 14 ನಗರಗಳಲ್ಲಿನ 4097 ಪರೀಕ್ಷಾ ಕೇಂದ್ರಗಳನ್ನು ಮೇ 7ರಂದು ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆಯ ವೇಳೆ 7 ಅಭ್ಯರ್ಥಿಗಳು ಅಕ್ರಮ ಎಸಗಿ ನಿಷೇಧಕ್ಕೊಳಪಟ್ಟಿದ್ದರು. ಈ ಬಾರಿ ಪರೀಕ್ಷೆಯನ್ನು 13 ಭಾರತೀಯ ಭಾಷೆಗಳಲ್ಲಿ ನಡೆಸಲಾಗಿತ್ತು.
