Asianet Suvarna News Asianet Suvarna News

PG NEET Counselling: ವೈದ್ಯಕೀಯ ಕೋರ್ಸ್ ಗಳಿಗೆ ಸೀಟು ಹಂಚಿಕೆ ಪ್ರಕ್ರಿಯೆ ಆರಂಭ, ಕೌನ್ಸಿಲಿಂಗ್ ವೇಳಾಪಟ್ಟಿ ಪ್ರಕಟ

2021ರಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸುಗಳ ಪ್ರವೇಶಾತಿಗೆಂದು ನಡೆಸಿದ್ದ `ನೀಟ್' (NEET) ಪರೀಕ್ಷೆಯನುಸಾರ ಮೊದಲನೇ ಸುತ್ತಿನ ಸೀಟು ಹಂಚಿಕೆ ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟವಾಗಿದೆ.

Karnataka NEET PGET Medical Mock Allotment Result Declared gow
Author
Bengaluru, First Published Jan 30, 2022, 8:53 PM IST

ಬೆಂಗಳೂರು(ಜ. 30): 2021ರಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸುಗಳ ಪ್ರವೇಶಾತಿಗೆಂದು ನಡೆಸಿದ್ದ `ನೀಟ್' (NEET) ಪರೀಕ್ಷೆಯನುಸಾರ ಮೊದಲನೇ ಸುತ್ತಿನ ಸೀಟು ಹಂಚಿಕೆ ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟವಾಗಿದ್ದು, ಶನಿವಾರ ಸೀಟ್ ಮ್ಯಾಟ್ರಿಕ್ಸ್ ಮತ್ತು ಶುಲ್ಕ ವಿವರ ಪ್ರಕಟಿಸಲಾಗಿದ್ದು, ದೃಢೀಕರಣ ಚೀಟಿಯನ್ನು ಡೌನ್-ಲೋಡ್ ಮಾಡಿಕೊಳ್ಳುವ ಪ್ರಕ್ರಿಯೆಯೂ ಆರಂಭವಾಗಿದೆ' ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examinations Authority) ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಬಗ್ಗೆ ಪ್ರಾಧಿಕಾರವು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, `ಫೆ.4ರಂದು ಈ ಮೂರೂ ಕೋರ್ಸುಗಳಿಗೆ ಮೊದಲ ಸುತ್ತಿನ ಸೀಟು ಹಂಚಿಕೆಯನ್ನು ಪ್ರಕಟಿಸಲಾಗುವುದು. ಇದಕ್ಕೂ ಮೊದಲು ಫೆ.1ರ ಬೆಳಗ್ಗೆ 10 ಗಂಟೆಯ ವರೆಗೆ ವಿದ್ಯಾರ್ಥಿಗಳಿಗೆ ತಮ್ಮ ಇಷ್ಟದ ಐಚ್ಛಿಕ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲು ಮತ್ತು ಫೆ.1ರಿಂದ 3ರ ಬೆಳಗ್ಗೆ 10 ಗಂಟೆಯ ವರೆಗೆ ತಮ್ಮ ಐಚ್ಛಿಕ ವಿಷಯಗಳಲ್ಲಿ ಅಗತ್ಯವೆನಿಸಿದರೆ ಬದಲಾವಣೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ' ಎಂದು ಹೇಳಿದೆ.

ಫೆ.4 ರಂದು ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕಟವಾಗಲಿದೆ. ಬಳಿಕ ಚಾಯ್ಸ್-1 ಮತ್ತು ಚಾಯ್ಸ್-2 ಸ್ತರದ ವಿದ್ಯಾರ್ಥಿಗಳು ನಿಗದಿತ ಶುಲ್ಕ ತುಂಬಿ, ಪ್ರವೇಶ ದಾಖಲಾತಿಯನ್ನು ಡೌನ್-ಲೋಡ್ ಮಾಡಿಕೊಳ್ಳಲು ಫೆ.4ರ ಮಧ್ಯಾಹ್ನ 2 ಗಂಟೆಯಿಂದ ಫೆ.7ರ ಮಧ್ಯಾಹ್ನ 1 ಗಂಟೆಯ ವರೆಗೆ ಅವಕಾಶವಿರುತ್ತದೆ. ನಂತರ, ವಿದ್ಯಾರ್ಥಿಗಳು ಒಂದು ಸೆಟ್ ದೃಢೀಕೃತ ಪ್ರಮಾಣಪತ್ರಗಳೊಂದಿಗೆ ಮೂಲ ದಾಖಲೆಗಳನ್ನು ಫೆ.5ರಿಂದ 7ರ ಒಳಗೆ ಬೆಂಗಳೂರಿನಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಪರಿಶೀಲನೆಗೆ ಸಲ್ಲಿಸಬೇಕು ಎಂದು ಪ್ರಕಟಣೆ ವಿವರಿಸಿದೆ.

