Asianet Suvarna News Asianet Suvarna News

SSLC ಮಧ್ಯವಾರ್ಷಿಕ ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್: ಶಿಕ್ಷಣ ಇಲಾಖೆ ವಿರುದ್ಧ ಆಕ್ರೋಶ

SSLC ಅರ್ಧವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಆನ್‌ಲೈನ್‌ನಲ್ಲಿ ಸೋರಿಕೆಯಾಗಿರುವುದು ವರದಿಯಾಗಿದೆ. ಈ ಬೆಳವಣಿಗೆಯು ಶಿಕ್ಷಣ ಇಲಾಖೆಯ ನೂತನ ನಿಯಮಗಳನ್ನು ಪ್ರಶ್ನಿಸಲು ಕಾರಣವಾಗಿದ್ದು, ಕಠಿಣ ಪರಿಶ್ರಮ ಪಡುವ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.

Karnataka SSLC Mid Term Question Paper leaked gow
Author
First Published Sep 27, 2024, 12:31 PM IST | Last Updated Sep 27, 2024, 12:31 PM IST

ಬೆಂಗಳೂರು (ಸೆ.27): ಏನೋ ಮಾಡಲು ಹೋಗಿ ಇನ್ನೇನೋ ಮಾಡಿ ಯಡವಟ್ಟು ಮಾಡಿ ಕೊಳ್ತಾ ಶಿಕ್ಷಣ ಇಲಾಖೆ? ಹೀಗೊಂದು ಪ್ರಶ್ನೆ ಎದ್ದಿರುವುದಂತೂ ನಿಜ. ಯಾಕೆಂದರೆ SSLC ಮಧ್ಯ ವಾರ್ಷಿಕ ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ. ಸೆಪ್ಟೆಂಬರ್‌ 24ರಿಂದ ಅಕ್ಟೋಬರ್ 1ರವರೆಗೆ ಎಸ್‌ಎಸ್‌ಎಲ್‌ಸಿ ಅರ್ಧವಾರ್ಷಿಕ ಪರೀಕ್ಷೆ  ನಿಗದಿಯಾಗಿತ್ತು. ಇದೇ‌ ಮೊದಲ ಭಾರಿಗೆ ಬೋರ್ಡ್ ‌ನಿಂದ ಅರ್ಧ ವಾರ್ಷಿಕ ಪ್ರಶ್ನೆ ಪತ್ರಿಕೆ ಕೊಡಲಾಗಿತ್ತು.

 ಶಿಕ್ಷಣ ಇಲಾಖೆ ಅರ್ಧವಾರ್ಷಿಕ ಪರೀಕ್ಷೆಗೆ ಏಕರೂಪದ ಪ್ರಶ್ನೆ ಪತ್ರಿಕೆ ತಂದಿದೆ. ಆದರೆ SSLC ಮಧ್ಯವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಆನ್ಲೈನ್ ಅಲ್ಲಿ ಸೋರಿಕೆಯಾಗಿದೆ. ಶಿಕ್ಷಣ ಇಲಾಖೆ ಹೊಸ ನಿಯಮದಿಂದ ಕಷ್ಟ ಪಟ್ಟು ಓದುವ ವಿದ್ಯಾರ್ಥಿಗಳಿಗೆ ನ್ಯಾಯ ಸಿಗ್ತಿಲ್ಲ ಅಂತ ಆಕ್ರೋಶ ವ್ಯಕ್ತವಾಗಿದೆ.

ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಶ್ರಮಿಸಿ: ಸಚಿವ ಮಧು ಬಂಗಾರಪ್ಪ ಸೂಚನೆ

 ಈ ವರ್ಷದಿಂದ ಹೊಸ ರೂಲ್ಸ್  ಜಾರಿ ಮಾಡಲಾಗಿದೆ. ಕಳೆದ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆಗೆ ಶಾಲಾ ಹಂತದಲ್ಲೇ ಪ್ರಶ್ನೆ ಪತ್ರಿಕೆ ತಯಾರಿ ಬಳಿಕ ಅರ್ಧ ವಾರ್ಷಿಕ ಪರೀಕ್ಷೆ ನಡೆಸಲು ಸೂಚಿಸಲಾಗಿತ್ತು. ಆದರೆ ಈ ವರ್ಷ ಅದಕ್ಕೆ ಬ್ರೇಕ್ ಹಾಕಲಾಯಿತು. ರಾಜ್ಯ ಪಠ್ಯಕ್ರಮ ಅನುಸರಿಸುವ ಶಾಲೆಗಳಲ್ಲಿ ಏಕರೂಪ ಪ್ರಶ್ನೆ ಪತ್ರಿಕೆ ತರಲು ಆದೇಶ ಮಾಡಲಾಗಿತ್ತು.

ಸಂಸದೆ ಕಂಗನಾಳಿಂದ ಬಿಜೆಪಿಗೆ ಮುಜುಗರ, ನಟಿಯ ವಿವಾದಾತ್ಮಕ ಹೇಳಿಕೆಗಳು ಇಲ್ಲಿದೆ!

ಈ ಸಾಲಿನಿಂದ ಸರ್ಕಾರದ ನಿರ್ದೇಶನದಂತೆ ಅರ್ಧ ವಾರ್ಷಿಕ ಪರೀಕ್ಷೆಗೂ ರಾಜ್ಯಾಧ್ಯಂತ ಏಕರೂಪದ ಪ್ರಶ್ನೆಪತ್ರಿಕೆ ನೀಡಲು ಮಂಡಳಿ ತೀರ್ಮಾನ ಮಾಡಿತ್ತು. ಇದೇ ಈಗ ಪ್ರಶ್ನೆ ಪತ್ರಿಕೆ ಲೀಕ್ ಆಗಲು ಕಾರಣ ಆಗಿದೆ ಎನ್ನಲಾಗಿದೆ.

Latest Videos
Follow Us:
Download App:
  • android
  • ios