SSLC ಹಾಗೂ ದ್ವಿತೀಯ PUC ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ

2024-25ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್ಎಸ್ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟಗೊಂಡಿದೆ.

Karnataka SSLC and 2nd PU final exam schedule and time table announced sat

ಬೆಂಗಳೂರು (ಜ.10): ರಾಜ್ಯದಲ್ಲಿ 2024-25ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್ಎಸ್ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟಗೊಂಡಿದೆ. ಮಾರ್ಚ್ 1ರಿಂದ ಮಾರ್ಚ್ 20ರವರೆಗೆ ದ್ವಿತೀಯ ಪಿಯು ಪರೀಕ್ಷೆ -1 ಹಾಗೂ ಮಾರ್ಚ್ 21ರಿಂದ ಏಪ್ರಿಲ್ 04ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ -1 ನಡೆಯಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ. 

ದ್ವೀತೀಯ ಪಿಯು ಎಲ್ಲ ಅಂತಿಮ ಪರೀಕ್ಷೆಯು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ನಡೆಯಲಿವೆ. ಎಲ್ಲ ವಿಷಯಗಳಿಗೂ ವಿಷಯ ಸಂಕೇತಗಳನ್ನು ಕೊಡಲಾಗಿದ್ದು, ಆಯಾ ವಿಷಯಕ್ಕೆ ಸಂಬಂಧಿಸಿದಂತೆ ಗರಿಷ್ಠ 80 ಅಂಕಗಳಿಗೆ ಲಿಖಿತ ಪರೀಕ್ಷೆಗಳು ನಡೆಯಲಿವೆ.

ಪಿಯುಸಿ ಪರೀಕ್ಷೆ 1ರ ವೇಳಾಪಟ್ಟಿ
ಮಾ.1- ಕನ್ನಡ, ಅರೇಬಿಕ್
ಮಾ.3- ಗಣಿತ, ಶಿಕ್ಷಣ ಶಾಸ್ತ್ರ, ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
ಮಾ.4- ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಉರ್ದು, ಸಂಸ್ಕೃತ
ಮಾ.5- ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
ಮಾ.6- ಪರೀಕ್ಷೆ ಇಲ್ಲ
ಮಾ.7- ಇತಿಹಾಸ, ಭೌತಶಾಸ್ತ್ರ
ಮಾ.8- ಪರೀಕ್ಷೆ ಇಲ್ಲ
ಮಾ.9 - ಭಾನುವಾರ ರಜೆ
ಮಾ.10- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭ ಶಾಸ್ತ್ರ, ಗೃಹ ವಿಜ್ಞಾನ
ಮಾ.11- ಪರೀಕ್ಷೆ ಇಲ್ಲ
ಮಾ.12- ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲ ಗಣಿತ
ಮಾ.13- ಅರ್ಥಶಾಸ್ತ್ರ
ಮಾ.14 - ಪರೀಕ್ಷೆ ಇಲ್ಲ
ಮಾ.15- ಇಂಗ್ಲೀಷ್
ಮಾ.16 - ಭಾನುವಾರ ರಜೆ
ಮಾ.17 - ಭೂಗೋಳ ಶಾಸ್ತ್ರ
ಮಾ.18- ಜೀವಶಾಸ್ತ್ರ, ಸಮಾಜ ಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ
ಮಾ.19- ಹಿಂದೂಸ್ಥಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ಆಟೋಮೊಬೈಲ್, 
ಮಾ.20- ಹಿಂದಿ

ಇದನ್ನೂ ಓದಿ: ಸೈನಿಕ ಶಾಲೆ ಪ್ರವೇಶ: 6ನೇ ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ!

ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ರಾಜ್ಯಾದ್ಯಂತ ಏಕಕಾಲಕ್ಕೆ ನಡೆಯಲಿದೆ. ಮಾ.21ರಿಂದ ಏ.04ರವರೆಗೆ ಪರೀಕ್ಷೆ ನಡೆಯಲಿದ್ದು, ಶಾಲಾ ಅಭ್ಯರ್ಥಿ, ಪುನರಾವರ್ತಿತ ಶಾಲಾ ಅಭ್ಯರ್ಥಿ, ಖಾಸಗಿ ಅಭ್ಯರ್ಥಿ ಹಾಗೂ ಪುನರಾವರ್ತಿತ ಖಾಸಗಿ ಅಭ್ಯರ್ಥಿಗಳು ಏಕಕಾಲದಲ್ಲಿ ಪರೀಕ್ಷೆಯನ್ನು ಎದುರಿಸಲಿದ್ದಾರೆ. ಎಲ್ಲ ಪರೀಕ್ಷೆಗಳು ಬೆಳಗ್ಗೆ 10 ಗಂಟೆಗೆ ಆರಂಭವಾಗಿ ಮಧ್ಯಾಹ್ನ 1.15 ಗಂಟೆಗೆ ಮುಕ್ತಾಯಗೊಳ್ಳಲಿವೆ.

ಮಾರ್ಚ್/ಏಪ್ರಿಲ್ 2025ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ 1ರ ವೇಳಾಪಟ್ಟಿ ಇಲ್ಲಿದೆ
ಮಾ.21 - ಕನ್ನಡ (ಪ್ರಥಮ ಭಾಷೆಗಳು) 
ಮಾ.24 - ಗಣಿತ (ಐಚ್ಛಿಕ-ಸಮಾಜ ಶಾಸ್ತ್ರ)
ಮಾ.26 - ಇಂಗ್ಲೀಷ್ (ದ್ವಿತೀಯ ಭಾಷೆ - ಕನ್ನಡ..)
ಮಾ.29 - ಸಮಾಜ ವಿಜ್ಞಾನ
ಏ.02 - ವಿಜ್ಞಾನ
ಏ.04 - ಹಿಂದಿ (ತೃತೀಯ ಭಾಷೆಗಳು)

 

Latest Videos
Follow Us:
Download App:
  • android
  • ios