HQ MADRAS ENGINEER GROUP RECRUITMENT 2022: 10TH,12TH, ITI ಪಾಸಾದವರು ಇಂದೇ ಅರ್ಜಿ ಸಲ್ಲಿಸಿ

ಎಸ್ಎಸ್ಎಲ್‌ಸಿ ಮುಖ್ಯಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಎಸ್ಎಸ್ಎಲ್ಸಿ ಮುಖ್ಯಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಮಾರ್ಚ್ 28ರಿಂದ ಏಪ್ರಿಲ್ 11ರವರೆಗೆ ಪರೀಕ್ಷೆಗಳು ನಡೆಯಲಿವೆ. ಪರೀಕ್ಷಾ ಸಮಯ ಬೆಳಗ್ಗೆ 10.30ರಿಂದ ಮಧ್ಯಾಹ್ನ 1.45. ಪ್ರತಿ ವಿಷಯಕ್ಕೂ ಪ್ರಶ್ನೆ ಪತ್ರಿಕೆ ಓದಲು 15 ನಿಮಿಷ ಕಾಲಾವಕಾಶ ನೀಡಲಾಗಿದೆ.
 ಕಳೆದ ವಾರ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಲಾಗಿದ್ದು,  ಮಾರ್ಚ್ 28 ರಿಂದ ಏಪ್ರಿಲ್ 11 ರವರೆಗೆ ಪರೀಕ್ಷೆಗಳನ್ನ ನಡೆಸಲು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ  ತೀರ್ಮಾನಿಸಿತ್ತು. 

ಯಾರಾದರೂ ಆಕ್ಷೇಪಣೆ ಸಲ್ಲಿಕೆ ಮಾಡಲು ಅವಕಾಶ ನೀಡಿತ್ತು. ಆದ್ರೆ, ಯಾರು ಆಕ್ಷೇಪಣ ಸಲ್ಲಿಸದಿದ್ದರಿಂದ ತಾತ್ಕಾಲಿಕವಾಗಿದ್ದನ್ನು ಅಂತಿಮಗೊಳಿಸಲಾಗಿದೆ.

ಅಂತಿಮ ವೇಳಾಪಟ್ಟಿ ಇಂತಿದೆ
ಮಾರ್ಚ್ 28- ಪ್ರಥಮ ಭಾಷೆ, 
ಮಾರ್ಚ್ 30-  ದ್ವಿತೀಯ ಭಾಷೆ ಇಂಗ್ಲೀಷ್, ಕನ್ನಡ
ಏಪ್ರಿಲ್ 1- ಅರ್ಥ ಶಾಸ್ತ್ರ, ಕೋರ್ ಸಬ್ಜೆಕ್ಟ್, 
ಏಪ್ರಿಲ್ 4- ಗಣಿತ, ಸಮಾಜಶಾಸ್ತ್ರ
ಏಪ್ರಿಲ್ 6- ಸಮಾಜ ವಿಜ್ಞಾನ
ಏ.8- ತೃತೀಯ ಭಾಷೆ
ಏ.11- ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ/ ಹಿಂದೂಸ್ತಾನಿ ಸಂಗೀತ ಪರೀಕ್ಷೆ ನಡೆಸಲು ತೀರ್ಮಾನಿಸಿದೆ. 

ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿ
2021-22ನೇ ಸಾಲಿನ ಕರ್ನಾಟಕ ಎಸ್‌ಎಸ್‌ಎಲ್‌ಸಿ( SSLC) ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿ(SSLC Preparatory Exam Time Table) ಪ್ರಕಟವಾಗಿದ್ದು, ಫೆಬ್ರವರಿ 21 ರಿಂದ 26 ರವರೆಗೆ SSLC ಪೂರ್ವ ಸಿದ್ಧತಾ ಪರೀಕ್ಷೆ ನಡೆಯಲಿವೆ. ಬೆಳಗ್ಗೆ 1.30ರಿಂದ ಮಧ್ಯಾಹ್ನ 1.45ರ ವರಗೆ ಪರೀಕ್ಷೆಗಳು ನಡೆಯಲಿವೆ.

ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಇಂತಿದೆ,
* 21-2-2022(ಪ್ರಥಮ ಭಾಷೆ: ಕನ್ನಡ, ತೆಲಗು, ತಮಿಳು, ಮರಾಠಿ, ಉರ್ದು, ಇಂಗ್ಲೀಷ್, ಸಂಸ್ಖ್ರತ, 
* 22-2-2022: ಸಮಾಜ ವಿಜ್ಞಾನ
*23-2-2022 (ದ್ವಿತೀಯ ಭಾಷೆ): ಇಂಗ್ಲೀಷ್, ಕನ್ನಡ 
* 24-2-2022: ಗಣಿತ
* 25-2-2022(ತೃತೀಯ ಭಾಷೆ): ಹಿಂದಿ, ಕನ್ನಡ, ಇಂಗ್ಲೀಷ್, ಅರೇಬಿಕ್, ಉರ್ದು, ಪರ್ಷಿಯನ್
*26-2-2022 (ಕೋರ್ ಸಬ್ಜೆಕ್ಟ್): ವಿಜ್ಞಾನ

BARC Recruitment 2022: ಬಿಇ, ಬಿ.ಟೆಕ್, ಬಿಎಸ್ಸಿ ಪದವೀಧರರಿಗೆ ಉದ್ಯೋಗವಕಾಶ

PUC ಪರೀಕ್ಷೆ ವೇಳಾಪಟ್ಟಿ ರಿಲೀಸ್
ಎಸ್‌ಎಸ್‌ಎಲ್‌ಸಿ(SSLC) ಬೆನ್ನಲ್ಲೇ ಇದೀಗ ದ್ವೀತಿಯ ಪಿಯುಸಿ ಪರೀಕ್ಷೆಯ(PUC Exams) ತಾತ್ಕಾಲಿಕ ವೇಳಾಪಟ್ಟಿ(Provisional Time Table) ಬಿಡುಗಡೆ ಮಾಡಲಾಗಿದೆ.

ಮಂಗಳವಾರ ಪದವಿ ಪೂರ್ವ ಶಿಕ್ಷಣ ಇಲಾಖೆ (PUC Board) 2021-22ನೇ ಸಾಲಿನ ದ್ವೀತಿಯ ಪಿಯುಸಿಯ (Second PUC) ತಾತ್ಕಾಲಿಕ ವೇಳಾಪಟ್ಟಿ (Exam Timetable) ಬಿಡುಗಡೆ ಮಾಡಿದೆ. 

ಪಿಯುಸಿ ವೇಳಾಪಟ್ಟಿ ಇಂತಿದೆ
ಏಪ್ರಿಲ್​ 14- ಗಣಿತ
ಏಪ್ರಿಲ್​ 18- ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
ಏ.20- ಇತಿಹಾಸ, ಭೌತಶಾಸ್ತ್ರ
ಏಪ್ರಿಲ್ 22- ತರ್ಕಶಾಸ್ತ್ರ
ಏ.23- ಮನಃಶಾಸ್ತ್ರ, ರಸಾಯನಶಾಸ್ತ್ರ, 
ಏ.25- ಅರ್ಥಶಾಸ್ತ್ರ
ಏ.26- ಹಿಂದಿ, 
ಏಪ್ರಿಲ್​​ 28- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ
 ಏ.29- ಕನ್ನಡ
 ಏ.30- ಸಮಾಜಶಾಸ್ತ್ರ, ಕಂಪ್ಯೂಟರ್​​ ಸೈನ್ಸ್​
 ಮೇ 2- ಭೂಗೋಳ ಶಾಸ್ತ್ರ ಹಾಗೂ ಜೀವಶಾಸ್ತ್ರ
 ಮೇ 4- ಇಂಗ್ಲಿಷ್​​ ಪರೀಕ್ಷೆ ನಡೆಯಲಿದೆ.

Follow Us:
Download App:
  • android
  • ios