ಮೋದಿಯವರ 'ಪರೀಕ್ಷಾ ಪೇ ಚರ್ಚಾ'ಗೆ ಕರ್ನಾಟಕದ ಇಬ್ಬರು ವಿದ್ಯಾರ್ಥಿಗಳು ಆಯ್ಕೆ

ಪ್ರಧಾನಿ ನರೇಂದ್ರ ಮೋದಿಯವರ 'ಪರೀಕ್ಷಾ ಪೇ ಚರ್ಚಾ' ಕ್ಕೆ ಕರ್ನಾಟಕದ ಇಬ್ಬರು ವಿದ್ಯಾರ್ಥಿಗಳು ಸೆಲೆಕ್ಟ್ ಆಗಿದ್ದಾರೆ. 

Karnataka two Students Selected to PM Modi pariksha pe charcha rbj

ಬೆಂಗಳೂರು, (ಮಾ.19): ಪ್ರಧಾನಿ ನರೇಂದ್ರ ಮೋದಿ ನಡೆಸಿಕೊಡುವ 'ಪರೀಕ್ಷಾ ಪೇ ಚರ್ಚಾ' ಸಂವಾದ ಕಾರ್ಯಕ್ರಮಕ್ಕೆ ರಾಜ್ಯದ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಉಡುಪಿ ಜಿಲ್ಲೆಯ ಆರ್ಡಿಯ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಅನುಷಾ ಹಾಗೂ ಹೊಸಕೋಟೆ ತಾಲೂಕಿನ ತಾವರೆಕೆರೆ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಮನೋಜ್ ಅಯ್ಕೆಯಾಗಿದ್ದಾರೆ.

ಚುನಾವಣೆ ಬಿಸಿ ಏರಿಸಿದ ಶ್ರಬಂತಿ, ಡ್ರೆಸ್ ಮೂಲಕ ಸದ್ದು ಮಾಡಿದ ನಟಿ; ಮಾ.19ರ ಟಾಪ್ 10 ಸುದ್ದಿ! .

ಇದಕ್ಕೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಇಬ್ಬರೂ ವಿದ್ಯಾರ್ಥಿಗಳಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಬಗ್ಗೆ ಸ್ವತಃ ಸುರೇಶ್ ಕುಮಾರ್ ಅವರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.

ಕುಮಾರಿ ಅನುಷಾ ಒಂದು ಬಡ ಕುಟುಂಬಕ್ಕೆ ಸೇರಿದ್ದು ಅವರ ತಂದೆ ಗಾರೆ ಕೆಲಸ ಮಾಡುವವರು.  ಅದೇ ರೀತಿ ವಿದ್ಯಾರ್ಥಿ ಮನೋಜ್ ಸಹ ಬಡ ಕುಟುಂಬಕ್ಕೆ ಸೇರಿದ್ದು ಅವರ ತಂದೆ ಹೂವು ಮಾರುವ ವ್ಯಾಪಾರ ಮಾಡುತ್ತಾರೆ ಎಂದು ಸಚಿವರು ತಿಳಿಸಿದ್ದಾರೆ.

ಇಬ್ಬರು ವಿದ್ಯಾರ್ಥಿಗಳು ನಮ್ಮ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ ಎಂದು ಸುರೇಶ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.
 

ಪ್ರಧಾನಮಂತ್ರಿಯವರು ಪ್ರತಿವರ್ಷ ನಡೆಸುವ #ಪರೀಕ್ಷೆ_ಪೇ_ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಲು ನಮ್ಮ ರಾಜ್ಯದ ಹೊಸಕೋಟೆ ತಾಲೂಕಿನ ತಾವರೆಕೆರೆ...

Posted by Suresh Kumar S on Friday, March 19, 2021
Latest Videos
Follow Us:
Download App:
  • android
  • ios